newsfirstkannada.com

ಹುಲಿ ಉಗುರು ಬೆನ್ನಲ್ಲೇ ನವಿಲನ್ನು ಕೊಂದು ಮಾಂಸ ಬೇಯಿಸುತ್ತಿದ್ದ ಮೂವರು ಬಂಧನ

Share :

27-10-2023

  ನವಿಲನ್ನು ಅರಣ್ಯದಿಂದ ಹಿಡಿದು ತಂದಿದ್ದ ಮೂವರು ಆರೋಪಿಗಳು

  ರಾಜ್ಯದಲ್ಲಿ ಹುಲಿ ಉಗುರು ಕೇಸ್ ಬೆನ್ನಲ್ಲೇ ನವಿಲು ಹತ್ಯೆಯ ಪ್ರಕರಣ

  ಇಟ್ಟಿಗೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಆಗಾಗ ಬೇಟೆಯಾಡ್ತಿದ್ರು

ತುಮಕೂರು: ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ಪ್ರಕರಣದ ಬೆನ್ನಲ್ಲೇ, ಜಿಲ್ಲೆಯ ಮಾರನಾಯಕನ ಪಾಳ್ಯದಲ್ಲಿ ರಾಷ್ಟ್ರ ಪಕ್ಷಿ ನವಿಲನ್ನು ಕೊಂದು ಅದರ ಮಾಂಸ ಭಕ್ಷಣೆಗೆ ಮುಂದಾಗಿದ್ದ ಮೂವರನ್ನು ಬಂಧಿಸಲಾಗಿದೆ.

ಒಡಿಶಾ ಮೂಲದ ಬಿಟ್ಟಿಂಗ್ ನಾಯಕ್, ಬೈಷಾಕ್ ದಾವು, ದುಬಾ ಕಾಪತ್ ಬಂಧಿತರು. ಆರೋಪಿಗಳು ಮಾರನಾಯಕನ ಪಾಳ್ಯದ ಇಟ್ಟಿಗೆ ಪ್ಯಾಕ್ಟರಿಯಲ್ಲಿ ಕೆಲ ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇವರು ಕಳೆದ ಹಲವು ದಿನಗಳಿಂದ ನವಿಲುಗಳನ್ನ ಕೊಂದು ತಿನ್ನುತ್ತಿದ್ದಾರೆ ಎಂದು ಇಲಾಖೆಗೆ ಹಲವು ಬಾರಿ ದೂರುಗಳು ಬಂದಿದ್ದವು.

ಹೀಗಾಗಿ ನಿನ್ನೆ ಖಚಿತ ಮಾಹಿತಿ ಮೇರೆಗೆ ಆರ್​ಎಫ್​ಓ ಪವಿತ್ರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಸುಮಾರು ಒಂದೂವರೆ ಕೆಜಿಯಷ್ಟು ನವಿಲಿನ ಮಾಂಸ, ಅದರ 2 ಕಾಲುಗಳು, ಗರಿಗಳು ಜೊತೆಗೆ ಬೇಯಿಸಿದ ಮಾಂಸ ಸ್ಥಳದಲ್ಲೇ ಸಿಕ್ಕಿದೆ. ಇನ್ನು ನವಿಲು ಹಿಡಿಯಲು ಬಳಸಿದ್ದ ಬಲೆಗಳು, ಉರುಳುಗಳು, ಪಾತ್ರೆಗಳನ್ನ ತುಮಕೂರು ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದು ಮಾಂಸವನ್ನ ಎಫ್ಎಸ್ಎಲ್​ಗೆ ಕಳುಹಿಸಿದ್ದಾರೆ. ಅರೆಸ್ಟ್ ಆಗಿರುವ ಮೂವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಲಿ ಉಗುರು ಬೆನ್ನಲ್ಲೇ ನವಿಲನ್ನು ಕೊಂದು ಮಾಂಸ ಬೇಯಿಸುತ್ತಿದ್ದ ಮೂವರು ಬಂಧನ

https://newsfirstlive.com/wp-content/uploads/2023/10/TMK_Peacock.jpg

Load More