Advertisment

ಸರ್ಕಾರದ ಕೈ ಸೇರಿದ ಜಾತಿ ಗಣತಿ.. ‘ಅದು ಜಾತಿ ಗಣತಿ ಅಲ್ಲ, ಕೇವಲ ವರದಿ’ ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ..!

author-image
Bheemappa
Updated On
ಸರ್ಕಾರದ ಕೈ ಸೇರಿದ ಜಾತಿ ಗಣತಿ.. ‘ಅದು ಜಾತಿ ಗಣತಿ ಅಲ್ಲ, ಕೇವಲ ವರದಿ’ ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ..!
Advertisment
  • ಜಾತಿಗಣತಿ ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ನಾಯಕರು
  • ಅವೈಜ್ಞಾನಿಕ ವರದಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪ
  • ಬಿಜೆಪಿ ವಿರೋಧದ ನಡುವೆ ರಾಜ್ಯ ಸರ್ಕಾರ ಯಾವ ನಿರ್ಧಾರಕ್ಕೆ ಬರುತ್ತೆ?

ರಾಜ್ಯದಲ್ಲಿ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿರುವ ಜಾತಿಗಣತಿ ವರದಿ ಕೊನೆಗೂ ಸರ್ಕಾರದ ಕೈ ಸೇರಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಜಾತಿಗಣತಿ ರಿಪೋರ್ಟ್‌ ಸಲ್ಲಿಸಿದೆ. ಇದೀಗ ಜಾತಿಗಣತಿ ವರದಿಗೆ ವೀರಶೈವ ಮಹಾಸಭಾ ಭಾರೀ ವಿರೋಧ ವ್ಯಕ್ತಪಡಿಸಿದೆ. ಜೊತೆಗೆ ಬಿಜೆಪಿ ನಾಯಕರು ಕಾಸ್ಟ್‌ ಸೆನ್ಸಸ್‌ ರಿಪೋರ್ಟ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisment

ಜಾತಿಗಣತಿ ವರದಿ 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ನಡೆಸಿದ್ದ ಕರ್ನಾಟಕದ ಸಾಮಾಜಿಕ-ಆರ್ಥಿಕ ಸಮೀಕ್ಷೆ. ಹಿಂದುಳಿದ ಸಮಾಜಗಳನ್ನ ಮೇಲೆತ್ತುವ ನಿಟ್ಟಿನಲ್ಲಿ ಅಹಿಂದ ನಾಯಕ ಕೈಗೊಂಡಿದ್ದ ಮಹತ್ವದ ನಿರ್ಧಾರ. ಇದೀಗ ಕೊನೆಗೂ ಜಾತಿಗಣತಿ ವರದಿ ಸರ್ಕಾರದ ಕೈ ಸೇರಿದೆ. ಆದ್ರೆ, ಈ ವರದಿಗೆ ಹಲವು ಸಮಾಜಗಳು ಆಕ್ಷೇಪ ವ್ಯಕ್ತಪಡಿಸಿವೆ.

publive-image

ವರದಿ ತಿರಸ್ಕರಿಸುವಂತೆ ವೀರಶೈವ ಮಹಾಸಭಾ ಒತ್ತಾಯ

ಬಹು ನಿರೀಕ್ಷಿತ ಮತ್ತು ರಾಜ್ಯ ರಾಜಕೀಯದಲ್ಲಿ ಕಿಚ್ಚು ಹಚ್ಚಿದ ಜಾತಿಗಣತಿ ರಿಪೋರ್ಟ್​ ಸಲ್ಲಿಕೆಯಾಗಿದೆ. ಹಿಂದುಳಿದ ವರ್ಗಗಳ ಆಯೋಗ ಸಿಎಂ ಸಿದ್ದರಾಮಯ್ಯ ಕೈಗೆ ಜಾತಿಗಣತಿ ವರದಿಯನ್ನ ಸಲ್ಲಿಸಿದೆ. ಇದೀಗ ಜಯಪ್ರಕಾಶ್ ಹೆಗ್ಡೆ ಸಲ್ಲಿಸಿರೋ ವರದಿಯನ್ನ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ವಿರೋಧಿಸಿದೆ. ಈಗ ಸರ್ಕಾರಕ್ಕೆ ಸಲ್ಲಿಸಿರುವ ವರದಿ 8 ವರ್ಷ ಹಳೆಯದಾಗಿದೆ. ಈ 8 ವರ್ಷದಲ್ಲಿ ಜಾತಿವಾರು ಜನಸಂಖ್ಯೆಯಲ್ಲಿ ಏರುಪೇರಾಗಿದೆ. ಈ ವರದಿಯನ್ನ ಅಂಗೀಕರಿಸಿದ್ರೆ ವೀರಶೈವ-ಲಿಂಗಾಯತರಿಗೆ ಅನ್ಯಾಯವಾಗಲಿದೆ. ಹೀಗಾಗಿ ಜಾತಿಗಣತಿ ವರದಿಯನ್ನ ತಿರಸ್ಕರಿಸುವಂತೆ ವೀರಶೈವ ಮಹಾಸಭಾ ಒತ್ತಾಯಿಸಿದೆ.

ವರದಿಯೇ ಸರಿಯಿಲ್ಲ ಎಂದ ಅಶೋಕ್, ಪ್ರಲ್ಹಾದ್ ಜೋಶಿ

ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಿಕೆಯಾಗಿರೋ ಜಾತಿಗಣತಿ ಸಮೀಕ್ಷೆ ವರದಿಯನ್ನ ಬಿಜೆಪಿ ತೀವ್ರವಾಗಿ ವಿರೋಧಿಸಿದೆ. ಜನಗಣತಿ ವರದಿಯೇ ಸರಿಯಿಲ್ಲ. ಇದು ಗಣತಿ ಅಲ್ಲ ಕೇವಲ ವರದಿ ಅಂತ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಇತ್ತ ಇದೊಂದು ಅವೈಜ್ಞಾನಿಕ ವರದಿ ಅಂತ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ಶೀಘ್ರವೇ ಈ ವರದಿ ಬಹಿರಂಗವಾಗಲಿ ಅಂತ ಮಾಜಿ ಸಿಎಂ ಬೊಮ್ಮಾಯಿ ಆಗ್ರಹಿಸಿದ್ದಾರೆ.

Advertisment

‘ಇದು ಗಣತಿ ಅಲ್ಲ, ಕೇವಲ ವರದಿ’

ಅದೊಂದು ಜಾತಿ ಗಣತಿಯಲ್ಲ, ಸರ್ವೇ ಆಗಿದೆ. ಗಣತಿ ಮಾಡುವುದು ಕೇಂದ್ರಕ್ಕೆ ಮಾತ್ರ ಇರೋದು. ಸರ್ವೇದಲ್ಲಿ ಸಂಬಂಧಿಸಿದ ವಿಷಯದಲ್ಲಿ ವಿವರವಾಗಿ ನೋಡುತ್ತೇವೆ. ಲೀಕ್ ಆಗಿದ್ದರ ಮಾಹಿತಿ ಪ್ರಕಾರ ಅಂಕಿ ಸಂಖ್ಯೆಗಳು ಸರಿ ಇರಲಿಲ್ಲ. ಮನೆ ಮನೆಗೆ ಹೋಗಿಲ್ಲ. ಈ ರೀತಿ ಮಾಡಲಾಗಿದೆ.

ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ

publive-image

ಈಗಾಗಲೇ ಕೊಟ್ಟಿರುವ ವರದಿ ಅವೈಜ್ಞಾನಿಕವಾಗಿದೆ. ಒಕ್ಕಲಿಗ, ಲಿಂಗಾಯತ ಸಮುದಾಯದವರು ಎಲ್ಲ ಶಾಸಕರು ಸೇರಿದಂತೆ ಡಿಕೆ ಶಿವಕುಮಾರ್​​ನಿಂದ ಹಿಡಿದು ಎಂಪಿ ಪಾಟೀಲ್​ವರೆಗೆ ವಿರೋಧ ಮಾಡಿದ್ದಾರೆ.

ಆರ್.ಅಶೋಕ್, ವಿಪಕ್ಷ ನಾಯಕ

ಇನ್ನೂ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ವರದಿಯನ್ನ ಬಹಿರಂಗಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಚಂದ್ರು 2021ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿ ಹೊಳೆನರಸೀಪುರದ ವಕೀಲ ಓ.ಕೆ ರಘು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಇದೀಗ ಈ ಅರ್ಜಿಯ ವಿಚಾರಣೆಯನ್ನ ಇವತ್ತು ಹೈಕೋರ್ಟ್‌ ಕೈಗೆತ್ತಿಕೊಳ್ಳಲಿದೆ. ರಾಜ್ಯ ಸರ್ಕಾರದ ಕೈ ಸೇರಿರೋ ಜಾತಿಗಣತಿ ವರದಿ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.. ಇದೀಗ ವಿರೋಧದ ಮಧ್ಯೆ ಸರ್ಕಾರ ಯಾವ ನಿರ್ಧಾರಕ್ಕೆ ಬರುತ್ತೆ ಅನ್ನೋದೆ ಸದ್ಯದ ಕುತೂಹಲ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment