newsfirstkannada.com

ಮದುವೆ ಆಗುವೆ ಎಂದು ವೃದ್ಧೆ ಜತೆ ಲೈಂಗಿಕ ಸಂಪರ್ಕ ಸಾಧಿಸಿದ್ದ ಅಜ್ಜ; ಆಮೇಲೆ ಕೈಕೊಟ್ಟ!

Share :

22-08-2023

    ಮದುವೆ ಆಗುವೆ ಎಂದು ಲೈಂಗಿಕ ಸಂಪರ್ಕ ಸಾಧಿಸಿದ್ದ

    ಆಮೇಲೆ ಮದುವೆ ಆಗಲ್ಲ ಎಂದು ವೃದ್ಧೆಗೆ ಕೈಕೊಟ್ಟ..!

    ಇದು 70ರ ವೃದ್ಧ 63 ವರ್ಷದ ವೃದ್ಧೆ ಲವ್​ ಸ್ಟೋರಿ

ಬೆಂಗಳೂರು: ನೀನೆಲ್ಲೋ ನಾನಲ್ಲೇ. ಈ ಜೀವ ನಿನ್ನಲ್ಲೇ ಅಂತ 70ರ ಹರೆಯದ ವೃದ್ಧ 63 ವರ್ಷ ವೃದ್ಧೆಗೆ ಹೇಳಿದ್ದ. ಅಷ್ಟೇ ಅಲ್ಲ, ಎಂದೆಂದೂ ನಿನ್ನ ಮರೆಯಲಾರೆ ಕೈ ಬಿಡಲಾರೆ ಅಂತ ಮಾತು ಕೊಟ್ಟಿದ್ದ. ಆದ್ರೆ ಈಗ ಅಜ್ಜಿ ಕೈ ಬಿಟ್ಟಿದ್ದು. ವೃದ್ಧೆ ವಿರಹದ ವೇದನೆ ತಾಳಲಾರದೇ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ನನ್ನ ಮದುವೆ ಮಾಡಿಸಿ ಅಂತ ಕೇಳ್ತಿದ್ದಾರೆ.

ಈ ವೃದ್ಧೆ ಹೆಸರು ದಯವಾಣಿ. ಇನ್ನೂ ಈಕೆ ಜೊತೆ ಸುತ್ತಾಡಿದ್ದ ವೃದ್ಧನ ಹೆಸರು ಲೋಕನಾಥ್​. ಲೋಕನಾಥ್​ ಮಗನಿಗೆ ಮದುವೆ ಮಾಡೋ ವಿಚಾರಕ್ಕೆ ಪರಿಚಯವಾದ ದಯವಾಣಿ ಮೇಲೆ ಲೋಕನಾಥ್​ಗೆ ಪ್ರೀತಿಯಾಗಿತ್ತು. ಮದುವೆ ಮಾಡ್ಕೊಳ್ತೀನಿ ಅಂತಾನೂ ಹೇಳಿದ್ದ ವೃದ್ಧ ಲೈಂಗಿಕ ಸಂಪರ್ಕವನ್ನೂ ಸಾಧಿಸಿದ್ದ. ಆದ್ರೆ ಈಗ ನೀನೂ ಬೇಡ, ನಿನ್ನ ಸಹವಾಸನೂ ಬೇಡ ಅಂತಿದ್ದಾನಂತೆ.

ಕರೆದಾಗ ಹೋಗಿಲ್ಲ ಅನ್ನೋದ್ರ ಜೊತೆಗೆ ಮಕ್ಕಳು ಮದುವೆಗೆ ಒಪ್ಪಿಲ್ಲ ಅಂತ ಮದುವೆ ಬೇಡ ಅಂತಿರೋ ವೃದ್ಧ ಲೋಕನಾಥ್​ ವಿರುದ್ಧ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದಯವಾಣಿ ದೂರು ದಾಖಲಿಸಿದ್ದಾರೆ. ಇನ್ನೂ ಈ ಲೋಕನಾಥ್​ ಹೆಚ್​ಎಎಲ್​ ಮಾಜಿ ಸಿಬ್ಬಂದಿ ಅಂತ ಹೇಳಲಾಗ್ತಿದೆ. ಜೊತೆಗೆ ಈತ ಈ ವೃದ್ಧೆ ಬಳಿ, ಹಣ ಒಡವೆ ಪಡೆದಿದ್ದಾರೆ ಅಂತಾನೂ ವೃದ್ಧೆ ಆರೋಪಿಸಿದ್ದಾರೆ.

ಈತನನ್ನ ನಂಬಿ ಮಕ್ಕಳಿಂದ ದೂರಾಗಿರೋ ಈ ಮಹಿಳೆಗೆ ಸದ್ಯ ದಿಕ್ಕೇ ಇಲ್ಲದಂತಾಗಿದೆ. ಅದೇನೇ ಇರ್ಲಿ ಇಳಿ ವಯಸ್ಸಲ್ಲಿ ಅರಳಿದ ಪ್ರೀತಿ 5 ವರ್ಷಕ್ಕೇ ಕಮರಿದೆ. ಪೊಲೀಸ್​ ಠಾಣೆಯ ಮೆಟ್ಟಿಲೇರಿರೋ ಈ ವೃದ್ಧೆಗೆ ಪೊಲೀಸರು ನ್ಯಾಯ ಕೊಡಿಸ್ತಾರಾ ಕಾದು ನೋಡ್ಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಆಗುವೆ ಎಂದು ವೃದ್ಧೆ ಜತೆ ಲೈಂಗಿಕ ಸಂಪರ್ಕ ಸಾಧಿಸಿದ್ದ ಅಜ್ಜ; ಆಮೇಲೆ ಕೈಕೊಟ್ಟ!

https://newsfirstlive.com/wp-content/uploads/2023/08/Ajja.jpg

Load More