newsfirstkannada.com

ODI World Cup 2023: ಶ್ರೇಯಸ್​ ಡೌಟ್​​, ರಿಷಭ್​ ಔಟ್​.. ಗಾಯಗೊಂಡ ಸ್ಟಾರ್​ಗಳ ಕಮ್​ಬ್ಯಾಕ್​ ಯಾವಾಗ?

Share :

18-07-2023

    ಏಕದಿನ ವಿಶ್ವಕಪ್​ ಟೂರ್ನಿಗೆ​ ಎರಡೂವರೆ ತಿಂಗಳು ಬಾಕಿ

    ಇಂಜುರಿಗೆ ತುತ್ತಾದ ಆಟಗಾರರ ಕಮ್​ಬ್ಯಾಕ್​ ಯಾವಾಗ?

    ಆಟಗಾರರ ಬಗ್ಗೆ NCA ಹೊರ ಹಾಖಿದ ಮಾಹಿತಿ ಏನು ಗೊತ್ತಾ?

ಏಕದಿನ ವಿಶ್ವಕಪ್​ ಟೂರ್ನಿಗೆ ಜಸ್ಟ್​ ಎರಡೂವರೆ ತಿಂಗಳು ಮಾತ್ರ ಬಾಕಿ. ತವರಿನಲ್ಲಿ ನಡೆಯೋ ಪ್ರತಿಷ್ಟಿತ ಟೂರ್ನಿಯಲ್ಲಿ ಭಾರತ ಚಾಂಪಿಯನ್​ ಪಟ್ಟಕ್ಕೇರಬೇಕು ಅನ್ನೋದು ಅಭಿಮಾನಿಗಳ ಕನಸಾಗಿದೆ. ಟೀಮ್​ ಇಂಡಿಯಾ ತವರಿನಲ್ಲಿ ಟ್ರೋಫಿ ಎತ್ತಿ ಹಿಡಿಬೇಕು ಎಂದು ಕನಸು ಕಾಣ್ತಿರೋ ಫ್ಯಾನ್ಸ್​, ಒಂದು ಆತಂಕವೂ ಬಿಡದೇ ಕಾಡ್ತಿದೆ.

NCA ಸೇರಿದ ಆಟಗಾರರ ಕಮ್​ಬ್ಯಾಕ್​ ಯಾವಾಗ.?

ಹೌದು. ಟೀಮ್​ ಇಂಡಿಯಾದ ಪ್ರಮುಖ ಆಟಗಾರರು ಗಾಯಗೊಂಡು ತಂಡದಿಂದ ಹೊರ ಬಿದ್ದು ಕಾಲವೇ ಉರುಳಿದೆ. ಇವರ ಅಲಭ್ಯತೆ ಟೀಮ್​ ಇಂಡಿಯಾವನ್ನ ಕಾಡ್ತಿದ್ದು, ಎನ್​ಸಿಎ ಸೇರಿರುವ ಇವರ ಕಮ್​ಬ್ಯಾಕ್​ ಬಗ್ಗೆ ಸ್ಪಷ್ಟತೆಯೇ ಇಲ್ಲ. ಬಿಸಿಸಿಐ ಅಧಿಕೃತ ಮಾಹಿತಿಯನ್ನ ರಿಲೀಸ್​ ಮಾಡಿಲ್ಲ. ಆದ್ರೆ, ಎನ್​ಸಿಎ ಮೂಲಗಳು ಲೇಟೆಸ್ಟ್ ಅಪ್​ಡೇಟ್​ ಬಗ್ಗೆ ಮಾಹಿತಿ ನೀಡಿವೆ.

ಏಷ್ಯಾಕಪ್​ಗೆ ಶ್ರೇಯಸ್​​ ಅಯ್ಯರ್​ ಡೌಟ್​​​.!

ಕಳೆದ ಮಾರ್ಚ್​ನಲ್ಲಿ ಇಂಡೋ – ಆಸಿಸ್​​ ಟೆಸ್ಟ್​ ಸರಣಿ ನಡುವೆ ಬ್ಯಾಕ್​ ಇಂಜುರಿಗೆ ತುತ್ತಾದ ಶ್ರೇಯಸ್​ ಅಯ್ಯರ್​​, ಎನ್​ಸಿಎನಲ್ಲಿ ರಿಹ್ಯಾಬ್​ಗೆ ಒಳಗಾಗಿದ್ದಾರೆ. ಎರಡೂ ದಿನದ ಹಿಂದೆ ಬ್ಯಾಟಿಂಗ್​ ಅಭ್ಯಾಸವನ್ನೂ ನಡೆಸಿದ್ದಾರೆ. ಆದ್ರೂ ಕಮ್​ಬ್ಯಾಕ್​ ಮಾಡೋದು ಅನುಮಾನವಾಗಿದೆ. ಎನ್​ಸಿಎ ಮೂಲಗಳು ಹೇಳೋ ಪ್ರಕಾರ ಶ್ರೇಯಸ್​ ಚೇತರಿಕೆ ಅಂದುಕೊಂಡಿದ್ದಕ್ಕಿಂತ ನಿಧಾನಗತಿಯಲ್ಲಿದ್ದು, ಏಷ್ಯಾಕಪ್​ ವೇಳೆಗೆ ತಂಡದ ಸೇರೋದು ಅನುಮಾನವಾಗಿದೆ.

ಐರ್ಲೆಂಡ್​ ಸರಣಿಯಲ್ಲಿ ಬೂಮ್ರಾ ಕಣಕ್ಕೆ.!

ಕಳೆದ ಮಾರ್ಚ್​ನಲ್ಲಿ ಬೆನ್ನಿನ​ ಸರ್ಜರಿಗೆ ಒಳಗಾಗಿರುವ ವೇಗಿ ಜಸ್​ಪ್ರಿತ್​ ಬೂಮ್ರಾ, ಶೀಘ್ರದಲ್ಲೇ ಮೈದಾನಕ್ಕಿಳಿಯಲಿದ್ದಾರೆ. ಸದ್ಯ ಎನ್​ಸಿಎನಲ್ಲಿ ರಿಹ್ಯಾಬ್​ ಒಳಗಾಗಿರುವ ಬೂಮ್ರಾ, ಬೌಲಿಂಗ್​ ಅಭ್ಯಾಸವನ್ನ ಆರಂಭಿಸಿದ್ದಾರೆ. ಮುಂಬರುವ ಐರ್ಲೆಂಡ್​ ಸರಣಿಯ ವೇಳೆಗೆ ಬೂಮ್ರಾ ಫುಲ್​​ ಫಿಟ್​ ಆಗೋ ಸಾಧ್ಯತೆ ದಟ್ಟವಾಗಿದೆ.

ರಾಹುಲ್​ ಕಮ್​ಬ್ಯಾಕ್ ಬಗ್ಗೆ​ ಕ್ಲಾರಿಟಿನೇ ಇಲ್ಲ..!

ಕನ್ನಡಿಗ ಕೆ.ಎಲ್​ ರಾಹುಲ್​ ಯಾವಾಗ ಕಮ್​ಬ್ಯಾಕ್​ ಮಾಡ್ತಾರೆ ಅನ್ನೋದ್ರ ಬಗ್ಗೆ ಕ್ಲಾರಿಟಿನೇ ಇಲ್ಲದಂತಾಗಿದೆ. ಲಂಡನ್​ನಲ್ಲಿ ಸರ್ಜರಿ ಒಳಗಾಗಿ ಬಂದ ರಾಹುಲ್​, ವಿಶ್ರಾಂತಿಯ ಬಳಿ ಎನ್​ಸಿಎ ಸೇರಿದ್ದಾರೆ. ಫಿಟ್​​ನೆಸ್​​ ವರ್ಕೌಟ್​ಗಳನ್ನ ಮಾಡ್ತಿರೋ ರಾಹುಲ್​, ಇನ್ನೂ ಬ್ಯಾಟಿಂಗ್ ಅಭ್ಯಾಸ ಮಾಡುವಷ್ಟು ಫಿಟ್​ ಆಗಿಲ್ಲ ಅನ್ನೋದು ಎನ್​ಸಿಎ ಮಾಹಿತಿಯಾಗಿದೆ. ಹೀಗಾಗಿ ಏಷ್ಯಾಕಪ್​ ಲಭ್ಯರಾಗೋದು ಅನುಮಾನವೇ..!

ವಿಶ್ವಕಪ್​ನಿಂದ ರಿಷಭ್​ ಪಂತ್​ ಔಟ್​​.!

ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ರಿಷಭ್​ ಪಂತ್​ ಈ ಬಾರಿಯ ವಿಶ್ವಕಪ್​ ಟೂರ್ನಿಯಿಂದ ಹೊರ ಬೀಳೋದು ಬಹುತೇಕ ಕನ್​ಫರ್ಮ್​. ಸದ್ಯ ಯಾವುದರ ಸಹಾಯವಿಲ್ಲದೆ ಪಂತ್​ ನಡೆಯಲು ಆರಂಭಿಸಿದ್ದಾರೆ. ವೇಗವಾಗಿ ಚೇತರಿಸಿಕೊಳ್ತಾ ಇದ್ರೂ, ಫುಲ್​ ಫಿಟ್​ ಆಗಲು ಇನ್ನೂ ಹೆಚ್ಚಿನ ಸಮಯಬೇಕಿದೆ. ಚೇತರಿಕೆ ಕಂಡರೂ ವಿಕೆಟ್​ ಕೀಪಿಂಗ್​ ಮಾಡುವಷ್ಟು ಫಿಟ್​ ಆಗ್ತಾರಾ ಅನ್ನೋದು ಇನ್ನೂ ಉತ್ತರ ಸಿಗದ ಪ್ರಶ್ನೆಯಾಗಿದೆ.

ವಿಶ್ವಕಪ್​​ಗೆ ಸಿದ್ಧತೆ ಆರಂಭಿಸಿರೋ ಬಿಸಿಸಿಐ ಹಾಗೂ ಟೀಮ್​ ಮ್ಯಾನೇಜ್​ಮೆಂಟ್​​ಗೆ ಈ ಸ್ಟಾರ್​ಗಳು ಇಂಜುರಿ ಸದ್ಯ ತಲೆನೋವಾಗಿದೆ. ಪ್ರಮುಖರು ಅಲಭ್ಯರಾದ್ರೆ, ಇವರ ಸ್ಥಾನಕ್ಕೆ ಯಾರನ್ನ ಆಯ್ಕೆ ಮಾಡಬೇಕು ಎಂಬುದು ಗೊಂದಲಕ್ಕೀಡು ಮಾಡಿದೆ. ಹೀಗಾಗಿ ಬ್ಯಾಕ್​ ಅಪ್​ ಪ್ಲೇಯರ್​​ಗಳ ಆಯ್ಕೆಗೆ ಸರ್ಕಸ್​​ ಶುರುವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ODI World Cup 2023: ಶ್ರೇಯಸ್​ ಡೌಟ್​​, ರಿಷಭ್​ ಔಟ್​.. ಗಾಯಗೊಂಡ ಸ್ಟಾರ್​ಗಳ ಕಮ್​ಬ್ಯಾಕ್​ ಯಾವಾಗ?

https://newsfirstlive.com/wp-content/uploads/2023/07/Rishab-pant-1.jpg

Load More