newsfirstkannada.com

ತೈಲ ಟ್ಯಾಂಕರ್​​-ಕಾರು-ಪಿಕಪ್​ ವಾಹನದ ನಡುವೆ ಅಪಘಾತ; ನಾಲ್ವರು ಸಾವು

Share :

11-11-2023

  ಟ್ಯಾಂಕರ್​ ಗುದ್ದಿದ ಪರಿಣಾಮ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ

  CNG ಸಿಲಿಂಡರ್​ ಹೊಂದಿದ್ದ ಕಾರಿನ 3 ಪ್ರಯಾಣಿಕರು ಸಜೀವ ದಹನ

  ಪಿಕಪ್​ ಚಾಲಕ ಕೂಡ ಅಪಘಾತದಲ್ಲಿ ಸಾವು, ಟ್ಯಾಂಕರ್​ ಚಾಲಕ ಪರಾರಿ

ಹರಿಯಾಣ: ತೈಲ ಟ್ಯಾಂಕರ್​, ಕಾರು ಮತ್ತು ಪಿಕಪ್​​ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿರೋ ಘಟನೆ ಹರಿಯಾಣದ ಗುರುಗ್ರಾಮ್‌ ಹೆದ್ದಾರಿಯಲ್ಲಿ ನಡೆದಿದೆ. ಟ್ಯಾಂಕರ್ ಡಿಕ್ಕಿ ಹೊಡೆದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಮೂವರು ಸುಟ್ಟುಕರಕಲಾಗಿದ್ದಾರೆ.

ಪೊಲೀಸರ ಪ್ರಕಾರ, ಪ್ರಯಾಣಿಕರು ಜೈಪುರಕ್ಕೆ ಹೊರಟವರು ಎನ್ನಲಾಗುತ್ತಿದ್ದು, ಕಾರಿನಲ್ಲಿ ಸಿಎನ್​ಜಿ ಸಿಲಿಂಡರ್​ ಇದ್ದ ಕಾರಣ ಬೆಂಕಿ ಕಾಣಿಸಿಕೊಂಡಿದೆ.

ಕಾರಿಗೆ ಡಿಕ್ಕಿ ಹೊಡೆದ ಟ್ಯಾಂಕರ್​ ಪಿಕಪ್​ ವಾಹನಕ್ಕೆ ಗುದ್ದಿದೆ. ಪಿಕಪ್ ವಾಹನ ಚಾಲಕ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಅಪಘಾತದ ನಂತರ ಚಾಲಕ ಪರಾರಿಯಾಗಿದ್ದಾನೆ.

ಅಪಘಾತ ನಡೆದ ಸ್ಥಳಕ್ಕೆ ಬಂದ ಪೊಲೀಸರು ಕಾರಿನಲ್ಲಿದ್ದ ಮೃತದೇಹಗಳನ್ನ ಹೊರತೆಗೆದಿದ್ದಾರೆ. ಕಾರು ಸಂಪೂರ್ಣ ಭಸ್ಮವಾಗಿದ್ದು, ಟ್ಯಾಂಕರ್ ನಜ್ಜುಗುಜ್ಜಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೈಲ ಟ್ಯಾಂಕರ್​​-ಕಾರು-ಪಿಕಪ್​ ವಾಹನದ ನಡುವೆ ಅಪಘಾತ; ನಾಲ್ವರು ಸಾವು

https://newsfirstlive.com/wp-content/uploads/2023/11/Accident-7.jpg

Load More