Advertisment

ನಿತೀಶ್‌-ರಿಂಕು ಸಿಂಗ್ ಸ್ಫೋಟಕ ಹಾಫ್​ಸೆಂಚುರಿ.. ಬೆಚ್ಚಿಬಿದ್ದ ಬಾಂಗ್ಲಾ ಆಟಗಾರರು, ಸರಣಿ ಕೈವಶ

author-image
Bheemappa
Updated On
ನಿತೀಶ್‌-ರಿಂಕು ಸಿಂಗ್ ಸ್ಫೋಟಕ ಹಾಫ್​ಸೆಂಚುರಿ.. ಬೆಚ್ಚಿಬಿದ್ದ ಬಾಂಗ್ಲಾ ಆಟಗಾರರು, ಸರಣಿ ಕೈವಶ
Advertisment
  • ಟೀಮ್ ಇಂಡಿಯಾ ಬ್ಯಾಟರ್ಸ್​ ರನ್ ಭರಾಟೆ, ಬಾಂಗ್ಲಾಗೆ ನಿರಾಸೆ
  • ಸಂಕಷ್ಟದಲ್ಲಿದ್ದ ಟೀಮ್​ ಇಂಡಿಯಾಕ್ಕೆ ಆಸರೆಯಾದ ನಿತೀಶ್ ರೆಡ್ಡಿ​
  • ಜಬರ್ದಸ್ತ್ ಇನ್ನಿಂಗ್ಸ್ ಕಟ್ಟಿದ ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ

ಗ್ವಾಲಿಯರ್​ನಲ್ಲಿ ರನ್​ ಭರಾಟೆ ನಡೆಸಿದ್ದ ಟೀಮ್ ಇಂಡಿಯಾ, ದೆಹಲಿಯ ಅರುಣ್ ಜೇಟ್ಲಿಯಲ್ಲಿ ಆಕ್ಷರಶಃ ರನ್ ಸುನಾಮಿ ಸೃಷ್ಟಿಸಿದರು. ಟಾಪ್ ಆರ್ಡರ್ ವೈಫಲ್ಯದ ಹೊರತಾಗಿ ನಿತೀಶ್ ಕುಮಾರ್ ರೆಡ್ಡಿ ಸಿಡಿಲಬ್ಬರ ಬ್ಯಾಟಿಂಗ್​ ನಡೆಸಿದರು. ರಿಂಕು ಸಿಂಗ್, ಹಾರ್ದಿಕ್ ಜಬರ್ದಸ್ತ್ ಇನ್ನಿಂಗ್ಸ್​ ಮೂಲಕ ಸಖತ್ ಎಂಟರ್​ಟೈನ್ಮೆಂಟ್ ನೀಡಿದರು.

Advertisment

ಟೀಮ್ ಇಂಡಿಯಾದ ಟಾಪ್ ಆರ್ಡರ್ ವೈಫಲ್ಯ..!

ಬಾಂಗ್ಲಾ ಆಹ್ವಾನದಂತೆ ಬ್ಯಾಟಿಂಗ್​​ಗೆ ಆರಂಭಿಸಿದ ಟೀಮ್ ಇಂಡಿಯಾ, ಪವರ್​ ಪ್ಲೇನಲ್ಲಿ ಬಿಗ್ ಸ್ಕೋರ್ ಲೆಕ್ಕಚಾರದಲ್ಲಿತ್ತು. ಆದ್ರೆ, ಬಾಂಗ್ಲಾ ಬೌಲರ್​ಗಳು ಅದಕ್ಕೆ ಅಸ್ವಾಧವನ್ನೇ ನೀಡಲಿಲ್ಲ. 2ನೇ ಓವರ್​ನಲ್ಲೇ 10 ರನ್​ ಗಳಿಸಿದ್ದ ಸಂಜುಗೆ, ಟಸ್ಕಿನ್​ ಅಹ್ಮದ್ ಪೆವಿಲಿಯನ್ ಹಾದಿ ತೋರಿದರೆ. ಈ ಬೆನ್ನಲ್ಲೇ 15 ರನ್ ಗಳಿಸಿದ್ದ ಅಭಿಷೇಕ್ ಶರ್ಮಾಗೆ ತಂಝೀಮ್ ಶಾಕ್ ನೀಡಿದರು. ಬಳಿಕ ಬಂದ ಸೂರ್ಯ ಜಸ್ಟ್​ 8 ರನ್​​ಗಳಿಗೆ ಆಟ ಮುಗಿಸಿದರು. 41 ರನ್​ಗೆ 3 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿತು.

ಇದನ್ನೂ ಓದಿ: ತೆಲುಗು ಬಿಗ್​ಬಾಸ್​ನಲ್ಲಿ ಕನ್ನಡ ಧ್ವನಿ.. ಅಮ್ಮ-ಮಗನ ಬಾಂಧವ್ಯಕ್ಕೆ ವೀಕ್ಷಕರಲ್ಲಿ ಕಣ್ಣೀರು..! ವಿಡಿಯೋ

publive-image

ಸಿಡಿಲಬ್ಬರದ ಹಾಫ್ ಸೆಂಚುರಿ ಸಿಡಿಸಿದ ನಿತೀಶ್​..!

ಟಾಪ್ ಆರ್ಡರ್​ ಕುಸಿತದ ಬಳಿಕ ಟೀಮ್ ಇಂಡಿಯಾಗೆ ಆಸರೆಯಾಗಿದ್ದೆ ನಿತೀಶ್ ಕುಮಾರ್ ಹಾಗೂ ರಿಂಕು ಸಿಂಗ್. ಆರಂಭದಲ್ಲೇ ಸ್ಲೋ ಆ್ಯಂಡ್ ಸ್ಟಡಿ ಇನ್ನಿಂಗ್ಸ್​ ಕಟ್ಟಿದ ನಿತೀಶ್​, ನಂತರ ತೋರಿಸಿದ್ದು ವಿಶ್ವರೂಪ.

Advertisment

27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ನಿತೀಶ್ ರೆಡ್ಡಿ, ಅರ್ಧಶತಕದ ಬಳಿಕ ಮತ್ತಷ್ಟು ಆರ್ಭಟಿಸಿದರು. ಆದ್ರೆ, 4 ಬೌಂಡರಿ, 7 ಸಿಕ್ಸರ್​​ ಒಳಗೊಂಡ 74 ರನ್ ಗಳಿಸಿದ್ದಾಗ ಬಿಗ್ ಶಾಟ್ ಹೊಡೆಯಲು ಯತ್ನಿಸಿ ವಿಕೆಟ್​ ಒಪ್ಪಿಸಿದರು. ಇಂಟ್ರೆಸ್ಟಿಂಗ್ ಅಂದ್ರೆ, ಅತ್ಯದ್ಭುತ ಇನ್ನಿಂಗ್ಸ್​ನ ಮೊದಲ 14 ಎಸೆತಗಳಲ್ಲಿ 15 ರನ್ ಗಳಿಸಿದ್ದ ನಿತೀಶ್ ರೆಡ್ಡಿ, ಕೊನೆ 20 ಎಸೆತಗಳಲ್ಲಿ ಸಿಡಿಸಿದ್ದು ಬರೋಬ್ಬರಿ 59 ರನ್.

ರಿಂಕು ಫಿಫ್ಟಿ.. ಪಾಂಡ್ಯ-ಪರಾಗ್​ ಪವರ್ ಫುಲ್ ಬ್ಯಾಟಿಂಗ್..!

ನಿತೀಶ್ ರೆಡ್ಡಿ ಔಟಾದ ಬೆನ್ನಲ್ಲೇ ಚಾರ್ಜ್ ತೆಗೆದುಕೊಂಡ ರಿಂಕು ಸಿಂಗ್, ಬಾಂಗ್ಲಾ ಬೌಲರ್​ಗಳ ಬೆವರಿಳಿಸಿದರು. 26 ಎಸೆತಗಳಲ್ಲೇ ಅರ್ಧಶತಕ ಪೂರೈಸಿದ ರಿಂಕು ಸಿಂಗ್, 53 ರನ್ ​ಗಳಿಸಿ ಆಡುವಾಗ ಔಟ್ ಆದರು.

ಇದನ್ನೂ ಓದಿ:ಟೀಮ್ ಇಂಡಿಯಾ ಬೌಲರ್​ಗಳ ರಣಕೇಕೆ.. ಯಂಗ್ ಪ್ಲೇಯರ್ಸ್ ಮುಂದೆ ಬಾಂಗ್ಲಾ ವಿಲವಿಲ!

Advertisment

publive-image

ನಂತರ ಬಂದ ರಿಯಾನ್ ಪರಾಗ್​, 6 ಎಸೆತಗಳಲ್ಲಿ 15 ರನ್ ಸಿಡಿಸಿ ನಿರ್ಗಮಿಸಿದರೆ. ಪಾಂಡ್ಯ ಆಟ 32 ರನ್​ಗಳಿಗೆ ಅಂತ್ಯವಾಯ್ತು. ಅರ್ಷದೀಪ್ 6 ರನ್​ಗಳ ಕಾಣಿಕೆ ನೀಡಿದರು. ಇದರ ಪರಿಣಾಮವಾಗಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 221 ರನ್​ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು. ಟೀಮ್ ಇಂಡಿಯಾ ಬ್ಯಾಟರ್​ಗಳ ರನ್ ಭರಾಟೆಗೆ ಬಾಂಗ್ಲಾ ಬೌಲರ್​ಗಳಾದ ರಿಶದ್ ಹುಸೈನ್, ತನ್ಜೀಮ್ 50 ರನ್​​​​​​​​ ಬಿಟ್ಟುಕೊಟ್ಟು ದುಬಾರಿ ಬೌಲರ್​ಗಳೆನಿಸಿದರು.

ಪವರ್​ ಪ್ಲೇನಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದ ನಿತೀಶ್!

ಸಿಡಿಲಬ್ಬರದ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದಿದ್ದ ನಿತೀಶ್ ಕುಮಾರ್​​, ಪವರ್​ ಪ್ಲೇನಲ್ಲಿ ಅದ್ಭುತ ಬೌಲಿಂಗ್ ನಡೆಸಿದರು. 2ನೇ ಓವರ್​​ನಲ್ಲೇ ದಾಳಿಗಿಳಿದ ನಿತೀಶ್​, ಮೊದಲ ಓವರ್​ನಲ್ಲಿ ಕೇವಲ 6 ರನ್ ಬಿಟ್ಟುಕೊಟ್ಟರೆ. 2ನೇ ಓವರ್​ನಲ್ಲಿ 9 ರನ್ ನೀಡಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment