ಬೆಂಗಳೂರಲ್ಲಿ ಱಪಿಡೋಗೆ ಟಕ್ಕರ್ ನೀಡಲು ಓಲಾ ಸಜ್ಜು
7 ಲಕ್ಷ ಆಟೋ ಚಾಲಕರು ಬೀದಿಗೆ ಬೀಳುವ ಆತಂಕ
ಮತ್ತೆ ಪ್ರತಿಭಟನೆಯ ಎಚ್ಚರಿಕೆ ಕೊಟ್ಟ ಆಟೋ ಚಾಲಕರು
ಬೆಂಗಳೂರು: ಬೈಕ್ ಟ್ಯಾಕ್ಸಿ ಬಂದ್ ಮಾಡಲೇಬೇಕು ಅಂತಾ ಆಟೋ ಚಾಲಕರು ಬೆಂಗಳೂರು ಬಂದ್ ಮಾಡಿದ್ರು. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಬೇಡಿಕೆ ಈಡೇರಿಸುವುದಾಗಿ ಭರಸವೆ ಕೂಡ ನೀಡಿದ್ರು, ಈ ನಡುವೆ ಱಪಿಡೋ ಬೈಕ್ ಟ್ಯಾಕ್ಸಿಗೆ ಟಕ್ಕರ್ ನೀಡಲು ಓಲಾ ಕಂಪೆನಿ ಬೈಕ್ ಟ್ಯಾಕ್ಸಿ ಶುರು ಮಾಡಿದ್ದಾರೆ. ಇದಕ್ಕೆ ಲೈಸೆನ್ಸ್ ಇದೆಯಾ ಇಲ್ವಾ ಅಂತಾ ಆರ್ಟಿಓ ಅಧಿಕಾರಿಗಳೇ ಹೇಳ್ಬೇಕು.
ಱಪಿಡೋಗೆ ಟಕ್ಕರ್ ನೀಡಲು ಓಲಾ ಸಜ್ಜು
ಱಪಿಡೋ ಬೈಕ್ ಟ್ಯಾಕ್ಸಿಯಿಂದ ಆಟೋ ಚಾಲಕರ ಬದುಕು ಬೀದಿಗೆ ಬರ್ತಿದೆ ಅಂತಾ ಆಟೋ ಚಾಲಕರು ಸರ್ಕಾರದ ವಿರುದ್ಧ ಹೋರಾಟ ಮಾಡ್ತನೇ ಇದ್ದಾರೆ. ಈ ನಡುವೆ ಓಲಾದವರು ಸಹ ತಮ್ಮ ಟ್ಯಾಕ್ಸಿ ಆ್ಯಪ್ ನಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನ ಶುರು ಮಾಡಿದ್ದಾರೆ.
ಓಲಾ ಆ್ಯಪ್ನಲ್ಲಿ ಬೈಕ್ ಟ್ಯಾಕ್ಸಿ ಶುರು ಮಾಡಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಓಲಾ ಬೈಕ್ ಟ್ಯಾಕ್ಸಿಗಳು ಸಿಲಿಕಾನ್ ಸಿಟಿಯ ಮೂಲೆ ಮೂಲೆಯಲ್ಲೂ ಸಂಚಾರ ಮಾಡೋ ಲಕ್ಷಣಗಳು ಕಾಣ್ತಿದೆ.
ಇತ್ತ ಆಟೋ ಚಾಲಕರು ಆತಂಕ ಗೊಂಡಿದ್ದು ಈಗಲೇ ನಮ್ಮ ಜೀವನ ನಡೆಸೋದು ಕಷ್ಟವಾಗಿದೆ. ಎಲೆಟ್ಟ್ರಿಕ್ ಬೈಕ್ಗಳು 5 ಕಿಲೋಮೀಟರ್ಗೆ 25 ರೂಪಾಯಿ, 10 ಕಿಲೋ ಮೀಟರ್ಗೆ 50 ರೂಪಾಯಿಗೆ ಬೈಕ್ ಟ್ಯಾಕ್ಸಿ ಸಿಕ್ರೆ ಯಾರೂ ಆಟೋ ಕಡೆ ಮುಖ ಮಾಡಲ್ಲ. ನಮ್ಮ ಹೊಟ್ಟೆ ಮೇಲೆ ತಣ್ಣಿರ ಬಟ್ಟೆ ಬೀಳುತ್ತೆ. ಫ್ರೈವೇಟ್ ಆ್ಯಪ್ಗಳನ್ನ ಕ್ಲೋಸ್ ಮಾಡಿಸಿ ಸರ್ಕಾರವೇ ಒಂದು ಆ್ಯಪ್ ಮಾಡಲಿ ಅಂತ ಚಾಲಕರು ಆಗ್ರಹಿಸಿದ್ದಾರೆ.
ಈ ಸಂಬಂಧ ಖಾಸಗಿ ಸಾರಿಗೆ ಒಕ್ಕೂಟ ಸಾರಿಗೆ ಸಚಿವರಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡ್ತಿದ್ದು ಬೈಕ್ ಟ್ಯಾಕ್ಸಿ ಅನ್ನೋದು ಕಾನೂನು ಬಾಹಿರವಾಗಿದೆ, ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಬಾರದು, ಇದ್ರಿಂದ 7 ಲಕ್ಷ ಆಟೋ ಚಾಲಕರು ಬೀದಿಗೆ ಬೀಳ್ತಾರೆ, ಸರ್ಕಾರ ಏನಾದ್ರೂ ಕ್ರಮ ಕೈಗೊಳ್ಳಬೇಕು.. ಇಲ್ಲವಾದ್ರೆ ಕಾನೂನು ಹೋರಾಟ ಮಾಡೋದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಒಟ್ನಲ್ಲಿ ಇಷ್ಟು ದಿನ ಱಪಿಡೋ ಬೈಕ್ ವಿರುದ್ಧ ಹೋರಾಟ ಮಾಡ್ತಿದ್ದ ಆಟೋ ಚಾಲಕರು ಈಗ ಓಲಾ ಬೈಕ್ ಟ್ಯಾಕ್ಸಿಯ ವಿರುದ್ಧವೂ ಹೋರಾಟ ಮಾಡೋ ಪರಿಸ್ಥಿತಿ ಬಂದೋದಗಿದೆ. ಮುಂದೇನಾಗುತ್ತೋ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ