newsfirstkannada.com

ರೈಲು ದುರಂತದಲ್ಲಿ 280 ಮಂದಿ ಸಾವು; ಅಪಘಾತದ ಸ್ಥಳದಲ್ಲಿ ಕೇಂದ್ರ ರೈಲ್ವೇ ಸಚಿವರ ಈ ಪೋಸ್​ಗೆ ಭಾರೀ ಆಕ್ರೋಶ..!

Share :

03-06-2023

    ಭೀಕರ ಸರಣಿ ರೈಲು ಅಪಘಾತಕ್ಕೆ ಬೆಚ್ಚಿಬಿದ್ದ ದೇಶ

    ರೈಲು ದುರಂತದಲ್ಲಿ 250ಕ್ಕೂ ಹೆಚ್ಚು ಮಂದಿ ಮೃತ್ಯು

    ಕೇಂದ್ರ ರೈಲ್ವೇ ಸಚಿವರ ಮೇಲೆ ಜನ ಆಕ್ರೋಶಗೊಂಡಿದ್ದೇಕೆ?

ಒಡಿಶಾದಲ್ಲಿ ಸಂಭವಿಸಿದ ಭೀಕರ ಸರಣಿ ರೈಲು ಅಪಘಾತಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಸದ್ಯದ ಮಾಹಿತಿ ಪ್ರಕಾರ, 280ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ಸುಮಾರು 1000 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಘೋರ ದುರಂತದ ಬಗ್ಗೆ ಇಡೀ ದೇಶವೇ ಮರಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಕೆಲವೇ ಹೊತ್ತಿನಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಜೊತೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರ ಆರೋಗ್ಯವನ್ನು ವಿಚಾರಿಸಲಿದ್ದಾರೆ.

ಅಪಘಾತ ಸುದ್ದಿ ತಿಳಿದು ಇಂದು ಘಟನಾ ಸ್ಥಳಕ್ಕೆ ಕೇಂದ್ರ ರೈಲ್ವೇ ಮಂತ್ರಿ ಅಶ್ವಿನಿ ವೈಷ್ಣವ್ ಒಡಿಶಾದ ಬಾಲ್​ಸೋರ್​​ಗೆ ಬಂದಿದ್ದಾರೆ. ಅಪಘಾತದ ಪರಿಶೀಲನೆ ವೇಳೆ ಇವರು ನಡೆದುಕೊಂಡ ರೀತಿಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗ್ತಿದೆ.

ತುಂಡಾಗಿ ಬಿದ್ದಿದ್ದ ರೈಲಿನ ಬೋಗಿಯ ಎಂಜಿನ್ ಒಳಗೆ ಬಗ್ಗಿ ಹೋಗುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಮೇಲ್ನೋಟಕ್ಕೆ ಕೇಂದ್ರ ಸಚಿವರು, ಅಪಘಾತ ಪರಿಶೀಲನೆ ಮಾಡಿದಂತೆ ಕಾಣ್ತಿದೆ. ಆದರೆ ಅದನ್ನು ಕೆಲವರು ಮಾಧ್ಯಮಗಳ ಎದರು ಪೋಸ್ ಕೊಡಲು ಈ ರೀತಿಯ ನಾಟಕವಾಡುತ್ತಿದ್ದಾರೆ ಎಂದು ಟೀಕಿಸುತ್ತಿದ್ದಾರೆ. ರೈಲು ದುರಂತದಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹೀಗಿದ್ದೂ ಡ್ಯಾಮೇಜ್ ಆಗಿರುವ ಬೋಗಿಯೊಳಗೆ ಯಾವುದೇ ಸೇಫ್ಟಿ ಇಲ್ಲದೇ ಹೋಗಿದ್ದಾರೆ. ಇದು ಕ್ಯಾಮೆರಾಗಾಗಿ ಮಾಡಿರುವ ನಾಟಕ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ

ರೈಲು ದುರಂತದಲ್ಲಿ 280 ಮಂದಿ ಸಾವು; ಅಪಘಾತದ ಸ್ಥಳದಲ್ಲಿ ಕೇಂದ್ರ ರೈಲ್ವೇ ಸಚಿವರ ಈ ಪೋಸ್​ಗೆ ಭಾರೀ ಆಕ್ರೋಶ..!

https://newsfirstlive.com/wp-content/uploads/2023/06/MINISTER-1.jpg

Load More