newsfirstkannada.com

ಪ್ರಧಾನಿ ಮೋದಿ ಮಾತನಾಡಿಸಲು ಜಿದ್ದಿಗೆ ಬಿದ್ದ INDIA; ಸಂಸತ್​​ನಲ್ಲಿ ಇಂದು ವಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆ

Share :

26-07-2023

    ಪ್ರಧಾನಿ ಮೋದಿ ವಿರುದ್ಧ ವಿಪಕ್ಷಗಳಿಂದ ಮತ್ತೊಂದು ಅಸ್ತ್ರ

    2018ರಲ್ಲೂ ಮೋದಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

    ಮಣಿಪುರ ಹಿಂಸಾಚಾರವೇ ಇಷ್ಟಕ್ಕೆಲ್ಲ ಕಾರಣವಾಯ್ತಾ..?

ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಸಂಸತ್​​​ ಕಲಾಪದಲ್ಲಿ ಮಾತನಾಡಬೇಕು. ಇಡೀ ದೇಶ ಕೇಳುತ್ತಿರುವ ಪ್ರಶ್ನೆಗೆ ಉತ್ತರ ನೀಡಬೇಕು ಎಂದು ವಿರೋಧ ಪಕ್ಷಗಳ ನಾಯಕರು ಆಗ್ರಹಿಸುತ್ತಿದ್ದಾರೆ. ಮೋದಿ ಮಾತನಾಡದೇ ಇರೋದೇ ಇಡೀ ಮುಂಗಾರು ಅಧಿವೇಶನ ಯಾವುದೇ ಚರ್ಚೆ ಇಲ್ಲದೇ ಗಲಾಟೆ, ಗದ್ದಲದಲ್ಲೇ ಮುಗಿದು ಹೋಗಿದೆ. ಇದೀಗ ಎನ್​ಡಿಎ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತೃತ್ವದ ವಿಪಕ್ಷ ಮತ್ತೊಂದು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

ಹೌದು, ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಮುಂದಾಗಿದೆ. ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದಿಂದ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಿದ್ದಾರೆ.

ಅವಿಶ್ವಾಸ ನಿರ್ಣಯ

ಇಂದು ಬೆಳಗ್ಗೆ  10.30 ಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲ ಲೋಕಸಭಾ ಸದಸ್ಯರ ಸಭೆ ನಡೆಯಲಿದ್ದು, ಹೀಗಾಗಿ ಕಾಂಗ್ರೆಸ್ ಸಂಸದರಿಗೆ ವಿಪ್ ಜಾರಿ ಮಾಡಿದೆ. ಬಳಿಕ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಬಗ್ಗೆ ಮಂಡನೆ ಮಾಡಲಿದ್ದಾರೆ ಎಂದು ರಂಜನ್​ ಚೌಧರಿ ಹೇಳಿದ್ದಾರೆ.

ಸ್ಪಷ್ಟ ಬಹುಮತ‌

ಪ್ರಧಾನಿ ನರೇಂದ್ರ ಮೋದಿ ಮಣಿಪುರದ ಹಿಂಸಾಚಾರದ ಬಗ್ಗೆ ಉತ್ತರ ನೀಡಲಿ ಎಂದು ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ಮುಂದಾಗಿದ್ದಾರೆ. ಲೋಕಸಭೆಯಲ್ಲಿ ಮೋದಿ ಸರ್ಕಾರಕ್ಕೆ ಸ್ಪಷ್ಟ ಬಹುಮತ‌ ಇದೆ. ಅವಿಶ್ವಾಸ ನಿರ್ಣಯದ ಮೂಲಕ ಸರ್ಕಾರದ ಪತನ ಸಾಧ್ಯವಿಲ್ಲ. ಈ ಹಿಂದೆ 2018 ರಲ್ಲಿ ಟಿಡಿಪಿ ಪಕ್ಷ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು.

ವಿರೋಧ ಪಕ್ಷಗಳು

ಪ್ರಧಾನಿ ನರೇಂದ್ರ ಮೋದಿಯೇ 2018 ರಲ್ಲೇ 2023 ರಲ್ಲೂ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿ ಎಂದಿದ್ದರು. ಇದೀಗ ಮೋದಿ ಮಾತಿನಂತೆ 2023 ರಲ್ಲೂ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲು ವಿರೋಧ ಪಕ್ಷಗಳು ಮುಂದಾಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೋದಿ ಮಾತನಾಡಿಸಲು ಜಿದ್ದಿಗೆ ಬಿದ್ದ INDIA; ಸಂಸತ್​​ನಲ್ಲಿ ಇಂದು ವಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆ

https://newsfirstlive.com/wp-content/uploads/2023/07/Modi-17.jpg

Load More