newsfirstkannada.com

ಮಧ್ಯರಾತ್ರಿ ಡ್ರೈವರ್​ಗೆ ಕಾರ್ಡಿಯಾಕ್ ಅರೆಸ್ಟ್.. 48 ಪ್ರಯಾಣಿಕರ ಜೀವ ಉಳಿಸಿ ಉಸಿರು ಚೆಲ್ಲಿದ ಚಾಲಕ

Share :

29-10-2023

  ಪ್ರಯಾಣಿಕರಿಗೆ ವಿಷಯ ಗೊತ್ತಾಗುತ್ತಿದ್ದಂತೆ ಜೀವ ಕೈಗೆ ಬಂದಿತ್ತು

  48 ಪ್ರಯಾಣಿಕರ ಜೀವ ಉಳಿಸಿದ ಚಾಲಕ ಬದುಕಿ ಬರಲಿಲ್ಲ

  ಒಡಿಶಾದ ಕಂಧಮಲ್ ಜಿಲ್ಲೆಯಲ್ಲಿ ದಾರುಣ ಘಟನೆ

48 ಪ್ರಯಾಣಿಕರನ್ನು ಕೂರಿಸಿಕೊಂಡು ಕರೆದೊಯ್ಯುತ್ತಿದ್ದ ಬಸ್​ ಡ್ರೈವರ್​ಗೆ ರಾತ್ರಿ ಹಠಾತ್ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು. ತನಗೆ ಏನೋ ಆಗುತ್ತಿದೆ ಅನ್ನೋದನ್ನು ಅರಿತ ಡ್ರೈವರ್​, ರಸ್ತೆಯ ತಡೆಗೋಡೆಗೆ ಬಸ್ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾನೆ. ಈ ಮೂಲಕ 48 ಪ್ರಯಾಣಿಕರ ಜೀವ ಉಳಿಸಿ, ಚಾಲಕ ಸಾವನ್ನಪ್ಪಿದ್ದಾನೆ.

​​ಒಡಿಶಾದ ಕಂಧಮಲ್ ಜಿಲ್ಲೆಯ ಪಬುರಿಯಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಸನಾ ಪ್ರಧಾನ್ ಕಾರ್ಡಿಯಾಕ್​ಗೆ ಒಳಗಾಗಿ ಸಾವನ್ನಪ್ಪಿದ ಡ್ರೈವರ್. ಬಸ್​ ಚಾಲನೆಯಲ್ಲಿದ್ದಾಗ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಇದರಿಂದ ಬಸ್​ ಕಂಟ್ರೋಲ್ ಮಾಡಲು ಸಾಧ್ಯವಾಗಲಿಲ್ಲ. ಇದನ್ನು ಮನಗಂಡ ಆತ, ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆಸಿ ಬಸ್ ನಿಲ್ಲಿಸಿದ್ದಾನೆ.

ಡ್ರೈವರ್​ನ ಜಾಗೃತೆಯಿಂದ 48 ಪ್ರಯಾಣಿಕರು ಬದುಕುಳಿದಿದ್ದಾರೆ. ‘ಮಾ ಲಕ್ಷ್ಮೀ’ ಎಂಬ ಖಾಸಗಿ ಬಸ್​ ಡ್ರೈವರ್​ಗೆ ಹೃದಯಸ್ತಂಬನ ಆಗಿದೆ. ರಾತ್ರಿಯಾಗಿದ್ದರೂ ಕೂಡ ಬಸ್ ಡ್ರೈವರ್​ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಂತೆಯೇ ವೈದ್ಯರು ಮೃತಪಟ್ಟಿರುವ ಬಗ್ಗೆ ಖಚಿತ ವ್ಯಕ್ತಪಡಿಸಿದರು ಎಂದು ಟಿಕಬಲಿ ಠಾಣೆಯ ಇನ್​ಸ್ಪೆಕ್ಟರ್ ಕಲ್ಯಾಣಮಯಿ ಸೆಂಧ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಧ್ಯರಾತ್ರಿ ಡ್ರೈವರ್​ಗೆ ಕಾರ್ಡಿಯಾಕ್ ಅರೆಸ್ಟ್.. 48 ಪ್ರಯಾಣಿಕರ ಜೀವ ಉಳಿಸಿ ಉಸಿರು ಚೆಲ್ಲಿದ ಚಾಲಕ

https://newsfirstlive.com/wp-content/uploads/2023/10/bus-2.jpg

Load More