ನೆಟ್‌ವರ್ಕ್ ದೊರೆಯದಂತೆ ಟವರ್ ಅಳವಡಿಸಿರುವ ಕಂಪನಿಗಳು
ಸಿಗ್ನಲ್ ನಿರ್ಬಂಧಿಸುವ ಟವರ್ ಇದ್ದರೂ ವಿಡಿಯೋ ಕಾಲ್ ಮಾಡಿದ್ದೇಗೆ?
ಅಗ್ರಹಾರ ಜೈಲಿನಲ್ಲಿ ನಡೆದ ಅಕ್ರಮದ ಬಗ್ಗೆ ವಿವರಣೆ ಕೇಳಿ ನೋಟಿಸ್
ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ ಕೇವಲ ದರ್ಶನ್ಗೆ ಮಾತ್ರವಲ್ಲ, ಅಲ್ಲಿನ ಅಧಿಕಾರಿಗಳಿಗೂ ತಲೆನೋವು ಶುರುವಾಗಿದೆ. ಪರಪ್ಪನ ಅಗ್ರಹಾರದ ಕರ್ಮಕಾಂಡ ಬಯಲಾಗ್ತಿದ್ದಂತೆ ಸಾರ್ವಜನಿಕರು ಇಡೀ ವ್ಯವಸ್ಥೆಯ ಬಗ್ಗೆಯೇ ಆಕ್ರೋಶ ಹೊರ ಹಾಕ್ತಿದ್ದಾರೆ. ಇದರ ಬೆನ್ನಲ್ಲೇ ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.
ಇದನ್ನೂ ಓದಿ: ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ರಾಮಾಚಾರಿ ಚಾರು; ಮೌನ ಗುಡ್ಡಮನೆ ಈಗ ಸ್ಟಾರ್ ನಟಿ!
ಜೈಲಿನಲ್ಲಿ ನಡೆದ ಅಕ್ರಮದ ಬಗ್ಗೆ ವಿವರಣೆ ನೀಡುವಂತೆ ಕಾರಾಗೃಹ ಇಲಾಖೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಗೆ ಸಿಎಸ್ ನೋಟಿಸ್ ನೀಡಿದ್ರು. ಇದರ ಬೆನ್ನಲ್ಲೇ ಮಾಲಿನಿ ಕೃಷ್ಣಮೂರ್ತಿ, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷರಿಗೆ ಪತ್ರ ಬರೆದು, ಜಾಮರ್ ಇದ್ದರೂ ವಿಡಿಯೋ ಕಾಲ್ ಮಾಡಿದ್ದೇಗೆ ಅನ್ನೋ ಬಗ್ಗೆ ಮಾಹಿತಿ ಕೇಳಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಮತ್ತು ಇತರರ ನಡುವಿನ ವಿಡಿಯೋ ಕಾಲ್ ದೃಶ್ಯವು ಆಗಸ್ಟ್ 25 ರಂದು ಮಾಧ್ಯಮಗಳಲ್ಲಿ ಪ್ರಸಾರ ಆಗಿತ್ತು. ಜೈಲಿನೊಳಗಿಂದ ವಿಡಿಯೋ ಕಾಲ್ ಮಾಡಿದ್ದೇಗೆ ಅನ್ನೋದೇ ಯಕ್ಷಪ್ರಶ್ನೆಯಾಗಿದೆ.
ಏಕೆಂದರೆ ಪರಪ್ಪನ ಅಗ್ರಹಾರ ಜೈಲಿನ ಆವರಣದಲ್ಲಿ 3 HCBS ಟವರ್ಗಳು ಇವೆ. ಅಂದ್ರೆ, ಮೊಬೈಲ್ ನೆಟ್‌ವರ್ಕ್ ಸಿಗ್ನಲ್ ದೊರೆಯದಂತೆ ಟವರ್ಗಳನ್ನು ಅಳವಡಿಸಲಾಗಿದೆ. ಇವುಗಳ ನಿರ್ವಹಣೆಗೆ 5 ವರ್ಷಕ್ಕೆ 4.67 ಕೋಟಿ ಹಣ ವೆಚ್ಚ ಮಾಡಲಾಗ್ತಿದೆ. ಜೈಲಿನ ಯಾವುದೇ ಭಾಗದಲ್ಲಿ ಸಿಗ್ನಲ್ ಲಭ್ಯವಿಲ್ಲವೆಂದು ಈ ಹಿಂದಿನ ಹಲವು ಪತ್ರಗಳಲ್ಲಿ ಉಲ್ಲೇಖವಾಗಿದೆ. ಆದ್ರೆ ದರ್ಶನ್ ಕೇಸ್ ಮೂಲಕ ಜೈಲಿನಲ್ಲಿ ಮೊಬೈಲ್ ಸಿಗ್ನಲ್ ಸಿಗ್ತಿರೋದು ಧೃಡವಾಗಿದೆ. ಸಿಗ್ನಲ್ ನಿರ್ಬಂಧಿಸುವ ಟವರ್ ಇದ್ದರೂ ವಿಡಿಯೋ ಕಾಲ್ ಮಾಡಿದ್ದೇಗೆ. ಈ ಸಂಬಂಧ HCBS ಟವರ್ ಅಳವಡಿಸಿರುವ ಕಂಪನಿಗಳಿಂದ ಮಾಹಿತಿ ಪಡೆದು ಸೆಪ್ಟಂಬರ್ 4ರೊಳಗೆ ತಪ್ಪದೇ ವರದಿ ಸಲ್ಲಿಸಲು ಕೇಂದ್ರ ಕಾರಾಗೃಹ ಇಲಾಖೆಯ ಮುಖ್ಯ ಅಧೀಕ್ಷಕರಿಗೆ ಮಾಲಿನಿ ಕೃಷ್ಣಮೂರ್ತಿ ಪತ್ರ ಬರೆದು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಈ ಇಬ್ಬರಿಗೆ ರಾಖಿ ಕಟ್ಟಿದ ನಟಿ ನಮ್ರತಾ ಗೌಡ; ಯಾರು ಇರಬಹುದು ಗೆಸ್ ಮಾಡಿ ನೋಡೋಣ!
ಕೇವಲ ಪರಪ್ಪನ ಅಗ್ರಹಾರ ಒಂದೇ ಜೈಲು ಅಲ್ಲ, ರಾಜ್ಯದ ಬೆಳಗಾವಿ, ವಿಜಯಪುರ, ಧಾರವಾಡ, ಶಿವಮೊಗ್ಗ, ಬಳ್ಳಾರಿ, ತುಮಕೂರು ಸೇರಿದಂತೆ ಏಳು ಕಾರಾಗೃಹಗಳಲ್ಲಿ HSBC ಟವರ್ ಅಂದ್ರೆ ಸಾಮರಸ್ಯದ ಕರೆ ತಡೆಯುವ ವ್ಯವಸ್ಥೆಯನ್ನು ಅಳವಡಿಕೆ ಮಾಡಲಾಗಿದೆ. ಇದಕ್ಕಾಗಿ ನೂರಾರು ಕೋಟಿ ಹಣವನ್ನು ಮೀಸಲಿಡಲಾಗಿದೆ. ಆದ್ರೆ, ಜೈಲಿನಲ್ಲಿ ಕೈದಿಗಳು ಮಾತ್ರ, ಮನೆಯಲ್ಲಿ ಇರುವಂತೆ, ತಮಗೆ ಬೇಕಾದವರ ಜೊತೆ ವಿಡಿಯೋ ಕಾಲ್ ಮಾಡಿ, ಮಾತನಾಡಿಕೊಳ್ತ ಆರಾಮಾಗಿದ್ದಾರೆ. ಸೂಕ್ತ ತನಿಖೆಯ ಮೂಲಕ ಕಳ್ಳಾಟ ಆಡ್ತಿರುವವರಿಗೆ ಬಿಸಿ ಮುಟ್ಟಿಸಲೇ ಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ