ಜೂನ್ 2 ರಂದು ಒಡಿಶಾದ ಬಾಲಸೋರ್ನಲ್ಲಿ ದುರಂತ
ತ್ರಿವಳಿ ರೈಲುಗಳ ಮಧ್ಯೆ ಡಿಕ್ಕಿ ಸಂಭವಿಸಿ 278 ಮಂದಿ ಸಾವು
ಕೇಂದ್ರ ಸರ್ಕಾರದಿಂದ ಒಟ್ಟು 12 ಲಕ್ಷ ರೂಪಾಯಿ ಪರಿಹಾರ ಘೋಷಣೆ
ಕಳೆದ ಶುಕ್ರವಾರ ನಡೆದ ಓಡಿಶಾ ಬಾಲಸೋರ್ ತ್ರಿವಳಿ ರೈಲು ದುರಂತ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. 278 ಮಂದಿಯನ್ನು ಬಲಿ ಪಡೆದು ಸಾವಿರಾರು ಮಂದಿಯನ್ನು ಆಸ್ಪತ್ರೆಗೆ ಸೇರಿದ್ದಾರೆ. ಇತ್ತ ಕೇಂದ್ರ ಸರ್ಕಾರದಿಂದ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಕಾರ್ಯ ಕೂಡ ಭರದಿಂದ ಸಾಗಿದೆ. ಇದೀಗ ಮಹಿಳೆಯೊಬ್ಬರು ಸುಳ್ಳು ಹೇಳಿ ಪರಿಹಾರ ತೆಗೆದುಕೊಳ್ಳಲು ಹೋಗಿ ಬಂಧನದ ಭಿತಿ ಎದುರಿಸುತ್ತಿದ್ದಾಳೆ.
ಪತ್ನಿಯ ಪರಿಹಾರ ಕಿತಾಪತಿ!
ಹೌದು.. ಒಡಿಶಾ ಬಾಲಸೋರ್ ರೈಲು ಅಪಘಾತದಲ್ಲಿ ಪತಿಯ ಸಾವಾಗಿದೆ ಎಂದು ಮಹಿಳೆಯೊಬ್ಬಳು ಅವಲತ್ತುಕೊಂಡು ಕೇಂದ್ರ ಸರ್ಕಾರ ಘೋಷಿಸಿದ್ದ 10 ಲಕ್ಷ ರೂಪಾಯಿ ಪರಿಹಾರ ಪಡೆಯಲು ಸಂಚು ಹೂಡಿದ್ದಳು. ಆದರೆ ಪತಿಯೇ ನೀಡಿದ ದೂರಿನ ಮೇರೆಗೆ ಆಕೆ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಬಾಲಾಸೂರ್ನಲ್ಲಿ ಜೂನ್ 2 ರಂದು ಗೀತಾಂಜಲಿ ದತ್ತಾ ಎಂಬುವವರು ಅಪಘಾತದಲ್ಲಿ ತನ್ನ ಪತಿ ಬಿಜಯ್ ದತ್ತಾ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದ್ದರು.
ಅಲ್ಲದೇ ನೂರಾರು ಶವಗಳ ರಾಶಿ ಮಧ್ಯೆ ಮೃತದೇಹವೊಂದನ್ನು ಗುರುತಿಸಿ ಇದು ತನ್ನ ಪತಿಯದ್ದೇ ಅಂತ ಕಣ್ಣೀರು ಹಾಕಿದ್ದಳು. ಮಹಿಳೆಯ ಹೇಳಿಕೆ ಪಡೆದ ಅಧಿಕಾರಿಗಳು ಮೃತ ವ್ಯಕ್ತಿ ಮತ್ತು ಮಹಿಳೆ ನೀಡಿದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆಕೆಯು ಸುಳ್ಳು ಹೇಳಿ ಪರಿಹಾರ ಪಡೆಯಲು ಮುಂದಾಗಿರುವುದು ಗೊತ್ತಾಗಿದೆ.
ಪೊಲೀಸರು ಎಚ್ಚರಿಕೆ ನೀಡಿ ಆಕೆಯನ್ನು ಬಿಡಿಸಿದರೂ, ಪತಿ ಬಿಜಯ್ ದತ್ತಾ ಮಣಿಯಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ತೊಂದರೆ ಶುರುವಾಗಿದೆ. ಸದ್ಯ ಬಂಧನದ ಭೀತಿಯಿಂದ ಮಹಿಳೆ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ