ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ವಿದ್ಯಾರ್ಥಿಗಳ ಆಗ್ರಹ
ಟ್ಯಾಬ್, ಲ್ಯಾಪ್‌ಟಾಪ್ ನೀಡಲೇಬೇಕು ಎಂದು ಒತ್ತಡ!
ಗ್ಯಾರಂಟಿ ಸ್ಕೀಮ್ ಎಫೆಕ್ಟ್ ನಮ್ಮ ಮೇಲ್ಯಾಕೆ? ಎಂದು ಪ್ರಶ್ನೆ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರೇ ನಮಗೆ ಟ್ಯಾಬ್ ಭಾಗ್ಯ ಕೊಡಿ! ಗ್ಯಾರಂಟಿ ಯೋಜನೆ ಎಫೆಕ್ಟ್ ಪದವಿ ವಿದ್ಯಾರ್ಥಿಗಳ ಮೇಲೇಕೆ? ಈ ಪ್ರಶ್ನೆಗಳು ನಮ್ಮದಲ್ಲ. ಭವಿಷ್ಯದ ಬಗ್ಗೆ ನೂರಾರು ಕನಸು ಹೊತ್ತು ಕಾಲೇಜು ಸೇರಿದ ವಿದ್ಯಾರ್ಥಿಗಳದ್ದು. ತಂತ್ರಜ್ಞಾನಕ್ಕೆ ಅನುಗುಣವಾಗಿ ಪದವಿ ವಿದ್ಯಾರ್ಥಿಗಳ ಹೆಚ್ಚಿನ ಓದಿಗೆ ಅನುಕೂಲ ಆಗಲಿ ಅಂತ ಈ ಹಿಂದೆ ಕ್ರಾಂಗ್ರೆಸ್ ಸರ್ಕಾರವೇ ಪರಿಚಯಿಸಿದ ಯೋಜನೆ ಟ್ಯಾಬ್ ಯೋಜನೆ. ಆದ್ರೆ, ಕಳೆದ ವರ್ಷ ಕೂಡ ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ ಭಾಗ್ಯ ಸಿಕ್ಕಿಲ್ಲ. ಈ ವರ್ಷವೂ ಅದೇ ಕಥೆ ಎನ್ನುವಂತಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಈವರೆಗೆ ಯೋಜನೆ ಕುರಿತಂತೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂಬುವುದು ಒಂದು ಕಡೆಯಾದ್ರೆ, ಯೋಜನೆಗೆ ಪ್ರತ್ಯೇಕ ಅನುದಾನ ಕೂಡ ಮೀಸಲಿಡದೇ ಇರುವುದು ಸದ್ಯ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
‘ಟ್ಯಾಬ್’ ಸಂಕಷ್ಟ
ಪದವಿ ಕೋರ್ಸ್ ಓದುವ ಮೊದಲ ವರ್ಷದ ಅಂದಾಜು 1.5 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಗೆ ಫಲಾನುಭವಿಗಳಾಗಿದ್ದಾರೆ. ಆದ್ರೆ, ಹಿಂದಿನ ಸರ್ಕಾರವೇ ಕಳೆದ ವರ್ಷ ಟ್ಯಾಬ್ ವಿತರಣೆ ಮಾಡದಿರುವುದರಿಂದ ಯೋಜನೆ ಪುನಾರಂಭ ಅನುಮಾನ ಎನ್ನಲಾಗ್ತಾಯಿದೆ. ಉತ್ತಮವಾದ ಟ್ಯಾಬ್ ವಿತರಿಸಲು ಒಂದಕ್ಕೆ ಕನಿಷ್ಠ 10-12 ಸಾವಿರ ರೂಪಾಯಿಗಳನ್ನು ವೆಚ್ಚ ಮಾಡಬೇಕಾಗುತ್ತದೆ. ಅಲ್ಲಿಗೆ 1.5 ಲಕ್ಷ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು 150 ರಿಂದ 160 ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ.
ಯೋಜನೆ ಆರಂಭ
ಸರ್ಕಾರಿ ಕಾಲೇಜುಗಳಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಪದವಿ, ವೃತ್ತಿಪರ ಕೋರ್ಸ್‌ಗಳಾದ ಇಂಜಿನಿಯರಿಂಗ್, ವೈದ್ಯಕೀಯ ಸೇರಿ ವಿವಿಧ ಕೋರ್ಸ್‌ಗಳನ್ನು ಮಾಡುವ ಮಕ್ಕಳಿಗೆ ಈ ಯೋಜನೆಯಲ್ಲಿ ಲ್ಯಾಪ್‌ಟಾಪ್ ನೀಡಲಾಗುತ್ತಿತ್ತು. ಪದವಿಯ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲು ಮೊದಲು ಕಾಂಗ್ರೆಸ್ ಸರ್ಕಾರ ಯೋಜನೆ ರೂಪಿಸಿತ್ತು. ನಂತರ ಬಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮತ್ತು ಆರಂಭದಲ್ಲಿ ಬಿಜೆಪಿ ಸರ್ಕಾರ ಕೂಡ 2019 ಮತ್ತು 2020ರಲ್ಲಿ ಲ್ಯಾಪ್‌ಟಾಪ್ ವಿತರಿಸಿರಲಿಲ್ಲ. ನಂತರ 2021ರಲ್ಲಿ ಬಿಜೆಪಿ ಸರ್ಕಾರವು ಲ್ಯಾಪ್‌ಟಾಪ್ ಬದಲಾಗಿ ಟ್ಯಾಬ್ ವಿತರಿಸಿ ಒಂದೇ ವರ್ಷಕ್ಕೆ ಯೋಜನೆ ಸ್ಥಗಿತಗೊಳಿಸಿದೆ.
ಒಟ್ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಿ, ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸೌಲಭ್ಯದ ಕಡೆಗೆ ಕಾಂಗ್ರೆಸ್ ಸರ್ಕಾರ ನಿರ್ಲಕ್ಷಿಸಿದೆ ಅನ್ನೋದು ವಿದ್ಯಾರ್ಥಿಗಳ ಆರೋಪ. ಇನ್ನಾದ್ರೂ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳು ಈ ಬಗ್ಗೆ ಚರ್ಚೆ ನಡೆಸಿ ವಿದ್ಯಾರ್ಥಿಗಳ ಓದಿಗೆ ನೆರವಾಗುವ ಕ್ರಮಕ್ಕೆ ಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ