ಅಧ್ಯಕ್ಷೀಯ ಡಿಬೆಟ್ ಕಾರ್ಯಕ್ರಮದಲ್ಲಿ ಕಮಲಾ ಹ್ಯಾರಿಸ್ ಬ್ಲ್ಯೂಟೂಥ್ ಬಳಸಿದ್ರಾ?
ಅಮೆರಿಕಾದ ಉಪಾಧ್ಯಕ್ಷೆಯ ಮೇಲೆ ಹುಟ್ಟಿಕೊಂಡಿರುವ ಅನುಮಾನಗಳೇನು?
ಕಮಲಾ ಹ್ಯಾರಿಸ್ ಹಾಕಿಕೊಂಡಿದ್ದು ಕೇವಲ ಇಯರ್ ರಿಂಗಾ ಇಲ್ಲವೇ ಬ್ಲ್ಯೂಟೂಥ್?
ವಾಷಿಂಗ್ಟನ್: ಕಳೆದ ಸೆಪ್ಟಂಬರ್ 10ರಂದು ಡೆಮಾಕ್ರಟಿಕ್ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಅಭ್ಯರ್ಥಿಗಳ ನಡುವೆ ಅಧ್ಯಕ್ಷೀಯ ಡಿಬೆಟ್ ನಡೀತು. ಆ ಬಳಿಕ ಕಮಲಾ ಹ್ಯಾರಿಸ್ ಇಯರ್ ರಿಂಗ್ ಬಗ್ಗೆ ಹಲವು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಕಮಲಾ ಹ್ಯಾರಿಸ್ ಡಿಬೇಟ್ ವೇಳೆ ಕಿವಿಯೋಲೆಯಲ್ಲಿ ಬ್ಲೂಟೂಥ್ ಇಟ್ಟುಕೊಂಡಿದ್ದರು. ಬ್ಲ್ಯೂಟೂಥ್ ಇಟ್ಟುಕೊಂಡು ಸಂಪೂರ್ಣ ಡಿಬೆಟ್ನಲ್ಲಿ ಭಾಗವಹಿಸಿದ್ರು ಎಂಬ ಮಾತುಗಳು ಕೇಳಿ ಬಂದಿದ್ದವು. ಈ ವಿವಾದಕ್ಕೆ ಈಗ ತೆರೆ ಬಿದ್ದಿದೆ. ಅಸಲಿಗೆ ಕಮಲಾ ಹ್ಯಾರಿಸ್ ನಿಜಕ್ಕೂ ಕಿವಿಯಲ್ಲಿ ಬ್ಲ್ಯೂಟೂಥ್ ಹಾಕಿಕೊಂಡಿದ್ರಾ ಅಥವಾ ಇಲ್ಲವ ಅನ್ನೋದರ ಬಗ್ಗೆ ಅನೇಕ ಫ್ಯಾಕ್ಟ್ ಚೆಕ್ಗಳು ನಡೆದಿವೆ.
ಇದನ್ನೂ ಓದಿ: VIDEO: ಕಮಲಾ ಹ್ಯಾರಿಸ್ ಚುನಾವಣೆ ಪ್ರಚಾರ ಸಭೆಯಲ್ಲಿ ಡಿಸಿಎಂ ಡಿಕೆಶಿ ಭಾಗಿ; ಹೇಳಿದ್ದೇನು?
ರೈಟರ್ಸ್ ಸುದ್ದಿ ಸಂಸ್ಥೆಯೂ ಕೂಡ ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದೆ. ಸದ್ಯ ಕಮಲಾ ಹ್ಯಾರಿಸ್ ಅವರ ಇಯರ್ ರಿಂಗ್ ದೊಡ್ಡ ಸದ್ದು ಮಾಡುತ್ತಿದೆ. ಅವರು ಇಯರ್ಪೀಸ್ ಇರುವ ಸ್ಮಾರ್ಟ್ ಇಯರ್ ರಿಂಗ್ ಧರಿಸಿದ್ದರು ಅಂತ ಅವರ ಕಿವಿ ಜೂಮ್ ಮಾಡಿದ ಹಾಗೂ ಅವರ ಕಿವಿಯೋಲೆಯನ್ನು ಮಾರ್ಕ್ ಮಾಡಿದ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಗಾಳಿ ಸುದ್ದಿಯ ಬೆನ್ನಟ್ಟಿದ ಮಾಧ್ಯಮ ಸಂಸ್ಥೆಗಳು ಸಂಶೋಧನೆ ಮಾಡಿದಾಗ ಕಂಡು ಬಂದ ಅಸಲಿಯತ್ತೇ ಬೇರೆ.
ಇದನ್ನೂ ಓದಿ: ಬಾಹ್ಯಾಕಾಶದಿಂದ ಸುದ್ದಿಗೋಷ್ಟಿ! ಸುನಿತಾ, ವಿಲ್ಮೋರ್ ಹೇಗೆ ಕಾಣ್ತಿದ್ದರು..? VIDEO
2013ರಲ್ಲಿಯೇ ನೋವಾ ಹೆಚ್1 ಅನ್ನೊ ಬ್ರ್ಯಾಂಡ್ ಇಯರ್ರಿಂಗ್ ಬ್ಲ್ಯೂಟೂಥ್ ಮಾದರಿಯಲ್ಲಿಯೇ ಇದೆ. ಅದನ್ನು ನೋಡಿದಾಗ ಸಹಜವಾಗಿ ಇದು ಇಯರ್ ಬಡ್ ಅಂತಲೇ ಅನಿಸುತ್ತೆ. ಕಮಲಾ ಹ್ಯಾರಿಸ್ ಹಾಕಿಕೊಂಡಿದ್ದು ನೋವಾ ಹೆಚ್1 ಕಂಪನಿಯ ಇಯರ್ ರಿಂಗ್ ಅದರಲ್ಲಿ ಯಾವುದೇ ಡಿವೈಸ್ಗಳು ಇರಲಿಲ್ಲ. ಸದ್ಯ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಎಂದು ಹೇಳಲಾಗಿದೆ.
ಇದೇ ಮಾದರಿಯ ಇಯರ್ ರಿಂಗ್ನ್ನು ಕಮಲಾ ಹ್ಯಾರಿಸ್ ಇದೇ ವರ್ಷದಲ್ಲಿ ಅನೇಕ ಬಾರಿ ಧರಿಸಿರುವ ಬಗ್ಗೆ ಉದಾಹರಣೆಗಳಿವೆ. ಹೀಗಾಗಿ ಇದು ಸ್ಮಾರ್ಟ್ ಇಯರ್ ರಿಂಗ್ ಅಲ್ಲ. ಸಾಮಾನ್ಯವಾದ ಒಂದು ಕಿವಿಯೊಲೆ ಎಂದು ಸ್ಪಷ್ಟನೆ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ