ಚಂದ್ರಶೇಖರ್ ರಾವ್ 59 ಕೋಟಿ ರೂಪಾಯಿ ಚಿರಾಸ್ತಿ, ಸ್ಥಿರಾಸ್ತಿ ಒಡೆಯ
ತೆಲಂಗಾಣ ಮುಖ್ಯಮಂತ್ರಿ ಬಳಿ ಕಾರಿಲ್ಲ, ಒಂದು ಭೂಮಿಯೂ ಇಲ್ಲ!
ಸಿಎಂ ಕೆಸಿಆರ್ ಪತ್ನಿ ಶೋಭಾ ಅವರ ಹೆಸರಿನಲ್ಲಿ 7 ಕೋಟಿ ಚಿರಾಸ್ತಿ
ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಸಿಎಂ ಕೆ. ಚಂದ್ರಶೇಖರ್ ಅವರು ತಮ್ಮ ಆಸ್ತಿ ವಿವರವನ್ನು ಪ್ರಕಟಿಸಿದ್ದಾರೆ. ಕಾರನ್ನೇ ಪಕ್ಷದ ಚಿಹ್ನೆಯಾಗಿ ಇಟ್ಟುಕೊಂಡಿರೋ ಸಿಎಂ ಕೆಸಿಆರ್ ಬಳಿ ಒಂದೇ ಒಂದು ಸ್ವಂತ ಕಾರಿಲ್ಲ. ಅಷ್ಟೇ ಅಲ್ಲ ನಾನು ರೈತ. ಚುನಾವಣೆಯಲ್ಲಿ ಸೋತರೇ ಕೃಷಿಕನಾಗುತ್ತೇನೆ ಅಂತ ಕೆಸಿಆರ್ ಪ್ರಚಾರದಲ್ಲಿ ಹೇಳುತ್ತಾರೆ. ಆದರೆ ಮುಖ್ಯಮಂತ್ರಿ ಬಳಿ ಒಂದೇ ಒಂದು ತುಂಡು ಭೂಮಿಯೂ ಇಲ್ಲ ಎಂದು ತಮ್ಮ ಆಸ್ತಿ ವಿವರದಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ.
ಸಿಎಂ ಕೆಸಿಆರ್ ಅವರು ಗಜ್ವಲ್ ಹಾಗೂ ಕಾಮರೆಡ್ಡಿ ಎರಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿ ತಮ್ಮ ಆಸ್ತಿ ವಿವರಣೆಯನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಸಿಎಂ ಕೆ. ಚಂದ್ರಶೇಖರ್ ರಾವ್ ಅವರು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದು, 59 ಕೋಟಿ ರೂಪಾಯಿ ಚಿರಾಸ್ತಿ, ಸ್ಥಿರಾಸ್ತಿಯನ್ನು ಹೊಂದಿದ್ದಾರೆ.
ಸಿಎಂ ಕೆಸಿಆರ್ ಪತ್ನಿ ಶೋಭಾ ಅವರ ಹೆಸರಿನಲ್ಲಿ 7 ಕೋಟಿ ಚಿರಾಸ್ತಿ ಇದೆ. ಇವರ ಬಳಿ 2.81 ಕೆಜಿ ಚಿನ್ನ ಇದೆ. ವಜ್ರ ಸೇರಿದಂತೆ 1.5 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ. ಕೆ. ಚಂದ್ರಶೇಖರ್ ರಾವ್ ಅವರು 8.50 ಕೋಟಿ ರೂಪಾಯಿ ಸ್ಥಿರ ಆಸ್ತಿಯನ್ನು ಹಾಗೂ ಕುಟುಂಬಸ್ಥರ ಹೆಸರಲ್ಲಿ 15 ಕೋಟಿ ರೂಪಾಯಿ ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ. ಮಾರ್ಚ್ 31, 2023ಕ್ಕೆ ಸಿಎಂ ಕೆಸಿಆರ್ ಅವರು 1.60 ಕೋಟಿ ರೂಪಾಯಿ ಐಟಿ ರಿಟರ್ನ್ಸ್ ಸಲ್ಲಿಸಿದ್ದಾರೆ.
ತೆಲಂಗಾಣ ಸಿಎಂ ಚಂದ್ರಶೇಖರ್ ವಿರುದ್ಧ 9 ಪ್ರಕರಣಗಳು ಬಾಕಿ ಉಳಿದಿದೆ. ಅವುಗಳೆಲ್ಲವೂ ತೆಲಂಗಾಣ ಪ್ರತ್ಯೇಕ ರಾಜ್ಯದ ಹೋರಾಟದ ಸಂದರ್ಭದಲ್ಲಿ ದಾಖಲಾಗಿದ್ದು, ಯಾವುವು ಕ್ರಿಮಿನಲ್ ಅಪರಾಧಗಳಲ್ಲ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ