/newsfirstlive-kannada/media/post_attachments/wp-content/uploads/2024/08/wayanad-7.jpg)
ವಯನಾಡು ಯಾರೂ ಊಹಿಸಲಾಗದಂತಹ ಪರಿಸ್ಥಿತಿಯಲ್ಲಿದೆ. ರಕ್ಕಸ ಮಳೆಯೊಂದು ನೆಮ್ಮದಿಯಲ್ಲಿ ದಿನದೂಡುತ್ತಿದ್ದ ವಯನಾಡನ್ನೇ ಸ್ಮಶಾನವನ್ನಾಗಿಸಿದೆ. ಪ್ರಕೃತಿಯ ರೌದ್ರ ನರ್ತನಕ್ಕೆ ಈಗಾಗಲೇ 360ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಸದ್ಯ ನೆಲ ಸಮಾಧಿಯಾಗಿರುವ ಮೃತದೇಹಗಳಿಗೆ ಶೋಧಕಾರ್ಯ ಮುಂದುವರೆಯುತ್ತಿದೆ. ಇದರ ನಡುವೆ ಬದುಕುಳಿದ ಜೀವಗಳು ಕಣ್ಣೀರು ಹಾಕುತ್ತಾ ಜೀವ ಉಳಿಸಿದ ಕತೆಗಳನ್ನು ಹೇಳುತ್ತಿವೆ.
ಭೂಕುಸಿತದಲ್ಲಿ ಅನೇಕರು ಮನೆ, ಸಂಬಂಧಿಕರನ್ನು ಕಳೆದುಕೊಂಡು ಅನಾಥರಾದವರು ಇದ್ದಾರೆ. ಅದರೆ ಮೇರಿ ಎಂಬ ಮಹಿಳೆ ಭೂಕುಸಿತದಲ್ಲಿ ಮೂರು ಬಾರಿ ಮನೆಯನ್ನು ಕಳೆದುಕೊಂಡಿದ್ದಾರೆ. ಆದರೆ ಅದೃಷ್ಟವೆಂಬಂತೆ ಮೂರು ಬಾರಿಯೂ ಬದುಕುಳಿಯಲು ಹೋರಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/07/Wayanad-landslide8.jpg)
ಮೇರಿ 1984ರಲ್ಲಿ ಮುಂಡಕ್ಕೈನಲ್ಲಿ ಸಂಭವಿಸಿದ ಮೊದಲ ಭೂಕುಸಿತದಲ್ಲಿ ಮನೆಯನ್ನು ಕಳೆದುಕೊಂಡರು. ಬಳಿಕ 2019ರಲ್ಲಿ ಪುತ್ತುಮಲ ಭೂಕುಸಿತದಲ್ಲಿ ತಮ್ಮ ಭೂಮಿ ಮತ್ತು ಮನೆಯನ್ನು ಕಳೆದುಕೊಂಡರು. ಇತ್ತೀಚೆಗೆ ಜುಲೈ 30ರಂದು ಸಂಭವಿಸಿದ ಭೂಕುಸಿತದಲ್ಲೂ ಕೂಡ ಮೇರಿ ತಮ್ಮ ಮನೆಯನ್ನು ಕಳೆದುಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/07/Wayanad-landslide11.jpg)
ಇದನ್ನೂ ಓದಿ: ದೇವಾಲಯದ ಬಳಿ ಆಡ್ತಿದ್ದ 6 ವರ್ಷದ ಬಾಲಕಿ ಕಿಡ್ನಾಪ್.. ಆಟೋದಲ್ಲಿ ಎಲ್ಲಿಗೆ ಕರೆದೊಯ್ದ ಕಿರಾತಕ?
ತಮಿಳುನಾಡಿನ ಗೂಡಲೂರು ಪಂತಲೂರಿನ ಚಿನ್ನಪ್ಪನ್​, ಮೇರಿ ಮತ್ತು ಮಕ್ಕಳು 1980ರಲ್ಲಿ ಕೆಲಸ ಅರಸಿಕೊಂಡು ಮೆಪ್ಪಾಡಿಗೆ ಬಂದರು. ಅಲ್ಲಿ ಏಲಕ್ಕಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ಸಮಯದಲ್ಲಿ ಅಂದರೆ 1984ರಲ್ಲಿ ಅವರು ವಾಸವಿದ್ದ ಮನೆ ಭೂಕುಸಿತದಲ್ಲಿ ಕೊಚ್ಚಿ ಹೋಯಿತು. ನಂತರ ಚುರಲ್ಮಲಾಗೆ ತೆರಳಿದರು. ಬಳಿಕ ಅವರ ಮಗ ದೇವದಾಸನ್​ 10 ಸೆಂಟ್ಸ್​ ಜಾಗ ಖರೀದಿಸಿ ಮನೆ ಕಟ್ಟಿದರು.
/newsfirstlive-kannada/media/post_attachments/wp-content/uploads/2024/07/Wayanad-landslide10.jpg)
ಇದನ್ನೂ ಓದಿ: ಕೇರಳದಲ್ಲಿ ಮತ್ತೊಂದು ಸಮಸ್ಯೆ.. ಅನಾಥವಾಗಿ ಬಿದ್ದಿವೆ 30 ಮೃತದೇಹಗಳು..
2019ರಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಒಂದೂವರೆ ವರ್ಷದ ಮೊಮ್ಮಗನನ್ನು ಕಳೆದುಕೊಂಡರು. ಅದೃಷ್ಟವೆಂಬಂತೆ ಉಳಿದವರಿಗೆ ಏನು ಆಗಿರಲಿಲ್ಲ. ಅದರಂತೆಯೇ ಈ ಬಾರಿ ಮಳೆ ಜೋರಾದಾಗ ಮೇರಿ ಮತ್ತು ಕುಟುಂಬ ಸುರಕ್ಷಿತವಾದ ಸ್ಥಳಕ್ಕೆ ತೆರಳಿದರು. ಆದರೆ ಈ ವೇಳೆ ಮುಂಡಕ್ಕೈನಲ್ಲಿದ್ದ ಮನೆ ಭೂಕುಸಿತಕ್ಕೆ ನೆಲಸಮವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us