newsfirstkannada.com

ರಿಲೀಸ್​​ ಬೆನ್ನಲ್ಲೇ ಮುರುಘಾ ಶ್ರೀಗಳ ಬಂಧನಕ್ಕೆ ಸ್ಟ್ಯಾನ್ಲಿಯಿಂದ ಒತ್ತಾಯ.. ಕಾರಣವೇನು..?

Share :

16-11-2023

    ಸಾಮಾನ್ಯರಿಗೊಂದು, ಉಳ್ಳವರಿಗೆ ಮತ್ತೊಂದು ಕಾನೂನು ಆಗಬಾರದು

    ಮುರುಘಾ ಶ್ರೀಗಳನ್ನ ತಕ್ಷಣವೇ ಎರಡನೇ ಪ್ರಕರಣದಲ್ಲಿ ಬಂಧಿಸಬೇಕು

    ಸಂತ್ರಸ್ತ ಮಕ್ಕಳ ಪೋಷಕರ ಜೊತೆ ಮಾತನಾಡಿ ಮುಂದಿನ ತೀರ್ಮಾನ

ಮೈಸೂರು: ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮುರುಘಾ ಶ್ರೀಗಳಿಗೆ ಭವ್ಯ ಸ್ವಾಗತ ಕೋರಿರುವುದನ್ನ ಒಡನಾಡಿ ಸಂಸ್ಥೆಯ ನಿರ್ದೇಶಕರು ಖಂಡಿಸಿದ್ದಾರೆ. ನ್ಯೂಸ್ ಫಸ್ಟ್ ಜೊತೆ ಮಾತಾಡಿರುವ ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ಅವರು, ಇದು ನಮಗೆ ಯಾವುದೇ ಅಪಜಯವಲ್ಲ. ಇದೇ ರೀತಿ ಬೇರೆ ಸಾಮಾನ್ಯರಿಗೆ ಆದರೆ ಇದೇ ಕಾನೂನು ಜಾರು ಆಗುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ.

‘ಭವ್ಯ ಸ್ವಾಗತ ಕೋರುವುದು ಸರಿಯಲ್ಲ’

ಜನ ಸಾಮಾನ್ಯರಿಗೊಂದು, ಉಳ್ಳವರಿಗೆ ಮತ್ತೊಂದು ಕಾನೂನು ಆಗಬಾರದು. ಮುರುಘಾ ಶ್ರೀಗಳು ಒಲಿಂಪಿಕ್ಸ್‌ನಲ್ಲಿ ಮೆಡಲ್ ತೆಗೆದುಕೊಂಡು ಬಂದಿಲ್ಲ. ಅವರನ್ನ ಆ ರೀತಿ ಭವ್ಯ ಸ್ವಾಗತ ಕೋರುವುದು ಸರಿಯಲ್ಲ. ಎರಡನೇ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿಲ್ಲ. ಅವರನ್ನ ತಕ್ಷಣ ಎರಡನೇ ಪ್ರಕರಣದಲ್ಲಿ ಬಂಧಿಸಬೇಕು ಎಂದು ಸ್ಟ್ಯಾನ್ಲಿ ಆಗ್ರಹಿಸಿದ್ದಾರೆ.

ಉನ್ನತ ತನಿಖೆಗೆ ಆದೇಶಿಸುವಂತೆ ಆಗ್ರಹ

ಮತ್ತೊಬ್ಬ ಒಡನಾಡಿ ಸಂಸ್ಥೆಯ ನಿರ್ದೇಶಕ ಪರಶು ಅವರು ಮಾತನಾಡಿ, ಇದು ನಿಜಕ್ಕೂ ಕೆಟ್ಟ ಬೆಳವಣಿಗೆ. ಅಂತಹ ಸಂಭ್ರಮಾಚರಣೆ ಮಾಡುವುದು ಸರಿಯಲ್ಲ. ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಕೂಡ ಜೈಲಿನಿಂದ ಹೊರ ಬಂದವರ ಸ್ವಾಗತಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಮುರುಘಾಶ್ರೀ ಬಿಡುಗಡೆ ಬಳಿಕ ಸಂಭ್ರಮಾಚರಣೆ ಸರಿಯಲ್ಲ ಎಂದಿದ್ದಾರೆ.

ಇನ್ನು, ಮಕ್ಕಳಿಗೆ ಆದಂತಹ ಅನ್ಯಾಯಕ್ಕೆ ಮೊದಲ ಹಂತದಲ್ಲಿ ನ್ಯಾಯ ಸಿಕ್ಕಿದೆ. ಅದೇ ರೀತಿ ಹಲವು ಮಕ್ಕಳಿಗೆ ಅನ್ಯಾಯ ಎಸಗಲಾಗಿದೆ. ಆ ಅನ್ಯಾಯದ ಕುರಿತು ತನಿಖೆ ಆಗಲೇಬೇಕು. ಮುಂದಿನ ಕಾನೂನು ಹೋರಾಟಕ್ಕೆ ನಾವು ಸಿದ್ಧವಿದ್ದೇವೆ. ವಕೀಲರ ಜೊತೆ ಈಗಾಗಲೇ ಚರ್ಚೆ ನಡೆದಿದೆ. ನಾವು ಸದಾ ಕಾಲ ಮಕ್ಕಳ ಜೊತೆ ನಿಲ್ತೀವಿ. ಸಂತ್ರಸ್ತ ಮಕ್ಕಳ ಪೋಷಕರ ಜೊತೆ ಮಾತನಾಡಿ ತೀರ್ಮಾನ ಮಾಡುತ್ತೇವೆ. ನಾವು ಈಗಲೂ ಉನ್ನತ ಮಟ್ಟದ ತನಿಖೆಗೆ ಆದೇಶಿಸುವಂತೆ ಆಗ್ರಹಿಸುತ್ತೇವೆ ಎಂದು ಒಡನಾಡಿ ಸಂಸ್ಥೆಯ ನಿರ್ದೇಶಕ ಪರಶು ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿಲೀಸ್​​ ಬೆನ್ನಲ್ಲೇ ಮುರುಘಾ ಶ್ರೀಗಳ ಬಂಧನಕ್ಕೆ ಸ್ಟ್ಯಾನ್ಲಿಯಿಂದ ಒತ್ತಾಯ.. ಕಾರಣವೇನು..?

https://newsfirstlive.com/wp-content/uploads/2023/11/Murugha-swamiji-Odanadi.jpg

Load More