Advertisment

ಕಿಚ್ಚ ಸುದೀಪ್​ ಫ್ಯಾನ್ಸ್​ಗೆ ಗುಡ್​ನ್ಯೂಸ್​; ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್​ ಮಾಡೋಕೆ ಸಜ್ಜಾದ ಮ್ಯಾಕ್ಸ್

author-image
Veena Gangani
Updated On
ಕಿಚ್ಚನ ಫ್ಯಾನ್ಸ್​ಗೆ ಗುಡ್​ನ್ಯೂಸ್​.. ಥಿಯೇಟರ್ ಮುಂದೆ ಸುದೀಪ್ ತಾಯಿಗೆ ವಿಶೇಷ ಗೌರವ!
Advertisment
  • ಸಖತ್​ ಸುದ್ದಿಯಲ್ಲಿದೆ ಕಿಚ್ಚ ಸುದೀಪ್‌ ಬಹು ನಿರೀಕ್ಷಿತ ಸಿನಿಮಾ
  • ಮ್ಯಾಕ್ಸ್ ಸಿನಿಮಾ ತಂಡದಿಂದ ಬಹು ಮುಖ್ಯ ಘೋಷಣೆ.. ಏನದು?
  • ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ

ಸ್ಯಾಂಡಲ್​ವುಡ್​ ಸ್ಟಾರ್​ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಡೆಯಿಂದ ಅಭಿಮಾನಿಗಳಿಗೆ ಗುಡ್​ನ್ಯೂಸ್​ವೊಂದು ಸಿಕ್ಕಿದೆ.​ ಹೌದು, ‘ವಿಕ್ರಾಂತ್ ರೋಣಾ’ ಸಿನಿಮಾದ ಬಳಿಕ ಸುದೀಪ್ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹಾಗಾಗಿ ಅವರ ಅಭಿಮಾನಿಗಳಲ್ಲಿ ‘ಮ್ಯಾಕ್ಸ್’ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.

Advertisment

ಇದನ್ನೂ ಓದಿ: BBK11: ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಧರ್ಮನಿಗೆ ತಂದೆಯಿಂದ ಹೆಮ್ಮೆಯ ಮಾತು; ಹೇಳಿದ್ದೇನು?

publive-image

ಇದೀಗ ಬಹು ನಿರೀಕ್ಷಿತ ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾದಿಂದ ದೊಡ್ಡ ಅನೌನ್ಸ್‌ಮೆಂಟ್‌ಗೆ ದಿನಗಣನೆ ಶುರುವಾಗಿದೆ. ಇದೇ ನವೆಂಬರ್ 27ರಂದು ಮ್ಯಾಕ್ಸ್ ಚಿತ್ರ ಯಾವಾಗ ಬಿಡುಗಡೆ ಆಗಲಿದೆ ಎಂಬ ವಿಚಾರ ರಿವೀಲ್‌ ಆಗಲಿದೆ. ಮ್ಯಾಕ್ಸ್ ಸಿನಿಮಾ ತಂದದಿಂದ ಬಹು ಮುಖ್ಯ ಘೋಷಣೆಯೊಂದನ್ನು ಮಾಡುವುದಾಗಿ ಚಿತ್ರತಂಡ ಪೋಸ್ಟರ್​ವೊಂದನ್ನು ಬಿಡುಗಡೆ ಮಾಡಿದೆ. ಅಲ್ಲದೇ ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಬಾಲಿವುಡ್​ನ​ ಟಾಪ್​ B4U Motion Pictures ಹಕ್ಕುಗಳನ್ನು ಪಡೆದುಕೊಂಡಿದೆ. 

Advertisment


">November 24, 2024

ಕಿಚ್ಚ ಸುದೀಪ್​ ಅಭಿನಯದ ಮ್ಯಾಕ್ಸ್ ಪಕ್ಕಾ ಮಾಸ್ ಆಕ್ಷನ್‌ ಸಿನಿಮಾ ಇದಾಗಿದೆ. ಈ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸುತ್ತಿದ್ದಾರೆ.  ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ, ಕಲೈಪುಲಿ ಎಸ್ ಥಾನು, ವಿ ಕ್ರಿಯೇಷನ್ಸ್ ಬ್ಯಾನರ್ ಮತ್ತು ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಇನ್ನೂ ಈ ಸಿನಿಮಾದಲ್ಲಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಸೇರಿ ಇನ್ನೂ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡದ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಮ್ಯಾಕ್ಸ್​ ಸಿನಿಮಾ ಆಗಲಿದೆ. ಬಹುತೇಕ 2025ರ ಯುಗಾದಿ ಹಬ್ಬದ ಪ್ರಯುಕ್ತ ಈ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment