newsfirstkannada.com

ದರ್ಶನ್ ಹೋಗೋ ಬಳ್ಳಾರಿ ಜೈಲಲ್ಲೂ ಇದ್ದಾರೆ ನಟೋರಿಯಸ್ ರೌಡಿಗಳು; ಒಬ್ಬೊಬ್ಬರ ಇತಿಹಾಸ ಭಯಾನಕ!

Share :

Published August 28, 2024 at 3:43pm

    ಪರಪ್ಪನ ಅಗ್ರಹಾರಕ್ಕಿಂತ ಡಬಲ್ ಡೇಂಜರ್​ ಬಳ್ಳಾರಿ ಸೆಂಟ್ರಲ್ ಜೈಲ್​!

    ಗನ್​ ಹಿಡಿದು ಭೂಗತ ಲೋಕ ಆಳಿದ ನಟೋರಿಯಸ್​ಗಳಿರೋ ಜಾಗ

    ಭೂಗತಲೋಕದ ಡಾನ್​ ವಿಕ್ಕಿಶೆಟ್ಟಿ ಟೀಂ ಸದ್ಯ ಈ ಜೈಲಿನಲ್ಲೇ ಇರೋದು

ಪರಪ್ಪನ ಅಗ್ರಹಾರದಲ್ಲಿದ್ದ ನಟ ದರ್ಶನ್, ನಟೋರಿಯಸ್ ರೌಡಿಗಳ ಸಹವಾಸ ಮಾಡಿ, ಫೋಟೋ ಕ್ಲಿಕ್ಕಿಸಿಕೊಂಡು ದೊಡ್ಡ ಸುದ್ದಿಯಾದ ಬಳಿಕ ಈಗ ಬಳ್ಳಾರಿಗೆ ಶಿಫ್ಟ್ ಆಗುತ್ತಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಲೋಕಲ್ ರೌಡಿಗಳ ಸಂಘ ಮಾಡಿದ್ದ ದರ್ಶನ್ ಈಗ ಬಳ್ಳಾರಿಯ ಸೆಂಟ್ರಲ್ ಜೈಲಿನತ್ತ ಸದ್ಯದಲ್ಲಿಯೇ ಪ್ರಯಾಣ ಬೆಳೆಸುತ್ತಿದ್ದಾರೆ.

ಇದನ್ನೂ ಓದಿ: ‘ಇದೆಲ್ಲ ಬೇಕಿತ್ತಾ ನಂಗೆ..’ ಅಧಿಕಾರಿಗಳ ಮುಂದೆ ದರ್ಶನ್ ದುಃಖ; ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಲು ಹೆದರಿದ ದಾಸ..!

ಬಳ್ಳಾರಿ ಸೆಂಟ್ರಲ್ ಜೈಲಿಗೂ ಭೂಗತ ಲೋಕಕ್ಕೂ ಈ ಹಿಂದಿನಿಂದಲೂ ದೊಡ್ಡ ನಂಟಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಲೋಕಲ್ ರೌಡಿಗಳ ಮೆರೆದಾಟವಿದ್ದರೆ ಬಳ್ಳಾರಿ ಜೈಲಿನಲ್ಲಿ ಲೋಕಲ್​ ರೌಡಿಗಳಿಂದ ಹಿಡಿದು ಅಂಡರ್​ವರ್ಲ್ಡ್​ ಕನೆಕ್ಷನ್ ಇರುವ ಖತರ್ನಾಕ್ ಕೈದಿಗಳಿರೋದೇ ಹೆಚ್ಚು. ಭೂಗತ ಪಾತಕಿ ವಿಕ್ಕಿಶೆಟ್ಟಿ ಟೀಂ ಸದ್ಯ ಬಳ್ಳಾರಿ ಜೈಲಿನಲ್ಲಿಯೇ ಕಂಬಿ ಎಣಿಸುತ್ತಿದೆ. ಇವೆರಲ್ಲಾ ಮಚ್ಚು ಲಾಂಗ್ ಹಿಡಿದು ರೌಡಿಸಂ ಮಾಡಿದ ಪಟಾಲಂ ಅಲ್ಲ. ಪಕ್ಕಾ ಅಂಡರ್​ವರ್ಲ್ಡ್​ ಸ್ಟೈಲ್​ನಲ್ಲಿ ಗನ್​ ಹಿಡಿದುಕೊಂಡು ಭೂಗತಲೋಕದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದವರು.

ಭೂಗತ ಪಾತಕಿ ವಿಕ್ಕಿಶೆಟ್ಟಿ

ಇದನ್ನೂ ಓದಿ: ಡೆಡ್ಲಿ ಸೋಮ, ಹನುಮಂತ ನಾಯ್ಕ್.. ನಟೋರಿಯಸ್​ ರೌಡಿಗಳನ್ನು ಕಂಡ ಬಳ್ಳಾರಿ ಜೈಲಿಗೆ ಹೋಗಲ್ಲ ಎಂದ ದರ್ಶನ್​

ನಿತ್ಯಾನಂದ ಅಲಿಯಾಸ್ ನಿತ್ಯಾ, ಗಣೇಶ್​, ಆಕಾಶ್, ದೀಕ್ಷಿತ್, ಭರತ್, ಶಶಿಕಿರಣ್​ನಂತ ಖತರ್ನಾಕ್ ಭೂಗತಲೋಕದ ನಂಟಿರುವ ನಟೋರಿಯಸ್​ಗಳು ಬಳ್ಳಾರಿ ಜೈಲಿನಲ್ಲಿದ್ದಾರೆ. ಚರ್ಚ್​ಸ್ಟ್ರೀಟ್ ಬಾರ್​ನಲ್ಲಿ ಓನರ್ ಮನೀಶ್​ಶೆಟ್ಟಿಯನ್ನ ಶೂಟ್ ಮಾಡಿ ಕೊಂದಿದ್ದು ಇದೇ ಟೀಂ, ಅಂಡರ್​ವರ್ಲ್ಡ್​ ಡಾನ್ ವಿಕ್ಕಿಶೆಟ್ಟಿ ಸೂಚನೆ ಮೇರೆಗೆ ಈ ಹತ್ಯೆಯೊಂದು ನಡೆಸಲಾಗಿತ್ತು. ಸದ್ಯ ಇದೇ ಜೈಲಿನಲ್ಲಿ ದರ್ಶನ್ ತನ್ನ ಮುಂದಿನ ಜೈಲಿನ ದಿನಗಳನ್ನು ದೂಡಬೇಕಾಗಿದೆ. ಇಲ್ಲೂ ದರ್ಶನ್ ಇವರೆಲ್ಲರ ಸಹವಾಸ ಮಾಡಿ ಮತ್ತೆ ಹೆಸರು ಕೆಡಿಸಿಕೊಳ್ತಾರೋ, ಇಲ್ಲ ಯಾರ ಸಹವಾಸವೇ ಬೇಡ ಅಂತ ಸುಮ್ಮನೆ ತಮ್ಮ ಪಾಡಿಗೆ ತಾವು ಪಾಲಿಗೆ ಬಂದಿರುವ ಶಿಕ್ಷೆಯನ್ನು ಅನುಭವಿಸುತ್ತಾರೋ ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಹೋಗೋ ಬಳ್ಳಾರಿ ಜೈಲಲ್ಲೂ ಇದ್ದಾರೆ ನಟೋರಿಯಸ್ ರೌಡಿಗಳು; ಒಬ್ಬೊಬ್ಬರ ಇತಿಹಾಸ ಭಯಾನಕ!

https://newsfirstlive.com/wp-content/uploads/2024/08/VICKY-SHETTY-TEAM.jpg

Load More