newsfirstkannada.com

ಪೋಷಕರೇ ಎಚ್ಚರ; ಡೇ ಕೇರ್​ ಸೆಂಟರ್​​ನಲ್ಲಿ ಮಕ್ಕಳಿಗಿಲ್ಲ ಸೇಫ್ಟಿ; ಅಸಲಿಗೆ ಆಗಿದ್ದೇನು?

Share :

22-06-2023

    ಮಕ್ಕಳನ್ನು ಡೇ ಕೇರ್​​ನಲ್ಲಿ ಬಿಟ್ಟು ಹೋಗುವ ಪೋಷಕರೇ ಎಚ್ಚರ

    ಬೆಂಗಳೂರಿನ ಡೇ ಕೇರ್ ಸೆಂಟರ್​​​ವೊಂದರಲ್ಲಿ ಮಕ್ಕಳಿಗಿಲ್ಲ ಸೇಫ್ಟಿ!

    ಡೇ ಕೇರ್​​ ಬಗ್ಗೆ ಬೆಂಗಳೂರು ಪೋಷಕರು ಓದಲೇಬೇಕಾದ ಸ್ಟೋರಿ

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದ ಮಧ್ಯೆ ಜನರ ಜೀವನ ವಿಧಾನವೇ ಬದಲಾಗಿದೆ. ಇಡೀ ದಿನ ಕೆಲಸದಲ್ಲೇ ಬ್ಯುಸಿಯಾಗಿರೋ ಪೋಷಕರು ತಮ್ಮ ಮಕ್ಕಳನ್ನು ಡೇ ಕೇರ್​ನಲ್ಲಿ ಬಿಟ್ಟು ಹೋಗೋ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಗಂಡ ಹೆಂಡತಿ ಇಬ್ಬರೇ ವಾಸಿಸುತ್ತಾರೆ. ಇವರಿಗೆ ಫ್ಯಾಮಿಲಿ ಸಪೋರ್ಟ್​​ ಇರುವುದಿಲ್ಲ. ಜತೆಗೆ ದುಡಿಯಲೇಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ 4 ವರ್ಷ ಒಳಗಿನ ಮಕ್ಕಳನ್ನು ಒಂಟಿಯಾಗಿ ಬಿಟ್ಟು ಹೋಗುವುದು ಕಷ್ಟಕರ. ಅದಕ್ಕೆ ಡೇ ಕೇರ್​ ಸೆಂಟರ್​ಗಳು ಆರಂಭವಾಗಿದ್ದು. ಮಕ್ಕಳನ್ನು ಪೂರ್ತಿ ದಿನ ಆರೈಕೆ ಮಾಡುವ ಜವಬ್ದಾರಿ ಈ ಡೇ ಕೇರ್​​ನದ್ದು. ಹೀಗಿರುವಾಗ ಪೋಷಕರು ಬೆಚ್ಚಿಬೀಳುವ ಘಟನೆಯೊಂದು ನಡೆದಿದೆ.

ಡೇ ಕೇರ್​ ಸೆಂಟರ್​ಗಳಲ್ಲಿ ನಿಶ್ಚಿಂತೆಯಿಂದ ಮಕ್ಕಳನ್ನು ಬಿಟ್ಟು ಕೆಲಸ ಮಾಡಬಹುದು ಎಂದು ಭಾವಿಸಿದ್ದ ಪೋಷಕರಿಗೆ ಈ ಘಟನೆ ಆಘಾತ ತಂದಿದೆ. ಚಿಕ್ಕಲಸಂದ್ರದಲ್ಲಿರೋ ಡೇ ಕೇರ್​​ವೊಂದರಲ್ಲಿ ಮಕ್ಕಳನ್ನು ಆರೈಕೆ ಮಾಡಲು ಯಾರು ಇರಲಿಲ್ಲ. ಇದರಿಂದ ಇಬ್ಬರು ಮಕ್ಕಳು ಕಿತ್ತಾಡಿಕೊಂಡ ಘಟನೆ ನಡೆದಿದೆ. ಡೇ ಕೇರ್​ ಸೆಂಟರ್​​ನಲ್ಲಿ ಯಾರು ಇರದ ಕಾರಣ ಮಗುವೊಂದು ಇನ್ನೊಂದು ಮಗುವಿನ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್​ ಆಗಿದೆ. ಹೀಗಾಗಿ ಡೇ ಕೇರ್​​ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಸಲಿಗೆ ಆಗಿದ್ದೇನು..?

ಡೇ ಕೇರ್​ ಸೆಂಟರ್​​ನಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಅಳುತ್ತಿದ್ದ ಮಗುವೊಂದನ್ನು ತೆಗೆದುಕೊಂಡು ರೂಮ್​ನಿಂದ ಹೊರಗೆ ಹೋಗುತ್ತಾರೆ. ಈ ವೇಳೆ ಇಬ್ಬರು ಮಕ್ಕಳ ಕಿತ್ತಾಡುತ್ತವೆ. ಅದರಲ್ಲೂ ಮಗುವೊಂದು ಇನ್ನೊಂದು ಮಗುವನ್ನು ತಳ್ಳುವುದು ನೂಕುವ ಕೆಲಸ ಮಾಡುತ್ತದೆ. ಸುಮಾರು 4 ನಿಮಿಷಗಳ ಕಾಲ ಹೀಗೆ ಆಗುತ್ತದೆ. ಹೀಗಿದ್ದರೂ ಯಾರು ದೊಡ್ಡವರು ಕಿತ್ತಾಡುತ್ತಿದ್ದ ಮಕ್ಕಳನ್ನು ನೋಡಿಕೊಳ್ಳಲು ಇರಲಿಲ್ಲ. ದುಡ್ಡು ಕೊಟ್ಟು ಡೇ ಕೇರ್​ ಸೆಂಟರ್​ಗೆ ಮಕ್ಕಳನ್ನು ಕಳಿಸೋ ಪೋಷಕರಿಗೆ ಇದು ಆತಂಕ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರೇ ಎಚ್ಚರ; ಡೇ ಕೇರ್​ ಸೆಂಟರ್​​ನಲ್ಲಿ ಮಕ್ಕಳಿಗಿಲ್ಲ ಸೇಫ್ಟಿ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2023/06/children.jpg

Load More