ಒಂದು ಕಡೆ ಖಲಿಸ್ತಾನಿಗಳು ಮತ್ತೊಂದು ಕಡೆ ಅನಿವಾಸಿ ಭಾರತೀಯರು
ಕೆನಡಾದಲ್ಲಿ ಕೈ, ಕೈ ಮಿಲಾಯಿಸೋ ಹಂತಕ್ಕೆ ತಲುಪಿದ 2 ಬಣದ ಆಕ್ರೋಶ
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ರೋಡಿಗಳಿದ ಖಲಿಸ್ತಾನಿ ಬೆಂಬಲಿಗರು
ಟೊರೊಂಟೊ: ಖಲಿಸ್ತಾನಿ ಪರ ಬೆಂಬಲಿಗರು ಮತ್ತೊಮ್ಮೆ ತಮ್ಮ ಉದ್ಧಟತನ ಪ್ರದರ್ಶಿಸಿದ್ದಾರೆ. ಆದ್ರೆ ಈ ಬಾರಿ ಖಲಿಸ್ತಾನಿ ಬೆಂಬಲಿಗರು ಪ್ರತಿಭಟನೆಗಿಳಿಯುತ್ತಿದ್ದಂತೆ ಅನಿವಾಸಿ ಭಾರತೀಯರು ಅಖಾಡಕ್ಕಿಳಿದಿದ್ದು, ವಂದೇ ಮಾತರಂ ಘೋಷಣೆ ಕೂಗುತ್ತಾ ತ್ರಿವರ್ಣ ಧ್ವಜ ಹಾರಿಸಿ ಸೆಡ್ಡು ಹೊಡೆದಿದ್ದಾರೆ. ರಸ್ತೆಯ ಒಂದು ಬದಿಯಲ್ಲಿ ಖಲಿಸ್ತಾನಿಗಳು ಮತ್ತೊಂದು ಕಡೆ ಅನಿವಾಸಿ ಭಾರತೀಯರ ಶಕ್ತಿ ಪ್ರದರ್ಶನಕ್ಕೆ ಕೆನಡಾದ ಟೊರೊಂಟೊ ನಗರ ಸಾಕ್ಷಿಯಾಗಿದೆ.
ಟೊರೊಂಟೊದಲ್ಲಿ ಖಲಿಸ್ತಾನಿ ಬೆಂಬಲಿಗರು ತಮ್ಮ ಬಂಡಾಯದ ಬಾವುಟ ಹಿಡಿದು ಭಾರತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲು ಮುಂದಾಗುತ್ತಾರೆ. ತಕ್ಷಣ ಅದೇ ಜಾಗಕ್ಕೆ ಧಾವಿಸಿದ ಅನಿವಾಸಿ ಭಾರತೀಯರು ರಸ್ತೆಯ ಮತ್ತೊಂದು ಬದಿಯಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತಾ ದೇಶಪ್ರೇಮ ಮೆರೆದಿದ್ದಾರೆ. ಎರಡೂ ಬಣದ ಆಕ್ರೋಶದ ಮಧ್ಯೆ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡೂ ಬಣದ ಉದ್ರಿಕ್ತರನ್ನ ನಿಯಂತ್ರಿಸಲು ಮುಂದಾಗಿದ್ದಾರೆ. ಒಂದು ಹಂತದಲ್ಲಿ ಅನಿವಾಸಿ ಭಾರತೀಯರು ಖಲಿಸ್ತಾನಿ ಬೆಂಬಲಿಗರ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆಕ್ರೋಶಿತರನ್ನ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಸಾಕಷ್ಟು ಹರಸಾಹಸ ಪಟ್ಟಿದೆ.
ಟೊರೊಂಟೊ ನಗರದದಲ್ಲಿ ನಡೆದಿರುವ ಈ ಧ್ವಜ ಹಾರಾಟದ ಯುದ್ಧ ನಿಜಕ್ಕೂ ರೋಚಕವಾಗಿದೆ. ಖಲಿಸ್ತಾನಿ ಬೆಂಬಲಿಗರಿಗೆ ಅನಿವಾಸಿ ಭಾರತೀಯರು ಸೆಡ್ಡು ಹೊಡೆದಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಲಿಸ್ತಾನಿ ಬೆಂಬಲಿಗರಿಗೆ ಭಾರತೀಯರು ಬುದ್ಧಿ ಕಲಿಸಿದ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ಕಳೆದ ಜೂನ್ 18ರಂದು ಇಂಗ್ಲೆಂಡ್‌ನಲ್ಲಿ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆ ಆಗಿತ್ತು. ಈ ಹತ್ಯೆಯನ್ನು ಖಂಡಿಸಿ ಖಲಿಸ್ತಾನಿ ಬೆಂಬಲಿಗರು ಹಲವು ದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ಲಂಡನ್‌ನ ಭಾರತೀಯ ಹೈ ಕಮಿಷನ್ ಕಟ್ಟಡದ ಮುಂದೆ ಖಲಿಸ್ತಾನಿ ಬೆಂಬಲಿಗರು ಹೋರಾಟ ನಡೆಸಿದ್ದರು. ಹರ್ದೀಪ್ ಸಿಂಗ್ ಪೋಸ್ಟರ್‌ಗಳನ್ನ ಹಿಡಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೆನಡಾದ ಟೊರೊಂಟೊದಲ್ಲಿ ಖಲಿಸ್ತಾನಿ ಬೆಂಬಲಿಗರು ಹೋರಾಟ ನಡೆಸುವಾಗ ಅನಿವಾಸಿ ಭಾರತೀಯರು ರಸ್ತೆಯ ಮತ್ತೊಂದು ಬದಿಯಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತಾ ದೇಶಪ್ರೇಮ ಮೆರೆದಿದ್ದಾರೆ. #NewsFirstKannada #Newsfirstlive #KannadaNews #IndianFlag pic.twitter.com/DLuJkrHgZZ
— NewsFirst Kannada (@NewsFirstKan) July 9, 2023