/newsfirstlive-kannada/media/post_attachments/wp-content/uploads/2024/11/RETIRMENT-AGE.jpg)
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರ ಸರ್ಕಾರಿ ನೌಕರರ ನಿವೃತ್ತಿಯಾಗುವ ವಯಸ್ಸನ್ನು 62ಕ್ಕೆ ಏರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಪೋಸ್ಟ್ ಒಂದು ಹರಿದಾಡುತ್ತಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರದ ಸಚಿವರು ಹಾಗೂ ಕೆಲವು ರಾಷ್ಟ್ರೀಯ ಮಾಧ್ಯಮಗಳು ಬೇರೆಯನ್ನೇ ಹೇಳುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿ ಏನು ಅಂದ್ರೆ ಕೇಂದ್ರ ಸರ್ಕಾರ ಸೆಂಟ್ರಲ್ ಗವರ್ನಮೆಂಟ್​ ಜಾಬ್​ನಲ್ಲಿ ಇರುವ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಏರಿಸಿದೆ ಎಂಬುದು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರೆಸ್ ಇನ್ಫರ್ಮೇಷನ್ ಬ್ಯುರೊ ಆಫ್ ಗವರ್ನ್​ಮೆಂಟ್​, ಈ ರೀತಿಯಾದ ಯಾವ ನಿರ್ಧಾವನ್ನು ಕೆಂದ್ರ ಸರ್ಕಾರ ತೆಗೆದುಕೊಂಡಿಲ್ಲ. ಸರ್ಕಾರದ ಮುಂದೆ ಇಂತಹದೊಂದು ಪ್ರಸ್ತಾವನೆಯೂ ಕೂಡ ಬಂದಿಲ್ಲ ಹೇಳಿದೆ.
ಇದನ್ನೂ ಓದಿ:ಹೋಟೆಲ್​ನಲ್ಲಿ ಹಣ ಹಂಚುವಾಗ ಸಿಕ್ಕಿಬಿದ್ದ BJP ನಾಯಕರು.. ಪ್ರತಿಪಕ್ಷಗಳ ಆರೋಪ ಏನು?
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ಇದನ್ನು ಯಾರೂ ಕೂಡ ನಂಬಬಾರದು ಎಂದು ಪಿಐಬಿ ಹೇಳಿದೆ. ಈ ಹಿಂದೆ ಅಂದ್ರೆ ಕಳೆದ ವರ್ಷ ಆಗಸ್ಟ್ 23 ರಂದೇ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾಪ ಬಂದಿಲ್ಲ. ಸರ್ಕಾರವೂ ಕೂಡ ಇಂತಹ ಯಾವುದೇ ನಿರ್ಧಾರವನ್ನು ಮಾಡಿಲ್ಲ ಎಂದು ಹಲವು ಬಾರಿ ಹೇಳಿದ್ದಾರೆ. ಆದರೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ಸುದ್ದಿ ಹರಿದಾಡುತ್ತಿರುವುದು ಸತ್ಯಕ್ಕೆ ದೂರವಾದದ್ದು ಎಂದು ಹೇಳಲಾಗಿದೆ.
/newsfirstlive-kannada/media/post_attachments/wp-content/uploads/2024/11/RETIRMENT-AGE-1.jpg)
ನಾವು ಈಗಾಗಲೇ ಕ್ಯಾಬಿನೆಟ್​ ಮೀಟಿಂಗ್​ನಲ್ಲಿ ತೆಗೆದುಕೊಂಡು ನಿರ್ಧಾರವನ್ನ ಪ್ರೆಸ್ ಇನ್ಫಾರ್ಮೆಷನ್ ಬ್ಯುರೊಗೆ ನೀಡಿದ್ದೇವೆ.ಅದರಲ್ಲಿ ಯಾವುದೇ ರೀತಿ ನೌಕರರ ನಿವೃತ್ತಿಯ ವಯಸ್ಸಿನ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಈ ಬಾರಿ ನವೆಂಬರ್​ನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿದ್ಯಾಲಕ್ಷ್ಮೀ ಯೋಜನೆ ಸೇರಿ ಹಲವು ಯೋಜನೆಗಳ ಬಗ್ಗೆ ನಿರ್ಣಯಕ್ಕೆ ಬರಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
7ನೇ ವೇತನ ಆಯೋಗದಲ್ಲಿಯೂ ಕೂಡ ಈ ಬಗ್ಗೆ ಯಾವುದೇ ಪ್ರಸ್ತಾಪವಾಗಿಲ್ಲ. ಸದ್ಯ ಸೆಂಟ್ರಲ್ ಗವರ್ನಮೆಂಟ್​ನಲ್ಲಿ ಉದ್ಯೋಗ ಮಾಡುತ್ತಿರುವವರ ನಿವೃತ್ತಿಯ ವಯಸ್ಸು 60 ಇದೆ. 5ನೇ ವೇತನ ಆಯೋಗದಲ್ಲಿ 58 ರಿಂದ ನಿವೃತ್ತಿಯ ವಯಸ್ಸನ್ನು 60ಕ್ಕೆ ಏರಿಸಲಾಗಿತ್ತು. ಅದಾದ ಮೇಲೆ ಈ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಹಾಗೂ ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾಪಗಳು ಕೂಡ ಸಲ್ಲಿಕೆಯಾಗಿಲ್ಲ ಎಂದು ಹೇಳಲಾಗಿದೆ ಎಂದು ಪ್ರೆಸ್​ ಇನ್ಫಾರ್ಮೆಷನ್ ಬ್ಯುರೊ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us