27 ವರ್ಷಕ್ಕೆ ಇಹಲೋಕ ತ್ಯಜಿಸಿದ ಪ್ರಸಿದ್ಧ ಗಾಯಕಿ
ಮೃತ ಗಾಯಕಿಯ ತಾಯಿಯಿಂದ ಗಂಭೀರ ಆರೋಪ
ಆಗಸ್ಟ್ 27 ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ, ಏಮ್ಸ್ನಲ್ಲಿ ನಿಧನ
ಜನಪ್ರಿಯ ಒಡಿಯಾ ಗಾಯಕಿ ರುಕ್ಸಾನಾ ಬಾನೋ (Ruksana Bano) ನಿಧನರಾಗಿದ್ದಾರೆ ಎಂದು ಭುವನೇಶ್ವರದ AIIMS ಆಸ್ಪತ್ರೆ ತಿಳಿಸಿದೆ. 27 ವರ್ಷದ ಗಾಯಕಿ ಸ್ಕ್ರಬ್ ಟೈಫಸ್ಗೆ (Scrub Typhus) ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಅದರ ನಡುವೆ ಮೃತ ಗಾಯಕಿಯ ಸಹೋದರಿ ಹಾಗೂ ತಾಯಿ, ಪ್ರತಿಸ್ಪರ್ಧಿಗಳು ಆಕೆಗೆ ವಿಷ ಉಣಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಅವರು ಆರೋಪಿತ ಕಲಾವಿದರ ಹೆಸರನ್ನು ಬಹಿರಂಗ ಮಾಡಿಲ್ಲ. ಈ ಹಿಂದೆಯೂ ಕೂಡ ಇಂತಹ ಬೆದರಿಕೆಗಳು ಬಂದಿದ್ದವು ಎಂದು ಹೇಳಿದ್ದಾರೆ.
ಕುಟುಂಸ್ಥರು ನೀಡಿರುವ ಮಾಹಿತಿ ಪ್ರಕಾರ ಕಳೆದ 15 ದಿನಗಳ ಹಿಂದೆ ಶೂಟಿಂಗ್ ಹೋಗಿದ್ದರು. ಅಲ್ಲಿ ಜ್ಯೂಸ್ ನೀಡಲಾಗಿತ್ತು, ಅದನ್ನು ಕುಡಿದ ಬೆನ್ನಲ್ಲೇ ಅವರು ಕುಸಿದು ಬಿದ್ದಿದ್ದಾರೆ. ಆಗಸ್ಟ್ 27 ರಂದು ಭವಾನಿಪಟ್ನಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ:Adani big Deal: ದೇಶದ ಅತ್ಯಂತ ಹಳೆಯ ಕಂಪನಿ ಖರೀದಿಸಿದ ಗೌತಮ್ ಅದಾನಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ