ಪವಾಡ ಸದೃಶ್ಯ ರೀತಿಯಲ್ಲಿ ಬದುಕಿ ಬಂದ ಕನ್ನಡಿಗ.
ಒಡಿಶಾ ಭಯಾನಕ ದೃಶ್ಯಗಳ ಬಗ್ಗೆ ಹೇಳಿದ್ದೇನು..?
ಮೂರು ರೈಲುಗಳ ಭೀಕರ ಸರಣಿ ಅಪಘಾತ
ಒಡಿಶಾದ ಬಾಲ್ಸೋರ್ನಲ್ಲಿ ನಡೆದ ರೈಲು ದುರಂತಕ್ಕೆ ಇಡೀ ದೇಶವೇ ಬೆಚ್ಚಿಬಿದಿದ್ದೆ. ಮೂರು ರೈಲುಗಳ ಭೀಕರ ಸರಣಿ ಅಪಘಾತದಿಂದ 285ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ 900 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ. ಕೂಡಲೇ ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇನ್ನು, ಈ ಭೀಕರ ಅಪಘಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಜೀವಂತವಾಗಿ ಬದುಕಿ ಬಂದಿರೋ ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದ ಸಂತೋಷ್ ಜೈನ್ (41) ಭಯಾನಕತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. 110 ಸಮ್ಮೇದ್ ಶಿಖರ್ಜಿ ಯಾತ್ರಾ ಯಾತ್ರಿಗಳಲ್ಲಿ ಒಬ್ಬರಾದ ಕರ್ನಾಟಕದ ಮೂಲದ ಸಂತೋಷ್ ಜೈನ್ ಅವರು ಅದೇ ರೈಲಿನಲ್ಲಿ ಸಂಚಾರ ಮಾಡುತ್ತಿದ್ದರಂತೆ.
ಈ ಕುರಿತು ಮಾತಾಡಿದ ಅವರು, ಶುಕ್ರವಾರ ರಾತ್ರಿ ಒಡಿಶಾದ ಬಾಲಸೋರ್ ಬಳಿ ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್‌ನ 10 ರಿಂದ 12 ಬೋಗಿಗಳು ಹಳಿತಪ್ಪಿ ರೈಲಿನ ಪಕಕ್ಕೆ ಉರುಳಿ ಬಿದ್ದಿದೆ. ಹೀಗಾಗಿ 285ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ತಡರಾತ್ರಿ ಸಂಭವಿಸಿದ ಭಾರೀ ದುರಂತದಲ್ಲಿ ಸಾವನ್ನಪ್ಪಿದ್ದ ಪ್ರಯಾಣಿಕರ ಮೃತ ದೇಹಗಳು ಹಳಿಗಳ ಮೇಲೆ ಬಿದ್ದಿದ್ದವು, ಇನ್ನು ಕೆಲ ಪ್ರಯಾಣಿಕರು ಸಹಾಯಕ್ಕಾಗಿ ಕಿರುಚುತ್ತಿದ್ದರು.
ರಾತ್ರಿ ಸುಮಾರು 8.30 ಈ ದುರ್ಘಟನೆ ಸಂಭವಿಸಿದೆ. ರೈಲು ಇದ್ದಕ್ಕಿದ್ದಂತೆ ನಿಂತಿತು ಮತ್ತು ದೊಡ್ಡ ಶಬ್ದವಾಯಿತು. ನಮ್ಮ ಹಿಂದೆ ಇದ್ದ ಎಸಿ ಮತ್ತು ಜನರಲ್ ಬೋಗಿಗಳು ಎದುರಿನ ಟ್ರ್ಯಾಕ್‌ನಲ್ಲಿ ಬಿದ್ದಿದ್ದವು. ಇದೇ ವೇಳೆ ಮತ್ತೊಂದು ರೈಲು ದಿಢೀರ್ ಬಂದು ಟ್ರ್ಯಾಕ್ ಮೇಲೆ ಬಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸ್ಥಳದಿಂದ ನಾವು ಸ್ವಲ್ಪ ದೂರ ಹೋಗಿ ನೋಡಿದಾಗ ಎರಡು ಕಂಪಾರ್ಟ್‌ಮೆಂಟ್‌ಗಳು ಬೇರ್ಪಟ್ಟು ಹಿಂದೆ ಇದ್ದವು. ಮೊದ ಮೊದಲು ಅಪಘಾತ ಬಗ್ಗೆ ನಮಗೆ ಗೊತ್ತೇ ಆಗಲಿಲ್ಲ. ಬಳಿಕ ರೈಲಿನಿಂದ ಜನರು ಇಳಿಯಲು ಪ್ರಾರಂಭಿಸಿದಾಗ ಟ್ರ್ಯಾಕ್ ಮೇಲೆ ಬಿದ್ದ ಮೃತ ದೇಹಗಳನ್ನು ನೋಡಿ ನನಗೆ ಆಶ್ಚರ್ಯವಾಯಿತು. ಆ ಚಿತ್ರವನ್ನು ನಾನೆಂದಿಗೂ ಮರೆಯಲಾರೆ ಎಂದು ಹೇಳಿಕೊಂಡಿದ್ದಾರೆ.
ಸದ್ಯ ಈ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಇನ್ನು ಏರಿಕೆಯಾಗಲಿದೆ. ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದಾವಿಸಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ