ವಿರಾಟ್, ಧೋನಿ ಅಲ್ಲ, ಈತ ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್
ಟೀಂ ಇಂಡಿಯಾದ ದಿಗ್ಗಜನನ್ನು ಹಾಡಿಹೊಗಳಿದ ಸುನೀಲ್ ಗವಾಸ್ಕರ್
1983 ವಿಶ್ವಕಪ್ನಲ್ಲಿ ಲೆಜೆಂಡರಿ ಕ್ಯಾಪ್ಟನ್ ಆಟ ನೆನೆದು ಭಾವುಕರಾದ್ರು!
ಎಂ.ಎಸ್ ಧೋನಿ ಅಲ್ಲ, ಬದಲಿಗೆ ಈತ ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಎಂದು ಭಾರತದ ಲೆಜೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಈ ಕುರಿತು ಮಾತಾಡಿದ ಸುನಿಲ್ ಗವಾಸ್ಕರ್, ಧೋನಿ ಮಾತ್ರವಲ್ಲ ಕ್ಯಾಪ್ಟನ್ ಕೂಲ್’ ನಿಕ್ ನೇಮ್‌ಗೆ ಮತ್ತೊಬ್ಬ ಸ್ಪರ್ಧಿ ಇದ್ದಾರೆ. ಕಪಿಲ್ ದೇವ್ ನಿಜವಾದ “ಕ್ಯಾಪ್ಟನ್ ಕೂಲ್’ ಎಂದಿದ್ದಾರೆ.
ಕಪಿಲ್ ದೇವ್ ಬ್ಯಾಟ್ ಮತ್ತು ಬಾಲ್ ಎರಡು ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡಿದವು. ಇವರ ಬ್ಯಾಟಿಂಗ್ ಮಾತ್ರ ಎಲ್ಲರನ್ನೂ ಬೆರಗುಗೊಳಿಸಿತ್ತು. 1983ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ ವಿವ್ ರಿಚರ್ಡ್ಸ್ ಕ್ಯಾಚ್ ಪಡೆದ ರೀತಿಯನ್ನು ಮರೆಯುವಂತಿಲ್ಲ. ಕಪಿಲ್ ದೇವ್ ಕ್ಯಾಪ್ಟನ್ಸಿ ಕ್ರಿಯೇಟಿವ್ ಆಗಿತ್ತು. ಯಾರು ಕ್ಯಾಚ್ ಬಿಟ್ಟರೂ ನಗುತ್ತಿದ್ದ ಕಪಿಲ್ ಮೂಲ ‘ಕ್ಯಾಪ್ಟನ್ ಕೂಲ್’ ಎಂದಿದ್ದಾರೆ.
ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಅವರನ್ನು ‘ಕ್ಯಾಪ್ಟನ್ ಕೂಲ್’ ಎಂದು ಕರೆಯಲಾಗುತ್ತದೆ. ಎಂಥದ್ದೇ ಕಠಿಣ ಪರಿಸ್ಥಿತಿ ಇದ್ದರೂ ಧೋನಿ ಶಾಂತ ರೀತಿಯಲ್ಲಿ ವರ್ತಿಸುತ್ತಾರೆ. ಹೀಗಾಗಿ ಧೋನಿ ಎಲ್ಲರ ಪಾಲಿಗೆ ಕೂಲ್ ಕ್ಯಾಪ್ಟನ್.
ಭಾರತ ತಂಡ 1983ರ ವಿಶ್ವಕಪ್ ಪ್ರಶಸ್ತಿ ಗೆದ್ದಿತ್ತು. ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಟ್ರೋಫಿ ಎತ್ತಿ ಹಿಡಿಯಿತು. ಅಂದಿನ ಕ್ಯಾಪ್ಟನ್ ಕಪಿಲ್ ದೇವ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ್ದರು. ಫೀಲ್ಡಿಂಗ್ ವೇಳೆ ವಿವ್ ರಿಚರ್ಡ್ಸ್ ಅವರ ಕ್ಯಾಚ್ ಪಡೆದು ಔಟ್ ಮಾಡಿದ್ದು ಇತಿಹಾಸ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ