newsfirstkannada.com

ರಾಜ್ಯದಲ್ಲಿ ಘೋರ ದುರಂತ.. ರಕ್ಷಿಸಲು ಹೋದ ಒಬ್ಬರಲ್ಲ ಇಬ್ಬರು ನೀರು ಪಾಲು; ಮೂವರ ದಾರುಣ ಸಾವು

Share :

Published June 18, 2024 at 9:34pm

  ಕೆಲವೇ ಕ್ಷಣದಲ್ಲಿ ಆಳವಾದ ಗುಂಡಿಗೆ ಬಿದ್ದು ಮೂವರು ದಾರುಣ ಸಾವು

  ಗುಂಡಿಯ ನೀರಿನಲ್ಲಿ ಹೊರ ಬರಲಾರದೇ ಪರದಾಡುತ್ತಿದ್ದ ಇಬ್ಬರು

  ಯುವತಿ ಹಾಗೂ ಆಕೆಯ ಸಂಬಂಧಿ ರಕ್ಷಣೆಗೆ ಹೋದ ವ್ಯಕ್ತಿಯೂ ನೀರು ಪಾಲು

ವಿಜಯಪುರ: ಜಮೀನಿನಲ್ಲಿ ನೀರು ತುಂಬಿದ್ದ ಆಳವಾದ ಗುಂಡಿಗೆ ಬಿದ್ದು ಮೂವರು ಸಾವನ್ನಪ್ಪಿರೋ ದಾರುಣ ಘಟನೆ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ನಡೆದಿದೆ. ನೀಲಮ್ಮ ಖಿಲ್ಲಾರಹಟ್ಟಿ (16) ಮುತ್ತಪ್ಪ ಖಿಲ್ಲಾರಹಟ್ಟಿ ( 24 ) ಹಾಗೂ ಶಿವು ಯಾಳವಾರ ( 25 ) ಮೃತ ದುರ್ದೈವಿಗಳು.

ಹಡಲಗೇರಿ ಗ್ರಾಮದ ಚಿನ್ನಪ್ಪ ತಳವಾರ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಆಳವಾದ ಗುಂಡಿ ಇದ್ದು ನೀರು ತುಂಬಿತ್ತು. ಯುವತಿ ನೀಲಮ್ಮ ಎಮ್ಮೆ ಮೇಯಿಸಲು ಜಮೀನಿಗೆ ಹೋಗಿದ್ದಳು. ಎಮ್ಮೆಗೆ ನೀರು ಕುಡಿಸಲು ನೀರು ತುಂಬಿದ್ದ ಗುಂಡಿ ಬಳಿ ಹೋದಾಗ ಕಾಲು ಜಾರಿ ಬಿದ್ದಿದ್ದಾಳೆ.

ಇದನ್ನೂ ಓದಿ: ದರ್ಶನ್​ನಿಂದ ತಾಯಿ, ತಮ್ಮ ದೂರ ಇರೋದು ಯಾಕೆ.. ಶಾಕಿಂಗ್ ವಿಷ್ಯ ಬಿಚ್ಚಿಟ್ಟ ಉಮಾಪತಿ; ಏನಂದ್ರು? 

ನೀಲಮ್ಮ ಕಾಲು ಜಾರಿ ಬಿದ್ದಿದ್ದನ್ನು ಕಂಡ ಆಕೆಯ ಸಂಬಂಧಿ ಮುತ್ತಪ್ಪ ಖಿಲ್ಲಾರಹಟ್ಟಿ ರಕ್ಷಣೆ ಮಾಡಲು ಹೋಗಿದ್ದಾನೆ. ಯುವತಿ ಹಾಗೂ ಆಕೆಯ ಸಂಬಂಧಿ ನೀರಿನಲ್ಲಿ ಹೊರ ಬರಲಾರದೇ ಪರದಾಡುತ್ತಿದ್ದರು. ಇವನ್ನು ಕಂಡು ಕಾಪಾಡಲು ಬಂದ ಶಿವು ಯಾಳವಾರ ಅವರು ಸಹ ನೀರು ಪಾಲಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಅಪ್ಪನಿಲ್ಲದ ಮನೆಯಲ್ಲಿ ನಾನೂ ಇರಲ್ಲ.. ದರ್ಶನ್ ಜೈಲು ಸೇರಿದ ಬೆನ್ನಲ್ಲೇ ವಿನೀಶ್​ ಎಲ್ಲಿದ್ದಾರೆ?

ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಹಾಗೂ ಅಗ್ನಿಶಾಮಕ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಮೂವರ ಶವಗಳನ್ನು ಹೊರ ತೆಗೆದಿದ್ದು, ಹಡಲಗೇರಿ ಗ್ರಾಮದಲ್ಲಿ ಮೃತ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ಘೋರ ದುರಂತ.. ರಕ್ಷಿಸಲು ಹೋದ ಒಬ್ಬರಲ್ಲ ಇಬ್ಬರು ನೀರು ಪಾಲು; ಮೂವರ ದಾರುಣ ಸಾವು

https://newsfirstlive.com/wp-content/uploads/2024/06/Vijayapura-3-death.jpg

Load More