/newsfirstlive-kannada/media/post_attachments/wp-content/uploads/2024/11/RAM-LALLA.jpg)
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಗೊಂಡು ಮುಂದಿನ ಜನವರಿ 22 ಕ್ಕೆ ಬರೊಬ್ಬರಿ ಒಂದು ವರ್ಷವಾಗುತ್ತದೆ. ಐನೂರು ವರ್ಷಗಳ ಕಾಯುವಿಕೆ ಕೊನೆಗೊಂಡು ಶ್ರೀರಾಮ ಜನ್ಮಭೂಮಿಯಲ್ಲಿಯೇ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿ ಅಂದಿಗೆ ಒಂದು ವರ್ಷ ಪೂರ್ಣಗೊಳ್ಳುತ್ತದೆ. ಈ ಭಾರಿ ವರ್ಷಾಚರಣೆ ಅದ್ಧೂರಿಯಾಗಿ ನಡೆಯಲಿದೆ ಎಂಬ ಭರವಸೆಯಲ್ಲಿ ರಾಮಭಕ್ತರು ಖುಷಿಯಲ್ಲಿ ಇದ್ದರು. ಆದ್ರೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಜನವರಿ 22 ರಂದು ವರ್ಷಾಚರಣೆ ಮಾಡುವುದಿಲ್ಲ. ಅದರ ಬದಲು ಬೇರೆ ದಿನಾಂಕದಂದು ವರ್ಷಾಚರಣೆಯ ಹಬ್ಬವನ್ನು ಆಯೋಜಿಸಲಾಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಶಬರಿಮಲೆ ಅಯ್ಯಪ್ಪನ 18 ಮೆಟ್ಟಿಲುಗಳಿಗೆ ಪೊಲೀಸರ ಅಪಚಾರ.. ಭಾರೀ ಆಕ್ರೋಶ; ಆಗಿದ್ದೇನು?
ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನೀಡಿರುವ ಮಾಹಿತಿ ಪ್ರಕಾರ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಯ ವರ್ಷಾಚರಣೆಯನ್ನು ಜನವರಿ 11 ರಂದೇ ಆಚರಿಸಲು ನಿರ್ಧಾರ ಮಾಡಿದೆ. ರಾಮಜನ್ಮಭೂಮಿಯಲ್ಲಿ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾಗಿದ್ದು 22 ಜನವರಿ 2024ರಂದು. ಪ್ರಧಾನಿ ನರೇಂದ್ರ ಮೋದಿಯವರಿಂದ ಪೂಜಾ ವಿಧಿ ವಿಧಾನಗಳು ನಡೆದಿದ್ದವು. ಇಡೀ ದೇಶವೇ ಅದನ್ನು ಅಪ್ಪಟ ಹಬ್ಬಂದಂತೆ ಸಡಗರಿಂದ ಸಂಭ್ರಮಿಸಿತ್ತು. ಪ್ರತಿವರ್ಷವೂ ಈ ದಿನವನ್ನು ದೀಪಾವಳಿಯ ಹಾಗೆಯೇ ಆಚರಿಸಲು ಸಿದ್ಧತೆ ನಡೆಸಿತ್ತು. ಆದ್ರೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಜನವರಿ 22 ಅಲ್ಲ, ಜನವರಿ 11 ರಂದು ವರ್ಷಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ:ISKCON ನಿಷೇಧಕ್ಕೆ ನಿರ್ಧಾರ..! ಬಾಂಗ್ಲಾದೇಶದಲ್ಲಿ ಮುಂದುವರಿದ ದಬ್ಬಾಳಿಕೆ.. ಖಂಡಿಸಿದ ಭಾರತ!
ಇದಕ್ಕೆ ಕಾರಣವನ್ನು ತೆರೆದಿಟ್ಟಿರುವ ಅಯೋಧ್ಯಾ ರಾಮ ಮಂದಿರದ ಟ್ರಸ್ಟ್​ನವರು. ಹಿಂದೂ ಪಂಚಾಗದ ಪ್ರಕಾರವೇ ವರ್ಷಾಚರಣೆಯನ್ನು ಮಾಡಲಾಗುತ್ತದೆ. ಹೀಗಾಗಿ ದಿನಾಂಕ ಜನವರಿ 22ಕ್ಕಿಂತ ಮುಂಚೆಯೇ ಬಂದಿದೆ. ಪೌಶ್​ ಶುಕ್ಷ ದ್ವಾದಶಿಯಂದೇ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿತ್ತು. ಇದನ್ನು ಕೂರ್ಮ ದ್ವಾದಶಿ ಅಂತಲೂ ಕರೆಯುತ್ತಾರೆ. 2025ರಲ್ಲಿ ಇದು ಜನವರಿ 11 ರಂದು ಬಂದಿರುವ ಕಾರಣ ಜನವರಿ 11ರಂದೇ ವರ್ಷಾಚರಣೆ ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆಗಳು ನಡೆದಿವೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us