newsfirstkannada.com

ರೈಲು ದುರಂತದಲ್ಲಿ ಮೃತರ ಸಂಖ್ಯೆ 288ಕ್ಕೆ ಏರಿಕೆ.. ಯಾವ ಟ್ರೈನ್​​ನಲ್ಲಿ ಎಷ್ಟೆಷ್ಟು ಮಂದಿ ಪ್ರಯಾಣಿಸ್ತಿದ್ದರು?

Share :

04-06-2023

    ರೈಲು ದುರಂತದಲ್ಲಿ ಮೃತರ ಸಂಖ್ಯೆ 288ಕ್ಕೆ ಏರಿಕೆ

    ಯಾವ ಟ್ರೈನ್​​ನಲ್ಲಿ ಎಷ್ಟೆಷ್ಟು ಮಂದಿ ಪ್ರಯಾಣಿಸ್ತಿದ್ದರು?

    ಇಲ್ಲಿದೆ ಒಡಿಶಾ ಘನಘೋರ ರೈಲು ದುರಂತದ ಫುಲ್​ ಡೀಟೇಲ್ಸ್

ದೇಶದ ಇತಿಹಾಸದಲ್ಲೇ ಘನಘೋರ ರೈಲು ದುರಂತವಿದು. ಜಸ್ಟ್​ 10 ನಿಮಿಷದಲ್ಲಿ 3 ರೈಲುಗಳ ಮಧ್ಯೆ ಅಪಘಾತ ಸಂಭವಿಸಿ 288 ಮಂದಿ ಬಲಿಯಾಗಿದ್ದಾರೆ. ಸುಖಕರ ಪ್ರಯಾಣ ಅವರೆಲ್ಲರ ಪಾಲಿಗೆ ಕೊನೆಯ ಪ್ರಯಾಣವಾಗಿ ಹೋಗಿದೆ. ಒಡಿಶಾದ ಬಾಲಸೋರ್​ನಲ್ಲಿ ಸಂಭವಿಸಿದ ಭೀಕರ ರೈಲು ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.

ಒಡಿಶಾದ ಬಾಲಸೋರ್​ನಲ್ಲಿ ಭೀಕರ ರೈಲು ದುರಂತ
ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳ ಮಧ್ಯೆ ಅಪಘಾತ ಸಂಭವಿಸಿ, ಬರೋಬ್ಬರಿ 288ಕ್ಕೂ ಅಧಿಕ ಜನರು ಉಸಿರು ಚೆಲ್ಲಿದ್ದಾರೆ. ಹೌರಾದಿಂದ ಬರುತ್ತಿದ್ದ ಶಾಲಿಮಾರ್​ ಟು ಚೆನ್ನೈ ಕೋರಮಂಡಲ್​ ಎಕ್ಸ್​ಪ್ರೆಸ್​ ರೈಲು, ಬಹನಾಗ ರೈಲ್ವೆ ನಿಲ್ದಾಣದ ಬಳಿ ಹಳಿ ತಪ್ಪಿ ಗೂಡ್ಸ್​ ರೈಲಿಗೆ ಡಿಕ್ಕಿಯಾಗಿದೆ. ಇದರಿಂದ ರೈಲಿನ 3-4 ಬೋಗಿಗಳು ಪಕ್ಕದ ಟ್ರ್ಯಾಕ್​ ಮೇಲಿ ಬಿದ್ದಿವೆ.

ದುರಂತ ಏನಪ್ಪ ಅಂದ್ರೆ, ಇದೇ ಸಮಯಕ್ಕೆ ಬೆಂಗಳೂರಿನ ಯಶವಂತಪುರದಿಂದ ಕೋಲ್ಕತ್ತಾಗೆ ಹೋಗ್ತಿದ್ದ ಹೌರ ಎಕ್ಸ್​ಪ್ರೆಸ್ ಕೂಡ ಅದೇ ಟ್ರ್ಯಾಕ್​ನಲ್ಲಿ ಬಂದ ಪರಿಣಾಮ ಈ ದುರಂತ ಸಂಭವಿಸಿದೆ. ಕೋರಮಂಡಲ್ ಎಕ್ಸ್​ಪ್ರೆಸ್​ನಲ್ಲಿ 1257 ಜನ ಟಿಕೆಟ್​ ಕಾಯ್ದಿರಿಸಿದ ಪ್ರಯಾಣಿಕರು ಪ್ರಯಾಣ ಮಾಡ್ತಿದ್ದರು. ಇನ್ನು ಹೌರಾ ಎಕ್ಸ್​ಪ್ರೆಸ್​ನಲ್ಲಿ 1039 ಟಿಕೆಟ್​ ಕಾಯ್ದಿರಿಸಿದ ಪ್ರಯಾಣಿಕರು ಇದ್ದರು.
18 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ

ಏರ್​ಲಿಫ್ಟ್​ ಮೂಲಕ ರಕ್ಷಣೆ

ಈ ಅಪಘಾತದ ಸುದ್ದಿ ತಿಳಿಯುತ್ತಿದದ್ದಂತೆ ಘಟನಾ ಸ್ಥಳಕ್ಕೆ ರಕ್ಷಣಾ ಪಡೆಗಳು ದೌಡಾಯಿಸಿ, ನಜ್ಜುಗುಜ್ಜಾಗಿದ್ದ ಬೋಗಿಗಳಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾದರು. ಅಷ್ಟರಲ್ಲಾಗಲೇ ಸ್ಥಳೀಯರು ಕೂಡ ರಕ್ಷಣಾ ಕಾರ್ಯಕ್ಕೆ ಸಾಥ್​ ನೀಡಿದ್ರು. ಗ್ಯಾಸ್​ ಕಟ್ಟರ್​ ಬಳಸಿ, ಒಳಗೆ ಸಿಲುಕಿದ್ದವರನ್ನು ಸಮಾರೋಪಾದಿಯಲ್ಲಿ ರಕ್ಷಿಸುವ ಕಾರ್ಯ ನಡೀತು. ಆ್ಯಂಬುಲೆನ್ಸ್​, ಟ್ಯಾಕ್ಟರ್​, ಬಸ್​ಗಳಲ್ಲಿ ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯ್ತು.

ಏರ್​ಲಿಫ್ಟ್​ ಮೂಲಕವು ಕೆಲವರನ್ನು ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಯ್ತು. ಗೋಪಾಲ್‌ಪುರ, ಖಾಂತಪಾರಾ, ಬಾಲಸೋರ್, ಭದ್ರಕ್ ಮತ್ತು ಸೊರೊ ಪ್ರದೇಶ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಒಡಿಶಾ ಸಿಎಂ ನವೀನ್​ ಪಟ್ನಾಯಕ್​ ದುರಂತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಅಪಾಯದಿಂದ ಪಾರಾದ ಪ್ರಯಾಣಿಕರಿಗೆ ವಿಶೇಷ ರೈಲಿನ ಮೂಲಕ ಅವರ ಊರಿಗೆ ತಲುಪಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ತನಿಖೆಗೆ ಆದೇಶಿಸಿದ ಇಲಾಖೆ

ರೈಲು ದುರಂತ ಸಂಭವಿಸಿದ, ಬಹನಾಗ್​ ಪ್ರದೇಶಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ​ ವೈಷ್ಣವ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಹಾಗೂ ರೈಲ್ವೇ ಅಧಿಕಾರಿಗಳ ಬಳಿ, ದುರಂತದ ಬಗ್ಗೆ ಪಿನ್​ಟುಪಿನ್​ ಮಾಹಿತಿ ಪಡೆದ್ರು. ಈ ವೇಳೆ ಸಚಿವರೇ ಹಾನಿಗೀಡಾಗಿದ್ದ ಬೋಗಿಯ ಕೆಳಗಿಂದ ತೂರಿಬಂದ ಫೋಟೋಗಳು ವೈರಲ್​ ಆಗಿವೆ. ಏಕಕಾಲದಲ್ಲಿ 3 ರೈಲುಗಳು ಡಿಕ್ಕಿಯಾಗಿ ಅಪಾರ ಸಾವು ನೋವಿಗೆ ಕಾರಣವಾದ ರೈಲು ದುರಂತದಲ್ಲಿ ಮನುಷ್ಯರ ತಪ್ಪಿನಿಂದಾಗಿದೆಯೋ ಅಥವಾ ಟೆಕ್ನಿಕಲ್ ಸಮಸ್ಯೆಯಿಂದಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲು ರೈಲ್ವೆ ಇಲಾಖೆ ಆದೇಶಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಸಿಗ್ನಲ್​ ದೋಷದಿಂದ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ರಕ್ತದಾನ ಮಾಡಲು ಆಸ್ಪತ್ರೆಗಳಲ್ಲಿ ಕ್ಯೂನಿಂತ ಜನರು

ಇನ್ನು ಈ ಭೀಕರ ದುರಂತದಲ್ಲಿ ಅಪಾರ ಸಾವು-ನೋವು ಸಂಭವಿಸಿದೆ. ಕೆಲವರಿಗೆ ತೀವ್ರ ರಕ್ತವಾದ ಪರಿಣಾಮ ರಕ್ತದ ಕೊರತೆ ಎದುರಾಗಿತ್ತು. ಕೂಡಲೇ ಒಡಿಶಾದ ಜನತೆ ಆಸ್ಪತ್ರೆಗಳಿಗೆ ದೌಡಾಯಿಸಿ, ರಕ್ತದಾನ ಮಾಡುವ ಮೂಲಕ ಹಲವರ ಜೀವವನ್ನು ಕಾಪಾಡಿ ಮಾನವೀಯತೆ ಮೆರೆದಿದ್ದಾರೆ. ರಕ್ತದಾನ ಮಾಡಲು ಆಸ್ಪತ್ರೆಗಳಲ್ಲಿ ಜನರು ಕ್ಯೂನಿಂತಿದ್ದ ದೃಶ್ಯ ಹೃದಯ ಸ್ಪರ್ಶಿಸುವಂತಿತ್ತು..

49 ರೈಲುಗಳ ಸಂಚಾರ ರದ್ದು, 38 ರೈಲು ಮಾರ್ಗ ಬದಲಾವಣೆ!

ಭೀಕರ ರೈಲು ಅಪಘಾತ ಸಂಭವಿಸಿದ ಪರಿಣಾಮ ಒಡಿಶಾ ರೈಲು ಸಂಚಾರದಲ್ಲಿ ಭಾರಿ ಬದಲಾವಣೆ ಮಾಡಲಾಗಿತ್ತು. 49 ರೈಲುಗಳ ಸಂಚಾರ ರದ್ದು ಮಾಡಿ, 38 ರೈಲುಗಳ ಮಾರ್ಗ ಬದಲಾವಣೆ ಮಾಡಿದ್ದ ಪರಿಣಾಮ ಲಕ್ಷಾಂತರ ರೈಲು ಪ್ರಯಾಣಿಕರು ಸಂಕಷ್ಟ ಅನುಭವಿಸಿದ್ರು. ಇವರಿಗೆ ರಿಫಂಡ್ ವ್ಯವಸ್ಥೆ ಮಾಡಲಾಗಿದೆ. ದೇಶದ ಇತಿಹಾಸದಲ್ಲೇ ಈ ದುರಂತ ಭೀಕರ ಅಧ್ಯಾಯವಾಗಿದೆ. ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಿದೆ. ಮೃತರ ಸಂಬಂಧಿಕರು ತಮ್ಮವರ ಮೃತ ದೇಹಗಳನ್ನ ನೋಡಿ ಕಣ್ಣಿರು ಹಾಕುತ್ತಿರುವ ದೃಶ್ಯ ಮನಸ್ಸು ಹಿಂಡುವಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೈಲು ದುರಂತದಲ್ಲಿ ಮೃತರ ಸಂಖ್ಯೆ 288ಕ್ಕೆ ಏರಿಕೆ.. ಯಾವ ಟ್ರೈನ್​​ನಲ್ಲಿ ಎಷ್ಟೆಷ್ಟು ಮಂದಿ ಪ್ರಯಾಣಿಸ್ತಿದ್ದರು?

https://newsfirstlive.com/wp-content/uploads/2023/06/2023-9.jpg

Load More