newsfirstkannada.com

ಮನೆ ಮೇಲೆ ಅಧಿಕಾರಿಗಳ ದಾಳಿ.. ಹಣ ಉಳಿಸಿಕೊಳ್ಳಲು ಪಕ್ಕದ ಮನೆಯ ಟೆರೆಸ್​​ಗೆ 2 ಕೋಟಿಗೂ ಹೆಚ್ಚು ಹಣ ಎಸೆದ ಭ್ರಷ್ಟ ಜಿಲ್ಲಾಧಿಕಾರಿ..!

Share :

25-06-2023

    6 ಬಾಕ್ಸ್​​ನಲ್ಲಿ ಲಕ್ಷ ಲಕ್ಷ ಹಣ ತುಂಬಿ ಎಸೆದರು

    ಮನೆಯ ಕಪಾಟಿನಲ್ಲಿ ಎಷ್ಟು ಹಣ ಇಟ್ಟಿದ್ದರು ಗೊತ್ತಾ..?

    ಕಳಂಕಿತ ಅಧಿಕಾರಿ ನಿವಾಸದಲ್ಲಿ ಸಿಕ್ಕಿದ್ದು ಎಷ್ಟು ಕೋಟಿ..?

ಒಡಿಶಾ ವಿಜಿಲೆನ್ಸ್ (Odisha Vigilance directorate) ಸರ್ಕಾರಿ ಅಧಿಕಾರಿಯೊಬ್ಬರ ನಿವಾಸದ ಮೇಲೆ ಶುಕ್ರವಾರ ದಾಳಿ ಮಾಡಿತ್ತು. ಈ ವೇಳೆ ಭ್ರಷ್ಟಾಚಾರ ಆರೋಪಿತ ಅಧಿಕಾರಿಯ ಕುಟುಂಬಸ್ಥರು ಒಂದು ಬಾಕ್ಸ್​ನಲ್ಲಿ ಹಣವನ್ನು ತುಂಬಿ ಪಕ್ಕದ ಮನೆಯ ಟೆರಸ್​​ಗೆ ಒಗೆದಿರುವ ಪ್ರಸಂಗ ನಡೆದಿದೆ.

2 ಕೋಟಿಗೂ ಅಧಿಕ ಹಣ

ರಟ್ಟಿನ ಬಾಕ್ಸ್​ನಲ್ಲಿ ಒಟ್ಟು 2 ಕೋಟಿಗೂ ಅಧಿಕ ಹಣವನ್ನು ತುಂಬಿದ್ದರು ಎನ್ನಲಾಗಿದೆ. ಅಧಿಕಾರಿಗಳ ದಾಳಿಯಿಂದ ತಪ್ಪಿಸಿಕೊಂಡು ಹಣವನ್ನು ಉಳಿಸಿಕೊಳ್ಳಲು ನಡೆಸಿದ್ದ ಈ ಪ್ರಯತ್ನ ಯಶಸ್ವಿಯಾಗಲಿಲ್ಲ. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿಗಳು, ಅಷ್ಟೂ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಅಧಿಕಾರಿಗಳು ಹೇಳಿದ್ದೇನು..?

ಒಡಿಶಾ ವಿಜಿಲೆನ್ಸ್ ಶುಕ್ರವಾರ ಭುವನೇಶ್ವರದ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ರಾವುತ್​ಗೆ ಸೇರಿದ ಆಸ್ತಿ-ಪಾಸ್ತಿಗಳ ಮೇಲೆ ದಾಳಿ ನಡೆಸಿತ್ತು. ದಾಳಿ ವೇಳೆ ಮೂರು ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ ಎಂದು ವಿಜಿಲೆನ್ಸ್ (ಎಸ್‌ಪಿ) ಎಂ.ರಾಧಾಕೃಷ್ಣ ತಿಳಿಸಿದ್ದಾರೆ. ನೆರೆಹೊರೆಯವರ ಟೆರೆಸ್ ಮೇಲೆ ಕೆಲವು ರಟ್ಟಿನ ಪೆಟ್ಟಿಗೆಗಳನ್ನು ಎಸೆಯೋದನ್ನು ನಮ್ಮ ತಂಡ ನೋಡಿದೆ. ಕೂಡಲೇ ನಾವು ಅಲ್ಲಿಗೆ ತಲುಪಿದೇವು. ಆ ಪೆಟ್ಟಿಗೆಯೊಳಗೆ ಅಪಾರ ಹಣದ ರಾಶಿ ಕಂಡುಬಂದಿದೆ. ಎಣಿಕೆಯ ನಂತರ ಆರು ಬಾಕ್ಸ್‌ಗಳಲ್ಲಿ ಒಟ್ಟು 2.03 ಕೋಟಿ ನಗದು ಪತ್ತೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸ್ಥಿರಾಸ್ತಿಗಳ ದಾಖಲೆಗಳು ಮತ್ತು ಬ್ಯಾಂಕ್ ಠೇವಣಿಗಳ ಪಾಸ್‌ಬುಕ್‌ಗಳನ್ನು ನಮ್ಮ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ನಬರಂಗಪುರದ ನಿವಾಸದಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ ಸುಮಾರು 89 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಭುವನೇಶ್ವರ್​ದಲ್ಲಿರುವ ನಿವಾಸದ ಪುಸ್ತಕದ ಕಪಾಟಿನ ಹಿಂದೆ ಬಚ್ಚಿಟ್ಟಿದ್ದ 10.37 ಲಕ್ಷ ರೂ ಹಣವನ್ನೂ ಸೀಜ್ ಮಾಡಲಾಗಿದೆ. ಎರಡೂ ಮನೆಗಳಲ್ಲಿ ಒಟ್ಟು 3.02 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆ ಮೇಲೆ ಅಧಿಕಾರಿಗಳ ದಾಳಿ.. ಹಣ ಉಳಿಸಿಕೊಳ್ಳಲು ಪಕ್ಕದ ಮನೆಯ ಟೆರೆಸ್​​ಗೆ 2 ಕೋಟಿಗೂ ಹೆಚ್ಚು ಹಣ ಎಸೆದ ಭ್ರಷ್ಟ ಜಿಲ್ಲಾಧಿಕಾರಿ..!

https://newsfirstlive.com/wp-content/uploads/2023/06/MONEY-1.jpg

Load More