newsfirstkannada.com

ಜನರ ಸಮಸ್ಯೆ ಬಗ್ಗೆ ವರದಿ ಮಾಡಿದ ನ್ಯೂಸ್​ಫಸ್ಟ್ ಸಿಬ್ಬಂದಿ ಮೇಲೆ ಹಲ್ಲೆ; ಕಿರಿಕ್ ತೆಗೆದ ಆಸಾಮಿಗೆ ಸ್ಥಳೀಯರ ತರಾಟೆ

Share :

17-11-2023

  ಪ್ರತಿನಿತ್ಯ ಗಂಟೆಗಟ್ಟಲೆ ಟ್ರಾಫಿಕ್ ಜಾಮ್​ನಲ್ಲಿ ವಾಹನ ಸವಾರರ ಪರದಾಟ

  ಸಮಸ್ಯೆ ಬಗ್ಗೆ ವರದಿ ಮಾಡಲು ಹೋದ ನ್ಯೂಸ್​ ಫಸ್ಟ್ ಸಿಬ್ಬಂದಿ ಮೇಲೆ ಹಲ್ಲೆ

  ಮಹದೇವಪುರ ರೈಲ್ವೆ ಅಂಡರ್ ಪಾಸ್ ಬಳಿ ಕಿರಿಕ್ ತೆಗೆದು ಕೂಗಾಡಿದ ವ್ಯಕ್ತಿ

ಬೆಂಗಳೂರು: ಸಮಸ್ಯೆ ಬಗ್ಗೆ ವರದಿ ಮಾಡಲು ಹೋದ ನ್ಯೂಸ್​ ಫಸ್ಟ್ ಸಿಬ್ಬಂದಿ ಮೇಲೆ ವ್ಯಕ್ತಿಯೋರ್ವ ಹಲ್ಲೆಗೆ ಯತ್ನಿಸಿರೋ ಘಟನೆ ಮಹದೇವಪುರ ರೈಲ್ವೆ ಅಂಡರ್ ಪಾಸ್ ಬಳಿ ನಡೆದಿದೆ.

ಅಸಲಿಗೆ ಆಗಿದ್ದೇನು?

ಮಹದೇವಪುರ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಪೂರ್ಣಗೊಂಡು ಒಂದೂವರೆ ವರ್ಷಗಳೇ ಕಳೆದಿದೆ. ಆದರೆ ರೈಲ್ವೆ ಅಂಡರ್ ಪಾಸ್‌ಗೆ ಇನ್ನೂ ಉದ್ಘಾಟನೆ ಭಾಗ್ಯವಿಲ್ಲ. ಇದರಿಂದ ನಿತ್ಯ ವಾಹನ ಸವಾರರಿಗೆ ಸಂಕಷ್ಟ ಎದುರಾಗುತ್ತಿತ್ತು. ಕೆಲವೊಮ್ಮೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್​ನಲ್ಲಿ ಸಿಲುಕಿ ಆ್ಯಂಬುಲೆನ್ಸ್‌ನಲ್ಲಿದ್ದ ರೋಗಿಗಳು ಪರದಾಡಿದ ಸಂದರ್ಭ ಎದುರಾಗಿತ್ತು. ಈ ಬಗ್ಗೆ ವರದಿ ಮಾಡಲು ಹೋಗಿದ್ದ ನ್ಯೂಸ್​ಫಸ್ಟ್ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾರೆ.

ಈ ಬಗ್ಗೆ ಆ್ಯಂಬುಲೆನ್ಸ್ ಚಾಲಕನನ್ನು ಮಾತನಾಡಿಸಲು ಹೋದ ಸಂದರ್ಭದಲ್ಲಿ ಏಕಾಏಕಿ ಬಂದ ವ್ಯಕ್ತಿ ಕಿರಿಕ್​ ಮಾಡಿಕೊಂಡಿದ್ದಾನೆ. ಈ ಪರಿಸ್ಥಿತಿಗೆ, ಟ್ರಾಫಿಕ್ ಜಾಮ್​ಗೆ ಮಾಧ್ಯಮದವರೇ ಕಾರಣ ಎಂದು ಹೇಳಿ ಹಲ್ಲೆ ಮಾಡಿದ್ದಾನೆ. ಬಳಿಕ ನ್ಯೂಸ್​​ಫಸ್ಟ್​​ ಕ್ಯಾಮೆರಾ ಹಾಗೂ ಲೋಗೋ ತಳ್ಳಿ ದರ್ಪ ಮೆರೆದಿದ್ದಾನೆ. ಟ್ರಾಫಿಕ್ ಪೊಲೀಸರ ಎದುರಲ್ಲಿಯೇ ಈ ಹೈಡ್ರಾಮ ನಡೆದಿದೆ. ಆ ವ್ಯಕ್ತಿಯ ದುರ್ವರ್ತನೆಗೆ ಸ್ಥಳೀಯರು ತೀವ್ರ ಆಕ್ರೋಶ ಹೊರ ಹಾಕಿದ್ದು, ತರಾಟೆ ತೆಗೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜನರ ಸಮಸ್ಯೆ ಬಗ್ಗೆ ವರದಿ ಮಾಡಿದ ನ್ಯೂಸ್​ಫಸ್ಟ್ ಸಿಬ್ಬಂದಿ ಮೇಲೆ ಹಲ್ಲೆ; ಕಿರಿಕ್ ತೆಗೆದ ಆಸಾಮಿಗೆ ಸ್ಥಳೀಯರ ತರಾಟೆ

https://newsfirstlive.com/wp-content/uploads/2023/11/newsfirst-kannada.jpg

Load More