newsfirstkannada.com

ಹುಲಿ ಉಗುರು ಕೇಸ್​​.. ಅರಣ್ಯ ಇಲಾಖೆಗೆ ಬುದ್ಧಿ ಹೇಳಿದ ಒಳ್ಳೇ ಹುಡುಗ ಪ್ರಥಮ್​​!

Share :

27-10-2023

    ಹುಲಿ ಉಗುರು ಕೇಸ್​​ಗೆ ಒಳ್ಳೆಯ ಹುಡುಗ ಪ್ರಥಮ್ ಎಂಟ್ರಿ

    ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಹಾಟ್ ಟಾಪಿಕ್ ಬಗ್ಗೆ ಟ್ವೀಟ್​​!

    ವೈರಲ್​​ ಆದ ನಟ ಪ್ರಥಮ್​ ಮಾಡಿರೋ ಟ್ವೀಟ್​ನಲ್ಲಿ ಏನಿದೆ?

ಬೆಂಗಳೂರು: ಹುಲಿ ಉಗುರು ಸದ್ಯ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಹಾಟ್ ಟಾಪಿಕ್​. ಚೆಂದಕ್ಕೂ ಅಂದಕ್ಕೂ ಹುಲಿ ಉಗುರಿನ ಪೆಂಡೆಂಟ್​ ಹಾಕಿಕೊಂಡವರೆಲ್ಲ ಹುಲಿ ಹೆಸರು ಕೇಳಿದರೆ ಸಾಕು ಭಯ ಬೀಳ್ತಿದ್ದಾರೆ. ಒಂದೆಡೆ ವರ್ತೂರು ಸಂತೋಷ ಹುಲಿ ಉಗುರಿನ ಕೇಸ್​​ಗೆ ಸಂಬಂಧಿಸಿದಂತೆ ಜೈಲಿಗೆ ಹೋಗಿ ರಿಲೀಸ್​ ಆಗಿದ್ದರು.

ಇತ್ತ ಸ್ಯಾಂಡಲ್​ವುಡ್​ ತಾರೆಯರಿಗೂ ಹುಲಿ ಉಗುರು ಬಿಗ್ ಶಾಕ್ ನೀಡಿದೆ. ಜಗ್ಗೇಶ್, ದರ್ಶನ್, ನಿಖಿಲ್ ಕುಮಾರಸ್ವಾಮಿ ಸೇರಿ ಯಾಱರಿಗೆ ಹುಲಿ ಉಗರು ಕಂಟಕ ಎದುರಾಗಿದೆ. ಇನ್ನೂ, ಸ್ಯಾಂಡಲ್​ವುಡ್​​ ಸ್ಟಾರ್​​ ಸೆಲೆಬ್ರಿಟಿಗಳಿಂದ ಹಿಡಿದು ಜ್ಯೋತಿಷಿ, ಅರ್ಚಕರು, ರಾಜಕಾರಣಿಗಳ ಪುತ್ರರು ಸೇರಿ ಸರ್ಕಾರಿ ಅಧಿಕಾರಿಗಳಿಗೂ ಈ ಕಂಠಹಾರ ಕಂಟಕ ತಂದಿಟ್ಟಿದೆ. ಈಗಾಗಲೇ ಅರಣ್ಯಾಧಿಕಾರಿಗಳು ಅನೇಕ ನಟರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್​ಬಾಸ್ ಖ್ಯಾತಿಯ ಒಳ್ಳೆಯ ಹುಡುಗ ಪ್ರಥಮ್ ಅವರು ಸಾಮಾಜಿಕ ಜಾಲತಾಣವಾದ X ಖಾತೆಯಲ್ಲಿ ‘‘ಅರಣ್ಯ ಇಲಾಖೆ ಕೆಲಸ ಮಾಡ್ಲೇಬೇಕಂತಿದ್ರೆ ನೂರಾರು ಎಕರೆ ಒತ್ತುವರಿಯಾಗಿರೋ ಅರಣ್ಯ ಸಂಪತ್ತು ನುಂಗಣ್ಣರಿಗೆ ನೋಟಿಸ್​​ ಕೊಡಿ. ಸಾಧ್ಯವಾದ್ರೆ ಬಂಧಿಸಿ. ಅಳಿವಿನಂಚಿನಲ್ಲಿರೋ ಅಪರೂಪದ ಪ್ರಾಣಿಗಳ ಸಂತಾನೋತ್ಪತ್ತಿ ಮಾಡಿಸಿ. ಕಾಡಿನ‌ ಮಧ್ಯೆ ರೆಸಾರ್ಟ್ ಕಟ್ಟೋರಿಗೆ ಪಾಠ ಕಲಿಸಿ. ಅದನ್ನ ಬಿಟ್ಟು ಹುಲಿ ಉಗುರು ಹುಡುಕ್ತಾ ಹೋದ್ರೆ ನಿಮ್ಮ ಸರ್ವಿಸ್​ ಮುಗಿಯುತ್ತೆ ಅಷ್ಟೇ’’ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಲಿ ಉಗುರು ಕೇಸ್​​.. ಅರಣ್ಯ ಇಲಾಖೆಗೆ ಬುದ್ಧಿ ಹೇಳಿದ ಒಳ್ಳೇ ಹುಡುಗ ಪ್ರಥಮ್​​!

https://newsfirstlive.com/wp-content/uploads/2023/10/bigg-boss-22.jpg

Load More