newsfirstkannada.com

ಇಂದು ಗೃಹಜ್ಯೋತಿ ಯೋಜನೆಗೆ ಅಧಿಕೃತ ಚಾಲನೆ; ಖರ್ಗೆ ತವರಲ್ಲಿ ಬೃಹತ್ ಕಾರ್ಯಕ್ರಮ

Share :

05-08-2023

    ಬಿಪಿಎಲ್, ಎಪಿಎಲ್ ಕಾರ್ಡುದಾರರಿಗೆ ಸರ್ಕಾರ ಗುಡ್​​ನ್ಯೂಸ್!

    ಫಲಾನುಭವಿಗಳಿಗೆ ಶೂನ್ಯ ವಿದ್ಯುತ್ ಬಿಲ್ ವಿತರಣೆ

    10 ಸಾವಿರ ಮಂದಿ ಕಾರ್ಯಕ್ರಮಕ್ಕೆ ಭಾಗಿ ನಿರೀಕ್ಷೆ

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ‌ ಎಫೆಕ್ಟ್​​ನಿಂದ ಬಿಪಿಎಲ್ ಕಾರ್ಡ್​​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದೆ. ಸದ್ಯ 5 ಕೆ.ಜಿ ಅಕ್ಕಿ ಬದಲು ಸಿದ್ದರಾಮಯ್ಯ ಸರ್ಕಾರ ಹಣ ಕೊಡ್ತಿದೆ. ಗ್ಯಾರಂಟಿ ಭಾಗ್ಯಗಳಿಗೆ ರೇಷನ್ ಕಾರ್ಡ್ ಅತ್ಯಗತ್ಯವಿದ್ದು ಬಿಪಿಎಲ್-ಎಪಿಎಲ್ ಕಾರ್ಡುದಾರರಿಗೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಗುಡ್​ನ್ಯೂಸ್ ನೀಡಿದ್ದಾರೆ.

ಅನ್ನರಾಮಯ್ಯ ಸರ್ಕಾರದ ಗ್ಯಾರಂಟಿಗಳಲ್ಲಿ 10 ಅಕ್ಕಿಭಾಗ್ಯ ಒಂದಾಗಿದ್ದು. ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸರ್ಕಾರ ಉಚಿತ ಪಡಿತರ ಅಕ್ಕಿ ನೀಡ್ತಿದೆ. ಸದ್ಯ 5 ಕೆ.ಜಿ ಅಕ್ಕಿ ಬದಲಾಗಿ ಕೆಜಿ 34 ರೂನಂತೆ ಹಣ ನೀಡ್ತಿದ್ದು ಪೂರ್ಣ ಪ್ರಮಾಣದಲ್ಲಿ ಅಕ್ಕಿ ನೀಡಲು ಸಜ್ಜಾಗ್ತಿದೆ. ಈ ನಡುವೆ ಬಿಪಿಎಲ್, ಎಪಿಎಲ್ ಕಾರ್ಡ್ ವಂಚಿತರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ.

ಗ್ಯಾರಂಟಿ ಎಫೆಕ್ಟ್.. ಬಿಪಿಎಲ್, ಎಪಿಎಲ್​ಗೆ  ಫುಲ್ ಡಿಮ್ಯಾಂಡ್

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಿಪಿಎಲ್ ಕಾರ್ಡ್​​ಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ ಜನರ ಎಷ್ಟೇ ಪ್ರಯತ್ನ ಮಾಡಿದ್ರೂ ಹೊಸ ಕಾರ್ಡ್ಗೆ ಅರ್ಜಿ ಸಲ್ಲಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಚುನಾವಣೆ ನೀತಿ ಸಂಹಿತೆ ಜಾರಿಯಾದಗಿನಿಂದ ಬಿಪಿಎಲ್ ಕಾರ್ಡ್​ಗೆ ಅರ್ಜಿ ಸ್ವೀಕಾರವನ್ನ ಆಹಾರ ಇಲಾಳೆ ಸ್ಥಗಿತ ಮಾಡಿತ್ತು. ಹೆಲ್ತ್ ಎಮರ್ಜೆನ್ಸಿಗೂ ಬಿಪಿಎಲ್ ಕಾರ್ಡ್ ಸಿಗದೇ ಬಡವರು ಪರದಾಡುತ್ತಿದ್ದರು. ಆದರೀಗ ರಾಜ್ಯ ಸರ್ಕಾರ ಹೊಸ ಕಾರ್ಡ್​ಗಾಗಿ ಕಾಯ್ತಿರುವ ಜನರಿಗೆ ಗುಡ್ ನ್ಯೂಸ್ ಕೊಟ್ಟಿದೆ.

ಇಂದಿನಿಂದ ಬಿಪಿಎಲ್, ಎಪಿಎಲ್​ಗೆ ಅರ್ಜಿ ಸ್ವೀಕಾರ ಶುರು!

ಅಂತೂ ಇಂತೂ 3 ತಿಂಗಳ ಬಳಿಕ ಬಿಪಿಎಲ್ ಕಾರ್ಡ್​ಗೆ ಅರ್ಜಿ ಸ್ವೀಕಾರ ಇಂದಿನಿಂದ ಶುರುವಾಗಿದೆ. ಆಹಾರ ಇಲಾಖೆಯ ಫೋರ್ಟಲ್ ಇಂದಿನಿಂದ ಒಪನ್ ಆಗಿದೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಆಹಾರ ಇಲಾಖೆ ಹೊಸ ಅಪ್ಲಿಕೇಷನ್ ಪಡೆಯುವುದನ್ನೇ ನಿಲ್ಲಿಸಿಬಿಟ್ಟಿದೆ. ಈ ಬಗ್ಗೆ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿಯೇ ಪ್ರಕಟ ಮಾಡಿತ್ತು.ಅನಾರೋಗ್ಯದಂಥ ಎಮರ್ಜೆನ್ಸಿ ಇದ್ರರೂ ಬಿಪಿಎಲ್ ಕಾರ್ಡ್ ವಿತರಣೆ ಮಾಡ್ತಿರಲಿಲ್ಲ.

ಇನ್ನು ಹೊಸದಾಗಿ ಬಿಪಿಎಲ್‌ ಕಾರ್ಡ್‌ ಪಡೆಯಲು 3 ಲಕ್ಷ ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇವು ಹಲವು ವರ್ಷಗಳಿಂದ ವಿಲೇವಾರಿಗೆ ಬಾಕಿಯಿವೆ. ಸದ್ಯದಲ್ಲೇ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಕಾರ್ಡ್‌ ನೀಡಲು ಸರ್ಕಾರ‌ ಮುಂದಾಗಿದೆ. ಹಾಗಾದ್ರೆ ರಾಜ್ಯದಲ್ಲಿ 2016ರಲ್ಲಿ ನಿಗದಿ ಮಾಡಿದ್ದ ಮಾನದಂಡಗಳ ಪ್ರಕಾರ ಯಾರು ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ ಅಂತ ನೋಡೋದಾದ್ರೆ.

ಯಾರಿಗೆ ಸಿಗಲ್ಲ ಬಿಪಿಎಲ್‌?

1.ಎಲ್ಲಾ ಸರ್ಕಾರಿ ನೌಕರರು, ಅರೆ ಸರ್ಕಾರಿ ಖಾಯಂ ನೌಕರರಿಗೆ ಸಿಗಲ್ಲ
2. ವೃತ್ತಿ ತೆರಿಗೆ, ಜಿಎಸ್‌ಟಿ, ಆದಾಯ ತೆರಿಗೆ ಪಾವತಿದಾರರಿಗೆ ಸಿಗಲ್ಲ
3. ಗ್ರಾಮೀಣ ಭಾಗದಲ್ಲಿ 3 ಹೆಕ್ಟೇರ್ಗಿಂತ ಹೆಚ್ಚು ಭೂಮಿ ಹೊಂದಿದವರು
4. ನಗರದಲ್ಲಿ 1,000 ಚದರಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮನೆ ಇರುವವರು
5. ಟ್ರ್ಯಾಕ್ಟರ್‌, ಕ್ಯಾಬ್‌, ಟ್ಯಾಕ್ಸಿ ಹೊರತಾಗಿ ವೈಟ್ ಬೋರ್ಡ್ ಕಾರು ಇರುವವರು
6. ವಾರ್ಷಿಕ ₹1.20 ಲಕ್ಷ ಹೆಚ್ಚು ಆದಾಯ ಹೊಂದಿರುವ ಕುಟುಂಬಗಳು

ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಖಾಯಂ ನೌಕರರು ಬಿಪಿಎಲ್ ಪಡೆಯುವಂತಿಲ್ಲ. ವೃತ್ತಿ ತೆರಿಗೆ, ಜಿಎಸ್‌ಟಿ, ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರಾಗಿದ್ದಾರೆ. ಜೊತೆಗೆ ಗ್ರಾಮೀಣ ಭಾಗದಲ್ಲಿ 3 ಹೆಕ್ಟೇರ್‌ ಗಿಂತ ಹೆಚ್ಚು ಭೂಮಿ ಹೊಂದಿರೋರು. ನಗರ ಪ್ರದೇಶದಲ್ಲಿ 1,000 ಚದರಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮನೆ ಇರೋರು. ಟ್ರಾಕ್ಟರ್‌, ಕ್ಯಾಬ್‌, ಟ್ಯಾಕ್ಸಿ ಹೊರತಾಗಿ ವೈಟ್ ಬೋರ್ಡ್ ಕಾರು ಹೊಂದಿರೋರು. ವಾರ್ಷಿಕ ಆದಾಯ 1.20 ಲಕ್ಷಕ್ಕಿಂತ ಹೆಚ್ಚು ಇರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ.

ಇನ್ನು ಆಹಾರ ಸಚಿವ ಮುನಿಯಪ್ಪ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ ಆಗಿದೆ ಅಂತ ಮಾಹಿತಿ ನೀಡಿದ್ದಾರೆ. ಬಿಪಿಎಲ್‌ ಮಾನದಂಡಗಳನ್ನು ಉಲ್ಲಂಘಿಸಿ ಲಕ್ಷಾಂತರ ಮಂದಿ ಅನರ್ಹರು ಬಿಪಿಎಲ್‌ ಕಾರ್ಡ್‌ ಪಡೆದಿದ್ದಾರೆ. ಆಹಾರ ಇಲಾಖೆಯು ಮನೆ- ಮನೆ ಸಮೀಕ್ಷೆ ಮಾಡಲು ಮುಂದಾಗಿದ್ದು, ಈ ಮೂಲಕ ಮಾನದಂಡ ಮೀರಿ ಪಡೆದ ಬಿಪಿಎಲ್‌ ರದ್ದು ಮಾಡಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಜೊತೆಗೆ ಹೆಲ್ತ್‌ ಎಮರ್ಜೆನ್ಸಿಗಾಗಿ ಪ್ರತ್ಯೇಕ ಕಾರ್ಡ್ ನೀಡಲು ಸರ್ಕಾರ ಚಿಂತನೆ ನಡೆಸಿದೆ.ಇನ್ನು ಸ್ವಂತ ಕಾರು ಹೊಂದಿರುವವರಿಗೂ ಕಾರ್ಡ್ ರದ್ದಾಗಲಿದೆ ಅಂತ ಸಚಿವ ಮುನಿಯಪ್ಪ ಹೇಳಿದ್ದಾರೆ.

ಇನ್ನು ಶೀಘ್ರದಲ್ಲೇ ಹಣದ ಬದಲಾಗಿ ಪೂರ್ಣ ಪ್ರಮಾಣದಲ್ಲಿ 10 ಕೆ.ಜಿ ಅಕ್ಕಿ ನೀಡುತ್ತೇವೆ. ಆಂಧ್ರ, ತೆಲಂಗಾಣ ರಾಜ್ಯಗಳು ಅಕ್ಕಿ ಕೊಡಲು ಮುಂದೆ ಬಂದಿವೆ. ಕಳೆದ ತಿಂಗಳು ಒಂದು ಕೋಟಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಹೆಚ್ಚು ದಿನ ಹಣ ಕೊಡಲು ಸಾಧ್ಯವಿಲ್ಲ. ಆದಷ್ಟು ಬೇಗ ಹಣ ನೀಡುವುದನ್ನು ನಿಲ್ಲಿಸಿ,ಅಕ್ಕಿ ಕೊಡ್ತೀವಿ ಅಂತ ಸಚಿವ ಮುನಿಯಪ್ಪ ಹೇಳಿದ್ದಾರೆ.

ಒಟ್ಟಾರೆ ಬರೋಬ್ಬರಿ 3 ತಿಂಗಳ ಬಳಿಕ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸ್ವೀಕಾರ ಆರಂಭವಾಗಿದ್ದು..ಗ್ಯಾರಂಟಿಯಿಂದ ವಂಚಿತರಾದ ಜನ ನಿಟ್ಟುಸಿರು ಬಿಡುವಂತಾಗಿದೆ…‌

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಗೃಹಜ್ಯೋತಿ ಯೋಜನೆಗೆ ಅಧಿಕೃತ ಚಾಲನೆ; ಖರ್ಗೆ ತವರಲ್ಲಿ ಬೃಹತ್ ಕಾರ್ಯಕ್ರಮ

https://newsfirstlive.com/wp-content/uploads/2023/06/Gruhajyoti-Yojane.jpg

Load More