newsfirstkannada.com

WATCH: ಅಮೆರಿಕಾದಲ್ಲಿ ಅಕ್ಕಿಗೆ ಹಾಹಾಕಾರ; ಶಾಪಿಂಗ್ ಮಾಲ್‌ ಒಳಗೆ ನೂಕುನುಗ್ಗಲು, ಹೊರಗೆ ಉದ್ದುದ್ದ ಕ್ಯೂ

Share :

22-07-2023

    ಆಂಧ್ರ, ಕರ್ನಾಟಕ ಮೂಲದ ಭಾರತೀಯರಿಗೆ ಅಕ್ಕಿ ಅವಶ್ಯಕ

    ಶಾಪಿಂಗ್ ಮಾಲ್‌ಗಳಲ್ಲಿ ಅಕ್ಕಿ ಚೀಲ ಎತ್ತಿಕೊಳ್ಳಲು ನೂಕಾಟ

    8-10 ತಿಂಗಳಿಗಾಗುವಷ್ಟು ಅಕ್ಕಿ ದಾಸ್ತಾನು ಮಾಡಲು ಪ್ಲಾನ್

ಶಾಪಿಂಗ್ ಮಾಲ್ ಒಳಗೆ ಸಿಕ್ಕ, ಸಿಕ್ಕ ಅಕ್ಕಿ ಚೀಲ ಎಳೆದುಕೊಳ್ತಿರೋ ಜನ.. ಒಬ್ಬರಿಗೆ ಒಂದು, ಎರಡಲ್ಲ 10-15 ಅಕ್ಕಿ ಚೀಲ ಬೇಕಂತೆ. ಶಾಪಿಂಗ್ ಮಾಲ್ ಹೊರಗೆ ಉದ್ದುದ್ದ ಕ್ಯೂ ನಿಂತವರು ಅಕ್ಕಿಗಾಗಿ ಕಾಯುತ್ತಿದ್ದಾರೆ. ಹೌದು.. ಅಮೆರಿಕಾದಲ್ಲಿ ಸದ್ಯ ಅನಿವಾಸಿ ಭಾರತೀಯರು ಅಕ್ಕಿ ಕೊಳ್ಳಲು ಮುಗಿಬಿದ್ದಿದ್ದಾರೆ. ಶಾಪಿಂಗ್ ಮಾಲ್‌ಗಳು, ದಿನಸಿ ವಸ್ತುಗಳ ಸ್ಟಾಲ್‌ಗಳಲ್ಲಿ ಅಕ್ಕಿ ಚೀಲ ಎತ್ತಿಕೊಳ್ಳಲು ನೂಕಾಟ, ತಳ್ಳಾಟವೇ ನಡೆಯುತ್ತಿದೆ.

ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಅಕ್ಕಿ ಕೊಳ್ಳಲು ಮುಗಿಬಿದ್ದಿದ್ದಾರೆ. ಯಾಕಂದ್ರೆ, ಭಾರತದಲ್ಲಿ ಅಕ್ಕಿ ಕೊರತೆಯಾಗದಂತೆ ತಡೆಯಲು ಕೇಂದ್ರ ಸರ್ಕಾರ ಅಕ್ಕಿ ರಫ್ತು ನಿಷೇಧಿಸಿದೆ. ಇದರಿಂದ ಬಾಸುಮತಿ ಅಕ್ಕಿಯನ್ನು ಹೊರೆತುಪಡಿಸಿ ಉಳಿದ ಅಕ್ಕಿ ಭಾರತದಿಂದ ವಿದೇಶಗಳಿಗೆ ರಫ್ತು ಆಗುವುದು ಬ್ಯಾನ್ ಆಗಿದೆ. ಈ ನಿಷೇಧದ ಭಯದಿಂದಲೇ ಅನಿವಾಸಿ ಭಾರತೀಯರು ಸುಮಾರು 6 ತಿಂಗಳಿಗೆ ಬೇಕಾಗುವಷ್ಟು ಅಕ್ಕಿಯನ್ನು ಒಟ್ಟಿಗೆ ಸಂಗ್ರಹಿಸಲು ಮುಂದಾಗಿದ್ದಾರೆ.

ಜಾಗತಿಕ ಅಕ್ಕಿ ಮಾರುಕಟ್ಟೆಯಲ್ಲಿ ಭಾರತದ ರಫ್ತಿನ ಪಾಲು ಶೇಕಡಾ 40ರಷ್ಟಿದೆ. ಭಾರತ ನಾನ್ ಬಾಸ್ಮತಿ ಅಕ್ಕಿ ರಫ್ತು ನಿಷೇಧ ಮಾಡುತ್ತಿದ್ದಂತೆ ಅಮೆರಿಕಾದಲ್ಲಿ ಅಕ್ಕಿಯ ಬೆಲೆ ಕೂಡ ಏರಿಕೆ ಆಗಲಿದೆ. ಇದರಿಂದ ಜನ ಸಾಮಾನ್ಯರಿಗೆ ಅಕ್ಕಿ ಕೊರತೆಯಾಗುವ ಭೀತಿ ಎದುರಾಗಿದೆ. ಪ್ರಮುಖವಾಗಿ ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಪಂಜಾಬ್, ಕರ್ನಾಟಕ ಮೂಲದ ಅನಿವಾಸಿ ಭಾರತೀಯರಿಗೆ ಅಕ್ಕಿ ಅತ್ಯವಶ್ಯಕ ಆಹಾರ ಪದಾರ್ಥ. ಹೀಗಾಗಿ ಹತ್ತಾರು ಚೀಲ ಅಕ್ಕಿಯನ್ನು ಖರೀದಿಸಿ 8-10 ತಿಂಗಳಿಗಾಗುವಷ್ಟು ಅಕ್ಕಿಯನ್ನು ದಾಸ್ತಾನು ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಅಮೆರಿಕಾದಲ್ಲಿ ಅಕ್ಕಿಗೆ ಹಾಹಾಕಾರ; ಶಾಪಿಂಗ್ ಮಾಲ್‌ ಒಳಗೆ ನೂಕುನುಗ್ಗಲು, ಹೊರಗೆ ಉದ್ದುದ್ದ ಕ್ಯೂ

https://newsfirstlive.com/wp-content/uploads/2023/07/Rice-Ban-Effect.jpg

Load More