newsfirstkannada.com

ಮುರುಘಾ ಶ್ರೀ ಕೇಸ್‌ನಲ್ಲಿ ಬಿಗ್​​ ಅಪ್​ಡೇಟ್​​.. ಶಿವಮೂರ್ತಿ ಶರಣರಿಗೆ ನವೆಂಬರ್ 8 ನಿರ್ಣಾಯಕ ದಿನ

Share :

02-11-2023

    ಮುರುಘಾ ಶ್ರೀ ಬೇಲ್​ ಅರ್ಜಿ ವಿಚಾರಣೆ ಅಂತ್ಯ

    ಮುಂದಿನ ವಾರ ಹೈಕೋರ್ಟ್‌ನಿಂದ ಆದೇಶ ಪ್ರಕಟ

    ಬೇಲ್​​​ಗಾಗಿ ಹೈಕೋರ್ಟ್​ನಲ್ಲಿ ಫೈನಲ್​​ ಸರ್ಕಸ್

ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ಪೋಕ್ಸೋ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ನವೆಂಬರ್​​​ 8 ಮುಂದಿನ ಬುಧವಾರ ಸ್ವಾಮೀಜಿಗಳ ಜೈಲಿನ ಭವಿಷ್ಯ ನಿರ್ಧಾರವಾಗಲಿದೆ.

ಬೇಲ್​​​ಗಾಗಿ ಹೈಕೋರ್ಟ್​ನಲ್ಲಿ ಫೈನಲ್​​ ಬ್ಯಾಟಲ್​​ ನಡೆದಿದ್ದು, ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ. ನವೆಂಬರ್​​​​ 8 ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ಪಾಲಿಗೆ ಮಹತ್ವದ ದಿನ. ಪೋಕ್ಸೋ ಕಾಯ್ದೆ ಅಡಿ ಆರೋಪಿಯಾಗಿ ಜೈಲುವಾಸಿ ಆಗಿರುವ ಶರಣರು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮುರುಘಾ ಮಠದ ಪೀಠಾಧಿಪತಿಗಳ ಜಾಮೀನು ಅರ್ಜಿ ವಿಚಾರಣೆ ಪೂರ್ಣವಾಗಿದೆ. ಭರ್ತಿ ಮುಂದಿನ ವಾರ ಕರ್ನಾಟಕ ಹೈಕೋರ್ಟ್‌ ತನ್ನ ಆದೇಶ ಪ್ರಕಟಿಸಲಿದೆ.

ಮುರುಘಾ ಶ್ರೀ ಪೋಕ್ಸೋ ಕೇಸ್‌ನಲ್ಲಿ ಬಿಗ್​​ ಅಪ್​ಡೇಟ್​​!
ಶಿವಮೂರ್ತಿ ಶರಣರಿಗೆ ನವೆಂಬರ್​​ 8 ನಿರ್ಣಾಯಕ ದಿನ!

ಪೋಕ್ಸೋ ಕೇಸ್​ನಲ್ಲಿ ಅಂದರ್​​ ಆಗಿರುವ ಮುರುಘಾಶ್ರೀ ಜಾಮೀನು ಅರ್ಜಿ ವಿಚಾರಣೆ ಅಂತ್ಯ ಆಗಿದೆ. ಜಾಮೀನು ಕೋರಿ ಶಿವಮೂರ್ತಿ ಶ್ರೀ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನ ನ್ಯಾ. ಶ್ರೀನಿವಾಸ್‌ ಹರೀಶ್‌ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು. ನ.​​ 8ಕ್ಕೆ ಶಿವಮೂರ್ತಿ ಶ್ರೀಗಳ ಭವಿಷ್ಯವನ್ನೇ ನಿರ್ಧರಿಸುವ ಬೇಲ್​​​ ತೀರ್ಪನ್ನು ಹೈಕೋರ್ಟ್​​​ ಪೀಠ ಕಾಯ್ದಿಟ್ಟಿದೆ. ಇದಕ್ಕೂ ಮುನ್ನ ಏಕಸದಸ್ಯ ಪೀಠದ ಮುಂದೆ ಭಾರೀ ವಾದ-ಪ್ರತಿವಾದವೇ ನಡೆದಿದೆ. ಒಡನಾಡಿ ಸಂಸ್ಥೆ ಪರ ವಕೀಲರು, ಬೇಲ್​​ ನೀಡಿಕೆ ವೇಳೆ ಕೆಲ ಅಂಶಗಳನ್ನ ಪರಿಗಣಿಸುವಂತೆ ಮನವಿ ಮಾಡಿದೆ. ಆರೋಪಿ ಶಿವಮೂರ್ತಿ ಶರಣರು ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಜಾಮೀನು ನೀಡಿದ್ರೆ ಸಂತ್ರಸ್ತ ಮಕ್ಕಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆ. ಶರಣರ ನಡೆ ಬಗ್ಗೆ ಈಗಾಗಲೇ ಮ್ಯಾಜಿಸ್ಟ್ರೇಟ್​ ಮುಂದೆ ಬಾಲಕಿಯರ ಹೇಳಿಕೆ ದಾಖಲಾಗಿದೆ. ಆ ಹೇಳಿಕೆಗಳಲ್ಲಿ ಕೃತ್ಯದ ಅಂಶಗಳು ಸಂಪೂರ್ಣ ಬಿಂಬಿತವಾಗಿದೆ. ಈ ಎಲ್ಲಾ ಅಂಶಗಳನ್ನ ನ್ಯಾಯಪೀಠ ಗಂಭೀರವಾಗಿ ಪರಿಗಣಿಸಬೇಕು.

ಹೀಗೆ ಒಡನಾಡಿ ಸಂಸ್ಥೆ ಪರ ವಕೀಲ ಡಿ.ಸಿ. ಶ್ರೀನಿವಾಸ್‌ ತಮ್ಮ ವಾದ ಮಂಡಿಸಿದ್ದಾರೆ. ಸರ್ಕಾರ ಪರ ವಕೀಲರು ಸಹ ಶ್ರೀಗಳಿಗೆ ಜಾಮೀನು ನೀಡದಂತೆ ಮನವಿ ಮಾಡಿದ್ದಾರೆ. ಇನ್ನು ಸರ್ಕಾರದ ಎಎಜಿ ಬಿ.ಎನ್‌ ಜಗದೀಶ್‌ ವಾದ ಮಂಡಿಸಿದ್ದಾರೆ.

ಈ ವಾದಗಳನ್ನ ತಳ್ಳಿಹಾಕಿದ ಆರೋಪಿ ಪರ ಹಿರಿಯ ವಕೀಲ‌ ಸಿ.ವಿ ನಾಗೇಶ್​, ಬೇಲ್​​ ನೀಡುವಂತೆ ಕೆಲ ಅಂಶಗಳನ್ನ ಪ್ರಸ್ತಾಪಿಸಿದ್ದರು. ದೂರಿಗೂ ಮುನ್ನ ಸಂತ್ರಸ್ತ ಬಾಲಕಿಯರು ಬೆಂಗಳೂರಿಗೆ ಶಿಫ್ಟ್ ಆಗಿದ್ರು. ಯಾರ ಜೊತೆ ಇಲ್ಲದೆ ಬೆಂಗಳೂರಿಗೆ ಹೇಗೆ ಬರಲು ಸಾಧ್ಯ? ಲೈಂಗಿಕ ದೌರ್ಜನ್ಯ ಆಗಿದೆ ಅಂದ್ರೆ ತಮ್ಮ ಹಳ್ಳಿಗೇಕೆ ಹೋಗಲಿಲ್ಲ? ಬಾಲಕಿಯರು ತಮ್ಮ ಪೋಷಕರನ್ನು ಏಕೆ ಭೇಟಿ ಮಾಡಲಿಲ್ಲ? ಮೈಸೂರಿನ ಒಡನಾಡಿ ಸಂಸ್ಥೆ ಮುಖಾಂತರವೇ ದೂರು ನೀಡಿದ್ದೇಕೆ? ಹೀಗೆ ಕೆಲ ಪ್ರಶ್ನೆಗಳನ್ನ ಎತ್ತಿದ ಸಿ.ವಿ ನಾಗೇಶ್​, ಕೇಸ್​​ನಲ್ಲಿ ಕೆಲ ಸಂಶಯಗಳನ್ನ ಪ್ರಸ್ತಾಪಿಸಿದ್ದಾರೆ. ಸದ್ಯ ವಾದ–ಪ್ರತಿವಾದ ಆಲಿಸಿದ ಪೀಠವು ನ.8ರಂದು ಆದೇಶ ಪ್ರಕಟಿಸಲು ಸಂಭಾವ್ಯ ದಿನಾಂಕವನ್ನ ನೀಡಿದೆ. ಹೀಗಾಗಿ ನವೆಂಬರ್​ 8, ಮುರುಘಾಶ್ರೀ ಪಾಲಿಗೆ ನಿರ್ಣಾಯಕ ದಿನವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುರುಘಾ ಶ್ರೀ ಕೇಸ್‌ನಲ್ಲಿ ಬಿಗ್​​ ಅಪ್​ಡೇಟ್​​.. ಶಿವಮೂರ್ತಿ ಶರಣರಿಗೆ ನವೆಂಬರ್ 8 ನಿರ್ಣಾಯಕ ದಿನ

https://newsfirstlive.com/wp-content/uploads/2023/11/shree-2.jpg

Load More