ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಆರೋಪ!
ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿ ಬಂಗಲೆ ನಿರ್ಮಿಸಿದ್ದಾರೆ
ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದ ಅಧಿಕಾರಿಗಳು
ಚೆನ್ನೈ: ಬಹುಭಾಷಾ ನಟ ಪ್ರಕಾಶ್ ರಾಜ್ ವಿರುದ್ಧ ಬಂಗಲೆ ನಿರ್ಮಿಸಲು ಸರ್ಕಾರಿ ಜಾಗ ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ. ಜತೆಗೆ ನಟ ಬಾಬಿ ಸಿಂಹ ಮೇಲೆಯೂ ಈ ಗಂಭೀರ ಆರೋಪ ಇದೆ. ಹೀಗಾಗಿ ಇಬ್ಬರಿಗೂ ವಿವರಣೆ ನೀಡಿ ಎಂದು ಕೊಡೈಕೆನಾಲ್ ವಲಯದ ಉಪ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಕಾಶ್ ರಾಜ್, ಬಾಬಿ ಸಿಂಹ ಬಂಗಲೆ ನಿರ್ಮಿಸಲು ಪೇತುಪರೈ ಮತ್ತು ಭಾರತಿಪುರಂ ಅಣ್ಣಾನಗರ ಬಳಿಯ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಸ್ಥಳೀಯರಾದ ಕೆ.ವಿ ಮಹೇಂದ್ರನ್ ಎಂಬುವರು ಆರೋಪಿಸಿದ್ದಾರೆ. ಇಬ್ಬರು ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆಯದೆ ಬಂಗಲೆ ನಿರ್ಮಿಸಿಕೊಂಡಿದ್ದಾರೆ. ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿ ಬಂಗಲೆಗೆ ರಸ್ತೆಗಳನ್ನು ನಿರ್ಮಿಸಿದ್ದಾರೆ. ಇದರಿಂದ ಗ್ರಾಮದ ನಿವಾಸಿಗಳು ರಸ್ತೆಗಳನ್ನು ಬಳಸದಂತೆ ತಡೆಯುತ್ತಿದ್ದಾರೆ ಎಂದು ದೂರಿದ್ದಾರೆ.
ಈ ಬಗ್ಗೆ ಮಾತಾಡಿದ ಕೊಡೈಕೆನಾಲ್ ಕಂದಾಯ ವಿಭಾಗಾಧಿಕಾರಿ ರಾಜಾ, ತಹಶೀಲ್ದಾರ್ ಮತ್ತು ಸರ್ವೆಯರ್ ನಟರ ಜಮೀನು ಪರಿಶೀಲಿಸುತ್ತಿದ್ದಾರೆ. ಪರಿಶೀಲನೆ ಪೂರ್ಣಗೊಂಡ ನಂತರ ಇದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
2021 ರಲ್ಲಿ, ವಿಶೇಷ ಅಧಿಕಾರಿಯ ಅಧಿಕಾರಾವಧಿಯಲ್ಲಿ, 2,500 ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಡವನ್ನು ನಿರ್ಮಿಸಲು ಅನುಮೋದನೆ ಪಡೆದಿದ್ದರು. ಆದರೆ ಬಳಿಕ ಅವರು ತಮ್ಮ ಅನುಮೋದನೆ ನವೀಕರಿಸಿದ್ದಾರೆ. ಜತೆಗೆ 4,000 ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಡವನ್ನು ನಿರ್ಮಿಸಿದ್ದಾರೆ ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ