newsfirstkannada.com

‘ಸ್ವಾಮೀಜಿ ರಕ್ಷಣೆ ಮಾಡುತ್ತಿದ್ದವರಿಗೆ ಶಾಕ್‌’- ಮುರುಘಾ ಶ್ರೀ ಬಂಧನದ ಬಳಿಕ ಒಡನಾಡಿ ಸಂಸ್ಥೆಯ ಪರಶು ಪ್ರತಿಕ್ರಿಯೆ

Share :

20-11-2023

    ಸ್ವಾಮೀಜಿಯನ್ನ ರಕ್ಷಣೆ ಮಾಡಲು ಕೆಲವರು ಮುಂದಾಗಿದ್ದರು

    ಕಾನೂನು ಎಲ್ಲಕ್ಕಿಂತ ದೊಡ್ಡದು ಎಂಬುದು ಈಗ ಸಾಬೀತಾಗಿದೆ

    ಮುಂದಿನ ಕಾನೂನು ಹೋರಾಟಗಳಿಗೂ ನಾವು ಸಿದ್ಧ ಇದ್ದೇವೆ

ಮೈಸೂರು: ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯ ನೀಡಿದ 2ನೇ ಪೋಕ್ಸೋ ಕೇಸ್‌ನಲ್ಲಿ ಮುರುಘಾ ಮಠದ ಶಿವಮೂರ್ತಿ ಶರಣರನ್ನ ಪೊಲೀಸರು ಬಂಧಿಸಿದ್ದಾರೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಿಡುಗಡೆಯಾದ ನಾಲ್ಕೇ ದಿನದಲ್ಲಿ ಮತ್ತೊಮ್ಮೆ ಜೈಲುವಾಸ ಗ್ಯಾರಂಟಿ ಆಗಿದೆ.

ಮುರುಘಾ ಶ್ರೀಗಳ ಬಂಧನದ ಬಳಿಕ ಮೈಸೂರು ಒಡನಾಡಿ ಸಂಸ್ಥೆಯ ಪರಶುರಾಮ್ ಅವರು ನ್ಯೂಸ್ ಫಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ಮಕ್ಕಳಿಗೆ ಸಿಕ್ಕ ಮತ್ತೊಂದು ಜಯ. ನಾವು ಅವರನ್ನ ಬಿಡುಗಡೆ ಮಾಡಲು ಮುಂದಾಗಿದ್ದಾಗಲೇ ಆಕ್ಷೇಪ ವ್ಯಕ್ತಪಡಿಸಿದ್ದೆವು. ಕಾನೂನಿನ ಪ್ರಕಾರ ನಡೆದುಕೊಳ್ಳಿ ಎಂದು ಕೂಗಿ ಹೇಳಿದ್ದೆವು. ಆ ಸಂದರ್ಭದಲ್ಲಿ ನಮ್ಮ ಹೇಳಿಕೆಯನ್ನ ಎಲ್ಲರೂ ನಿರ್ಲಕ್ಷ್ಯ ಮಾಡಿದ್ದರು. ಆದರೆ ಈಗ ಕಾನೂನು ಸರಿಯಾದ ಚಾಟಿ ಬೀಸಿದೆ ಎಂದು ಪರಶುರಾಮ್ ಹೇಳಿದ್ದಾರೆ.

ಮುಂದುವರಿದು ಮಾತನಾಡಿರುವ ಪರಶುರಾಮ್ ಅವರು, ಉದ್ದೇಶಪೂರ್ವಕಾಗಿ ಸ್ವಾಮೀಜಿಯನ್ನ ಸಂರಕ್ಷಣೆ ಮಾಡಲು ಕೆಲವರು ಮುಂದಾಗಿದ್ದರು. ಕಾನೂನಿ‌ನ ಕಣ್ಣಿಗೆ ಮಣ್ಣೆರಚಿ ಸ್ವಾಮೀಜಿ ರಕ್ಷಣೆ ಮಾಡುತ್ತಿದ್ದರು. ಆದರೆ, ಕಾನೂನು ಎಲ್ಲಕ್ಕಿಂತ ದೊಡ್ಡದು ಎಂಬುದು ಸಾಬೀತಾಗಿದೆ. ನಾವು ಇಷ್ಟಕ್ಕೆ ಸುಮ್ಮನೆ ಕೂರುವುದಿಲ್ಲ. ಸಂತ್ರಸ್ತೆ ಮಕ್ಕಳ ರಕ್ಷಣೆಗೆ ಸದಾ ಬೆನ್ನುಲುಬಾಗಿ ನಿಲುತ್ತೇವೆ. ಮುಂದಿನ ಕಾನೂನು ಹೋರಾಟಗಳಿಗೂ ಕೂಡ ಸಿದ್ಧ ಇದ್ದೇವೆ. ಮೊದಲ ಪೋಕ್ಸೋ ಪ್ರಕರಣದ ಬಿಡುಗಡೆ ವೇಳೆ ಲೋಪ ಎಸಗಿರುವದರ ವಿರುದ್ಧವೂ ಕಾನೂನು ಸಮರ ನಡೆಸುತ್ತೇವೆ ಎಂದು ಪರಶುರಾಮ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸ್ವಾಮೀಜಿ ರಕ್ಷಣೆ ಮಾಡುತ್ತಿದ್ದವರಿಗೆ ಶಾಕ್‌’- ಮುರುಘಾ ಶ್ರೀ ಬಂಧನದ ಬಳಿಕ ಒಡನಾಡಿ ಸಂಸ್ಥೆಯ ಪರಶು ಪ್ರತಿಕ್ರಿಯೆ

https://newsfirstlive.com/wp-content/uploads/2023/11/Murugha-Swamiji-Arrest-1.jpg

Load More