newsfirstkannada.com

ನಾನು ಸೀಮಾ ಹೈದರ್​ ಅಲ್ಲ.. ಭಾರತಕ್ಕೆ ವಾಪಸ್ ಬರ್ತೇನೆ.. ಫೇಸ್​ಬುಕ್ ಲವ್ವರ್​ ಭೇಟಿಗಾಗಿ ಪಾಕ್​ಗೆ ಹೋಗಿದ್ದ ಮಹಿಳೆ ಹೇಳಿದ್ದೇನು?

Share :

24-07-2023

    ಪ್ರಿಯತಮ ನಸ್ರುಲ್ಲಾ ಜೊತೆಯೇ ಇರ್ತಾಳಾ ಅಂಜು?

    ಅಂಜು ವಾಘಾ ಗಡಿ ದಾಟಿದ್ದು ಹೇಗೆ ಗೊತ್ತಾ?

    ಅಂಜು ಮುಂದಿನ ಪ್ಲಾನ್ ಏನಂತೆ ಗೊತ್ತಾ..?

ಪ್ರಿಯತಮನ ಭೇಟಿ ಮಾಡಲು ಮನೆಯಲ್ಲಿ ಯಾರಿಗೂ ತಿಳಿಸದೇ ಪಾಕಿಸ್ತಾನಕ್ಕೆ ಗುಟ್ಟಾಗಿ ಹೋಗಿರುವ ರಾಜಸ್ಥಾನದ ಎರಡು ಮಕ್ಕಳ ತಾಯಿ, ಭಾರೀ ಚರ್ಚೆಯಲ್ಲಿದ್ದಾಳೆ. ಕೆಲವರು ಪಾಕಿಸ್ತಾನದಿಂದ ಪಬ್​​​ಜೀ ಸ್ನೇಹಿತನಿಗಾಗಿ ಬಂದಿರುವ ಸೀಮಾ ಹೈದರ್​ ಜೊತೆ ಹೋಲಿಕೆ ಮಾಡ್ತಿದ್ದಾರೆ. ಆದರೆ ಪಬ್​​ಜೀ ಯಿಂದ ಶುರುವಾದ ಪ್ರೀತಿಗೂ, ಫೇಸ್​​ಬುಕ್​​ನಲ್ಲಿ ಅರಳಿರುವ ಪ್ರೀತಿಗೂ ತುಂಬಾನೇ ವ್ಯತ್ಯಾಸ ಇದೆ.

ಪ್ರಶ್ನೆ: ಅಂಜು ನೀವು ಸದ್ಯ ಎಲ್ಲಿದ್ದೀರಿ..?

ಅಂಜು: ನಾನು ಪಾಕಿಸ್ತಾನದಲ್ಲಿ ಇದ್ದೇನೆ. ಪರ್ವತಗಳಿಂದ ಕೂಡಿರುವ ಮನಾಲಿ ಅಂತಹ ಪ್ರದೇಶದಲ್ಲಿ ನಾನಿದ್ದೇನೆ. ಸುರಕ್ಷಿತವಾಗಿದ್ದೇನೆ.

ಪ್ರಶ್ನೆ: ನೀವು ಪಾಕಿಸ್ತಾನಕ್ಕೆ ಹೋಗುತ್ತಿರುವ ಬಗ್ಗೆ ನಿಮ್ಮ ಪತಿಗೆ ತಿಳಿಸಿದ್ದೀರಾ?

ಅಂಜು: ಇಲ್ಲ, ನಾನು ಯಾರಿಗೂ ಹೇಳಿಲ್ಲ. ನಾನು ಅವರಿಗೆ ಜೈಪುರಕ್ಕೆ ಹೋಗುತ್ತಿರುವುದಾಗಿ ತಿಳಿಸಿದ್ದೇನೆ ಅಷ್ಟೇ.

ಪ್ರಶ್ನೆ: ನೀವು ಯಾಕೆ ಪಾಕಿಸ್ತಾನಕ್ಕೆ ಹೋಗಿದ್ದೀರಿ?

ಅಂಜು: ನಾನು ಬಂದಿರೋದು ಇಲ್ಲಿನ ಪ್ರದೇಶಗಳ ವೀಕ್ಷಣೆಗೆ. ನಾನು ಕಾನೂನು ಪ್ರಕಾರ ಎಲ್ಲಾ ದಾಖಲಾತಿಗಳನ್ನು ಪಡೆದುಕೊಂಡೇ ಇಲ್ಲಿಗೆ ಬಂದಿದ್ದೇನೆ. ಅಲ್ಲಿ ಮದುವೆ ನಡೆಯುತ್ತಿತ್ತು. ನಾನು ಅಲ್ಲಿ ಭಾಗಿಯಾಗಲು ಹೋಗಿದ್ದೆ.

ಪ್ರಶ್ನೆ: ನೀವು ಪಾಕಿಸ್ತಾನಕ್ಕೆ ಹೇಗೆ ತಲುಪಿದ್ರಿ?

ಅಂಜು: ವಾಘಾ ಬಾರ್ಡರ್ ಮೂಲಕ ನಾನು ಪಾಕಿಸ್ತಾನ ತಲುಪಿದೆ. ಭಿವಡಿಯಿಂದ ದೆಹಲಿಗೆ ಬಂದೆ. ನಂತರ ಅಮೃತಸರ್ ಮೂಲಕ ವಾಘಾ ಬಾರ್ಡರ್​​ಗೆ ಬಂದೆ. ಅಲ್ಲಿ ಪಾಕಿಸ್ತಾನವನ್ನು ಪ್ರವೇಶ ಮಾಡಿದೆ.

ಪ್ರಶ್ನೆ: ಪಾಕಿಸ್ತಾನದಲ್ಲಿ ನೀವು ಯಾರ ಜೊತೆ ಸ್ಟೇ ಆಗಿದ್ದೀರಿ?

ಅಂಜು: ನನಗೆ ಸ್ನೇಹಿತ ಇದ್ದಾನೆ. ನಮ್ಮಿಬ್ಬರ ಮಧ್ಯೆ ಉತ್ತಮ ಸಂಬಂಧ ಇದೆ. ಅವರು ಪರಿಚಯ ಆಗಿ ನನಗೆ 2 ವರ್ಷಕ್ಕಿಂತಲೂ ಹೆಚ್ಚಾಗಿದೆ. ಇಲ್ಲಿ ಮದುವೆ ನಡೆಯುತ್ತಿತ್ತು, ಅದರಲ್ಲಿ ಭಾಗಿಯಾಗಲು ನಾನು ಬಂದೆ. ಈಗ ಇಲ್ಲಿನ ಪ್ರದೇಶಗಳನ್ನು ನೋಡಲು ಹೋಗಿದ್ದೇನೆ. ನನಗೆ ಇಲ್ಲಿ ಏನೂ ಇಲ್ಲ. ನೀವು ಸೀಮಾ ಹೈದರ್​ಗೆ ಹೋಲಿಕೆ ಮಾಡ್ತಿರೋದ್ರಲ್ಲಿ ಅರ್ಥವೇ ಇಲ್ಲ. ನಾನು ಮತ್ತೆ ವಾಪಸ್ ಬರ್ತೇನೆ. ನಾನಿಲ್ಲಿ ಸೇಫ್ ಆಗಿದ್ದೇನೆ.

ಪ್ರಶ್ನೆ: ವಾಪಸ್ ಬರುವ ಬಗ್ಗೆ ನಿಮ್ಮ ಪ್ಲಾನ್ ಏನು?

ಅಂಜು: ಇನ್ನೂ 2 ರಿಂದ 4 ದಿನಗಳಲ್ಲಿ ನಾನು ವಾಪಸ್ ಆಗ್ತೇನೆ.

ಪ್ರಶ್ನೆ: ಪಾಕಿಸ್ತಾನದಲ್ಲಿರುವ ನುಸ್ರುಲ್ಲ ಅವರನ್ನು ಮದುವೆ ಆಗ್ತೀರಾ?

ಅಂಜು: ಇಲ್ಲ. ಆ ರೀತಿ ಯಾವುದೂ ಇಲ್ಲ. ಮದುವೆ ಬಗ್ಗೆ ಮಾಧ್ಯಮಗಳ ಸೃಷ್ಟಿ ಅಷ್ಟೇ. ನಾನು ಸೀಮಾ ಹೈದರ್ ರೀತಿ ಅಲ್ಲ.

ಪ್ರಶ್ನೆ: ನೀವಿಬ್ಬರು ಹೇಗೆ ಕ್ಲೋಸ್ ಆದ್ರಿ..?

ಅಂಜು: ನಮ್ಮ ಸ್ನೇಹಿ ಶುರುವಾಗಿದ್ದು 2020ರಲ್ಲಿ. ಅಂದು ನಾನು ಫೇಸ್​ಬುಕ್ ಬಳಸಲು ಶುರುಮಾಡಿದ್ದೆ. ಅಂದು ಫೇಸ್​ಬುಕ್ ಮೂಲಕ ನಸ್ರುಲ್ಲ ಪರಿಚಯವಾಗಿ ಮಾತನಾಡಲು ಶುರು ಮಾಡಿದೆ. ಫೇಸ್​ಬುಕ್​ನಲ್ಲೇ ನಾವಿಬ್ಬರು ಫೋನ್ ನಂಬರ್ ಹಂಚಿಕೊಂಡ್ವಿ. ನಂತರ ವಾಟ್ಸ್​​ಆ್ಯಪ್ ಮೂಲಕ ಚಾಟಿಂಗ್ ಮಾಡಲು ಶುರು ಮಾಡಿದ್ವಿ. ನನಗೆ ನಸ್ರುಲ್ಲಾ ಮೂರು ವರ್ಷಗಳಿಂದ ಗೊತ್ತು. ಈ ಬಗ್ಗೆ ನನ್ನ ಸಹೋದರಿಗೆ ತಿಳಿಸಿದ್ದೇನೆ. ನನ್ನ ತಾಯಿಗೆ ಮೊದಲ ದಿನದಿಂದಲೂ ಗೊತ್ತಿದೆ.

ಪ್ರಶ್ನೆ: ನೀವು ನಿಮ್ಮ ಪತಿಯಿಂದ ದೂರು ಆಗ್ತೀರಾ?

ಅಂಜು: ಹೌದು, ನಮ್ಮಿಬ್ಬರ ಮಧ್ಯೆ ಮೊದಲಿನಿಂದಲೂ ಉತ್ತಮ ಸಂಬಂಧ ಇಲ್ಲ. ಕೆಲ ಅನಿವಾರ್ಯತೆಗಳಿಂದಾಗಿ ನಾನಲ್ಲಿದ್ದೆ. ನಾನು ನನ್ನ ಮಕ್ಕಳಿಗಾಗಿ ಅವರ ಜೊತೆ ಇರಬೇಕಾಯಿತು. ನನಗೆ ಗುರುಗ್ರಾಂ​​ನಲ್ಲಿ ಕೆಲಸ ಇದೆ. ನಸ್ರುಲ್ಲರನ್ನು ಮದುವೆ ಆಗುವ ಬಗ್ಗೆ ಯಾವುದೇ ಆಲೋಚನೆ ಇಲ್ಲ. ಗಂಡನಿಂದ ಪ್ರತ್ಯೇಕವಾಗಿ ಮಕ್ಕಳ ಜೊತೆ ಇರಲು ಬಯಸುತ್ತೇನೆ.

ಪ್ರಶ್ನೆ: ನೀವು ಎಷ್ಟು ದಿನ ರಜೆ ಹಾಕಿ ಹೋಗಿದ್ದೀರಿ?

ಅಂಜು: ನಾನು 10 ದಿನಗಳ ರಜೆ ಪಡೆದುಕೊಂಡಿದ್ದೇನೆ. ಈ ಬಗ್ಗೆ ನಾನು ಕಚೇರಿಯ ಆಡಳಿತ ಮಂಡಳಿ ಗಮನಕ್ಕೆ ತಂದೇ ಇಲ್ಲಿಗೆ ಬಂದಿದ್ದೇನೆ.

ಪ್ರಶ್ನೆ: ನೀವು ಭಾರತಕ್ಕೆ ವಾಪಸ್ ಬಂದು ನಿಮ್ಮ ಕುಟುಂಬದ ಜೊತೆ ಇರ್ತೀರಾ? ಇಲ್ಲ, ಪಾಕಿಸ್ತಾನಕ್ಕೆ ಹೊಗಿ ಅವನ ಜೊತೆ ಇರ್ತೀರಾ?

ಅಂಜು: ನನ್ನ ಬಳಿ ಯಾವುದೇ ಐಡಿಯಾ ಇಲ್ಲ. ನಾನು ಶೀಘ್ರದಲ್ಲೇ ವಾಪಸ್ ಆಗ್ತೇನೆ. ನಾನು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ನಮ್ಮ ಭವಿಷ್ಯಕ್ಕೆ ಆಗಿರುತ್ತದೆ. ಅದನ್ನು ನಾನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನು ಸೀಮಾ ಹೈದರ್​ ಅಲ್ಲ.. ಭಾರತಕ್ಕೆ ವಾಪಸ್ ಬರ್ತೇನೆ.. ಫೇಸ್​ಬುಕ್ ಲವ್ವರ್​ ಭೇಟಿಗಾಗಿ ಪಾಕ್​ಗೆ ಹೋಗಿದ್ದ ಮಹಿಳೆ ಹೇಳಿದ್ದೇನು?

https://newsfirstlive.com/wp-content/uploads/2023/07/ANJU-1.jpg

Load More