newsfirstkannada.com

ಉತ್ತರ ಭಾರತಕ್ಕೆ ಇನ್ನೂ ನಾಲ್ಕೈದು ದಿನ ಮಳೆರಾಯನ ಕಂಟಕ.. ಸಂತ್ರಸ್ತರ ಸಂಕಷ್ಟ ಆಲಿಸಲು ಹೋದ ಶಾಸಕನಿಗೆ ಕಪಾಳಮೋಕ್ಷ -Video

Share :

13-07-2023

    ಉತ್ತರ ಭಾರತಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ

    ಅಪಾಯದ ಮಟ್ಟ ಮೀರಿದ ಯಮುನಾ, CMರಿಂದ ತುರ್ತು ಸಭೆ

    ಹಿಮಾಚಲ ಪ್ರದೇಶ, ಹರಿಯಾಣ, ಉತ್ತರ ಪ್ರದೇಶದ ಜನ ಕಂಗಾಲು

ಮಳೆ.. ಮಳೆ.. ಜನರು ಕೂಲಿ ನಾಲಿ ಮಾಡಿ ಬದುಕುತ್ತಿದ್ದರು. ಮಳೆ ಅಬ್ಬರದಿಂದ ಜನರಿಗೆ ಈಗ ಬದುಕಿ ಉಳಿದ್ರೆ ಸಾಕಪ್ಪ ಎನ್ನುವ ಮನಸ್ಥಿತಿ ಬಂದಿದೆ. ಇನ್ನು ಮಳೆರಾಯನ ಆರ್ಭಟ ನಿನ್ನೆ ಹೇಗಿತ್ತು.. ಇವತ್ತು ಹೇಗಿರುತ್ತೆ..? ಜಮ್ಮು ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ಜನರು ಮಳೆರಾಯನ ಅಬ್ಬರಕ್ಕೆ ಕಂಗಾಲಾಗಿದ್ದಾರೆ. ಸದ್ಯ ಮಳೆ ನಿಂತ್ರೂ ಅದರ ಅವಾಂತರ ಕಮ್ಮಿ ಆಗಿಲ್ಲ.

ನೆರೆ ಸಂತ್ರಸ್ತೆಯಿಂದ ಶಾಸಕ ಈಶ್ವರ್ ಸಿಂಗ್​ಗೆ ಕಪಾಳಮೋಕ್ಷ!

ಹರಿಯಾಣದಲ್ಲಿ ನಿರಂತರ ಮಳೆಯಿಂದ ಉಂಟಾಗಿರುವ ಪ್ರವಾಹದಿಂದ ಈವರೆಗೆ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ, ಪ್ರವಾಹ ಪೀಡಿತ ಪ್ರದೇಶ ಗುಹ್ಲಾ ಭಾಗಗಳಿಗೆ ಜನನಾಯಕ್ ಜನತಾ ಪಾರ್ಟಿ ಶಾಸಕ ಈಶ್ವರ್ ಸಿಂಗ್‌ ಭೇಟಿ ನೀಡಿ, ಪರಿಶೀಲಿಸುತ್ತಿದ್ದರು. ಇದೇ ವೇಳೆ ಪ್ರವಾಹ ಸಂತ್ರಸ್ತೆಯೊರೊಬ್ಬರು ಶಾಸಕ ಈಶ್ವರ್ ಸಿಂಗ್‌ಗೆ ಕಪಾಳಮೋಕ್ಷ ಮಾಡಿ, ಈಗ ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿ ಯಮುನಾ ನದಿಯ ನೀರಿನ ಮಟ್ಟವು 207.55 ಮೀಟರ್‌ಗೆ ತಲುಪಿದೆ. 1978 ರಿಂದ 207.49 ಮೀಟರ್‌ಗಳ ಹಿಂದಿನ ದಾಖಲೆಯನ್ನು ಮುರಿದಿರುವುದರಿಂದ ದೆಹಲಿಯು ದೊಡ್ಡ ಪ್ರವಾಹವನ್ನು ಎದುರಿಸುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ಹಾಗೆ ಪ್ರವಾಹ ಪರಿಸ್ಥಿತಿ ಎದುರಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತುರ್ತು ಸಭೆಗಳ ಮೇಲೆ ಸಭೆ ನಡೆಸಿದ್ದಾರೆ.

ದೆಹಲಿಯ ಯಮುನಾ ಪ್ರವಾಹ ಪ್ರದೇಶದಿಂದ ಪೊಲೀಸರು ಮತ್ತು ಸ್ಥಳೀಯ ಆಡಳಿತವು ಜನರ ರಕ್ಷಣಾ ಕಾರ್ಯಾಚರಣೆ ನಡೆಸಿದೆ.

ಹಿಮಪಾತಕ್ಕೆ ತುತ್ತಾಗಿದ್ದ 7 ಚಾರಣಿಗರ ರಕ್ಷಣೆ ಕಾರ್ಯ

ಇನ್ನು ಇತ್ತ ಹಿಮಾಚಲ ಪ್ರದೇಶ ಮಳೆ ಅಬ್ಬರಕ್ಕೆ ಅತೀ ಹೆಚ್ಚು ಹಾನಿಯಾಗಿದೆ. ಚಂದ್ರತಾಲ್ ಗ್ಲೇಶಿಯಲ್ ಸರೋವರದ ಬಳಿ ಭಾರೀ ಹಿಮಪಾತಕ್ಕೆ ತುತ್ತಾಗಿದ್ದ, 7 ಚಾರಣಿಗರನ್ನು ಭಾರತೀಯ ವಾಯುಪಡೆ ರಕ್ಷಿಸಿದೆ.

ಉತ್ತರಾಖಂಡದಲ್ಲಿ ಪ್ರಾಣ ಪಣಕ್ಕಿಟ್ಟು ವಾಹನ ಸವಾರರ ಸಂಚಾರ

ಉತ್ತರಾಖಂಡದಲ್ಲಿ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ಗಂಗೋತ್ರಿ ಹೆದ್ದಾರಿಯ ಧರಾಳಿ ಬಳಿ ಖೀರ್ ಗಂಗಾ ನದಿ ಉಕ್ಕಿ ಹರಿಯುತ್ತಿದೆ. ನದಿ ಉಕ್ಕಿ ಹರಿಯುತ್ತಿರುವ ಸಂದರ್ಭದಲ್ಲಿ ಅಮರನಾಥ ಯಾತ್ರಾರ್ಥಿಗಳು ಪ್ರಾಣವನ್ನೇ ಪಣಕ್ಕಿಟ್ಟು ಸೇತುವೆ ದಾಟಿದ್ದಾರೆ.

ಮಳೆ ಸುರಿಯುವಂತೆ ಗುಡ್ಡದಿಂದ ಬಂಡೆಗಳ ಸುರಿಮಳೆ

ಉತ್ತರಾಖಂಡ್​ನ ಜೋಶಿಮಠದ ಪಾತಾಳಗಂಗಾ ಎಂಬಲ್ಲಿ ಮಳೆ ಸುರಿಯುವಂತೆ ಗುಡ್ಡದಿಂದ ಬಂಡೆಗಳು ಸುರಿಯಲಾರಂಭಿಸಿವೆ. ಇನ್ನು ಗುಡ್ಡ ಕುಸಿಯಲು ಪ್ರಾರಂಭಿಸಿದ್ರಿಂದ ವಾಹನ ಸಂಚಾರ ಸ್ಥಗಿತವಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇತ್ತ ಉತ್ತರಪ್ರದೇಶದ ನೋಯ್ಡಾ ಸೆಕ್ಟರ್ 168 ಪ್ರದೇಶದ ಭಾಗಗಳು ಭಾರೀ ಪ್ರಮಾಣದಲ್ಲಿ ಜಲಾವೃತಗೊಂಡಿದೆ. ಪರಿಣಾಮ ಛಪ್ರೌಲಿ ಗ್ರಾಮದ ಗೌಶಾಲಾಸ್‌ನಿಂದ ಜನರು ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ.

ನಾಳೆಯಿಂದ 4 ದಿನ ಭಾರೀ ಮಳೆ.. ಐಎಂಡಿ ಎಚ್ಚರಿಕೆ

ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ವಿನಾಶವನ್ನು ಉಂಟುಮಾಡುತ್ತಿರುವ ಮಳೆರಾಯ ನಿನ್ನೆ ಸ್ವಲ್ಪ ಬಿಡುವು ಕೊಟ್ಟಿದ್ದ. ಇವತ್ತು ಮಳೆಯ ಪರಿಣಾಮ ಕೊಂಚ ಕಡಿಮೆಯಾಗುವ ನಿರೀಕ್ಷೆಯಿದೆ ಅಂತ ಹವಾಮಾನ ಇಲಾಖೆ ಹೇಳಿದ್ದರೂ ನಾಳೆ ಮತ್ತೆ ಅಬ್ಬರಿಸಲಿದೆ ಅನ್ನೋ ಮುನ್ಸೂಚನೆ ನೀಡಿದೆ. ಹಿಮಾಚಲ ಪ್ರದೇಶದಲ್ಲಿ ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ನಾಲ್ಕರಿಂದ 5 ದಿನದವರೆಗೆ ವಿಸ್ತರಿಸಬಹುದು ಎನ್ನಲಾಗಿದೆ. ಹಿಮಾಚಲ ಪ್ರದೇಶದ ಮಳೆಯ ಎಚ್ಚರಿಕೆಯು ರಾಜ್ಯದಲ್ಲಿ ಪ್ರಕೃತಿಯ ವಿಕೋಪವನ್ನು ತೀವ್ರಗೊಳಿಸುವ ಹಾಗೂ ದೆಹಲಿ ಪ್ರವಾಹವನ್ನು ಇನ್ನಷ್ಟು ಹದಗೆಡಿಸುವ ಸಾಧ್ಯತೆ ಇದೆ.

ನಿನ್ನೆಯಿಂದ ವರುಣ ದೇವ ಕೊಂಚ ಗ್ಯಾಪ್​ ಕೊಟ್ಟಿದ್ಧಾನೆ. ಆದ್ರೆ ಮಳೆರಾಯ ಮಾಡಿರೋ ರಣ ನರ್ತನೆಯಿಂದ ಸುಧಾರಿಸಿಕೊಳ್ಳಲು ಕಾಲವಾಕಾಶ ನೀಡದೆ ಮತ್ತೆ ನಾಳೆಯಿಂದ 4 ದಿನ ಅಬ್ಬರಿಸಲಿದ್ದಾನೆ ಅಂತ ಐಎಂಡಿ ಮುನ್ನೆಚ್ಚರಿಕೆ ನೀಡಿದ್ದು ಆತಂಕಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರ ಭಾರತಕ್ಕೆ ಇನ್ನೂ ನಾಲ್ಕೈದು ದಿನ ಮಳೆರಾಯನ ಕಂಟಕ.. ಸಂತ್ರಸ್ತರ ಸಂಕಷ್ಟ ಆಲಿಸಲು ಹೋದ ಶಾಸಕನಿಗೆ ಕಪಾಳಮೋಕ್ಷ -Video

https://newsfirstlive.com/wp-content/uploads/2023/07/rain-2-5.jpg

Load More