newsfirstkannada.com

VIDEO: ಹೊಗೆಯಲ್ಲಿ ಮೋದಿ ಚಿತ್ರ ಅರಳಿಸಿದ ಕಲಾವಿದ.. ಆರ್ಟಿಸ್ಟ್​ ಹೇಳೋದೇನು ಗೊತ್ತಾ..?

Share :

17-09-2023

    ಬ್ಯಾಗ್ರೌಂಡ್​ನಲ್ಲಿ ಕೋನಾರ್ಕ್ ಚಕ್ರವನ್ನು ಬಳಸಿಕೊಂಡಿದ್ದೇಕೆ..?

    ಇಂದು 73ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿ

    ದೇಶದಲ್ಲೆಡೆ ಸಂಭ್ರಮದಿಂದ ಆಚರಿಸುತ್ತಿರುವ ಮೋದಿ ಫ್ಯಾನ್ಸ್​

ಪ್ರಧಾನಿ ನರೇಂದ್ರ ಮೋದಿಯವರು ಇಂದು 73ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯ ಸಂತಸದಲ್ಲಿದ್ದಾರೆ. ದೇಶದಲ್ಲೆಡೆ ಅವರ ಅಭಿಮಾನಿಳು ಹಾಗೂ ಬಿಜೆಪಿಯ ಮುಖಂಡರು, ಕಾರ್ಯಕರ್ತರು ವಿಶೇಷ ರೀತಿಯಲ್ಲಿ ಸೆಲೆಬ್ರೆಷನ್ ಮಾಡುತ್ತಿದ್ದಾರೆ. ಸದ್ಯ ಒಡಿಶಾದ ಸ್ಮೋಕ್ ಕಲಾವಿದರೊಬ್ಬರು ವಿನೂತನ ರೀತಿಯಲ್ಲಿ ಮೋದಿಯವರ ಭಾವಚಿತ್ರ ಬಿಡಿಸಿದ್ದಾರೆ.

ಹುಟ್ಟುಹಬ್ಬದ ನಿಮಿತ್ತ ವಿಶ್ವ ನಾಯಕರಿಂದ ನರೇಂದ್ರ ಮೋದಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ. ಇದರ ಮಧ್ಯೆ ಒಡಿಶಾದ ಕಟಕ್​ ಮೂಲದ ದೀಪಕ್ ಬಿಸ್ವಾಲ್ ಎನ್ನುವ ಕಲಾವಿದ ಅದ್ಭುತವಾಗಿರುವಂತಹ ಮೋದಿಯವರ ಭಾವಚಿತ್ರ ಬಿಡಿಸಿದ್ದಾರೆ. ಅದು ಬೇರೆ ಹೊಗೆ (ಸ್ಮೋಕ್​) ಯಲ್ಲಿ ಅನ್ನೊಂದು ವಿಶೇಷ. ಭವ್ಯವಾದ ಸಂಸ್ಕೃತಿ ಮತ್ತು ಪರಂಪರೆಯ ಕುರುಹು ಆಗಿರುವ ಕೋನಾರ್ಕ್ ಚಕ್ರವನ್ನು ಬ್ಯಾಗ್ರೌಂಡ್​ನಲ್ಲಿ ಬಳಸಿಕೊಂಡು ಸುಂದರವಾಗಿ ಮೋದಿ ಭಾವಚಿತ್ರ ಬಿಡಿಸಿದ್ದಾರೆ.

ದೀಪಕ್ ಬಿಸ್ವಾಲ್ ಮಾತನಾಡಿ, ಇಂದು ಮೋದಿಯವರಿಗೆ 73ನೇ ಬರ್ತ್​ಡೇ ಹಿನ್ನೆಲೆಯಲ್ಲಿ ಅವರ ಭಾವಚಿತ್ರವನ್ನು ಸ್ಮೋಕ್ ಮೂಲಕ ಚಿತ್ರಿಸಿದ್ದೇನೆ. ಜಿ20 ಶೃಂಗಸಭೆಯಲ್ಲಿ ಎಲ್ಲ ದೇಶಗಳ ನಾಯಕರ ಜೊತೆ ಮೋದಿ ಕೈ ಜೋಡಿಸಿದ್ದರು. ಈ ವೇಳೆ ಅಲ್ಲಿ ಬ್ಯಾಗ್ರೌಂಡ್​ನಲ್ಲಿ ಕೋನಾರ್ಕ್​ ಚಕ್ರ ಬಳಸಿಕೊಂಡಿದ್ದರು. ಇದರ ಆಧಾರದ ಮೇಲೆ ಆ ಚಕ್ರ ನನ್ನ ಚಿತ್ರದಲ್ಲಿದೆ. ಇದು ಬಿಡಿಸಲು 2 ಗಂಟೆ ಸಮಯ ತೆಗೆದುಕೊಂಡಿದ್ದೇನೆ. ಇದರಲ್ಲಿ ಹೂವುಗಳನ್ನು ಕೂಡ ಉಪಯೋಗಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಹೊಗೆಯಲ್ಲಿ ಮೋದಿ ಚಿತ್ರ ಅರಳಿಸಿದ ಕಲಾವಿದ.. ಆರ್ಟಿಸ್ಟ್​ ಹೇಳೋದೇನು ಗೊತ್ತಾ..?

https://newsfirstlive.com/wp-content/uploads/2023/09/MODI_BIRTH_DAY-.jpg

Load More