Advertisment

ಅಂದು ಪ್ರತಿಷ್ಠಿತ ಕಂಪನಿಯಲ್ಲಿ ಟೆಕ್ಕಿ, ಇಂದು ಭಿಕ್ಷುಕ.. ಬೆಂಗಳೂರಲ್ಲಿ ಒಂದು ಕರುಣಾಜನಕ ಸ್ಟೋರಿ! Video

author-image
Gopal Kulkarni
Updated On
VIDEO: ಬೆಂಗಳೂರಿಗರೇ ಎಚ್ಚರ.. ಬೆಳ್ಳಗಿರೋದೆಲ್ಲಾ ಹಾಲಲ್ಲ; ಭಿಕ್ಷೆ ಬೇಡುತ್ತಿದ್ದ ಟೆಕ್ಕಿ ವಿಷ್ಯ ಬೇರೆನೇ ಇದೆ!
Advertisment
  • ತನ್ನನ್ನು ತಾನು ಟೆಕ್ಕಿ ಎಂದು ಹೇಳಿಕೊಂಡ ಯುವಕ ಭಿಕ್ಷೆ ಬೇಡುತ್ತಿರುವುದೇಕೆ
  • ತಂದೆ ತಾಯಿಗಳನ್ನು ಕಳೆದುಕೊಂಡ ಬಳಿಕ ಯುವಕ ಬಾಳಲ್ಲಿ ಬೀಸಿದ ಬಿರುಗಾಳಿ
  • ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಮಾಜಿ ಟಕ್ಕಿಯ ಬದುಕಿನ ಕಥೆ!

ಬದುಕು ವೈಚಿತ್ರ್ಯಗಳ ಆಗರ. ಇದಕ್ಕೆ ನೂರಾರು ತಿರುವು, ಮನುಷ್ಯನನ್ನು ಯಾವುದೋ ಒಂದು ತಿರುವು ಉನ್ನತಿಯ ಹಾದಿಯತ್ತ ಕರೆದುಕೊಂಡು ಹೋದರೆ, ಮತ್ತೊಂದು ತಿರುವು ದುರ್ಗತಿಯತ್ತ ತಂದೊಡ್ಡುತ್ತದೆ. ಕೋಟಿ ಕಟ್ಟಿ ಮೆರೆದವರು ಬೀದಿಗೆ ಬಂದು ಬಿಡುತ್ತಾರೆ. ಅದಕ್ಕೆ ಸಾಕಷ್ಟು ಜೀವಂತ ಸಾಕ್ಷಿಗಳಿವೆ. ಆ ಸಾಕ್ಷಿಗಳ ಸಾಲಿಗೆ ಸೇರುತ್ತಾರೆ ಬೆಂಗಳೂರಿನ ಜಯನಗರ ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವ ಈ ವ್ಯಕ್ತಿ

Advertisment

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಒಂದು ಕಾಲದಲ್ಲಿ ಟೆಕ್ಕಿಯಾಗಿದ್ದ ಸಾವಿರಾರು ರೂಪಾಯಿ ದುಡಿಯುತ್ತಿದ್ದ ವ್ಯಕ್ತಿಯೊಬ್ಬ ಈಗ ಬೆಂಗಳೂರಿನ ಜಯನಗರದಲ್ಲಿ ಭಿಕ್ಷೆ ಬೇಡುತ್ತಾ ಅಲೆಯುತ್ತಿದ್ದಾರೆ. ಶರತ್ ಯುವರಾಜ್ ಎಂಬುವವರು ಆ ವ್ಯಕ್ತಿಯನ್ನು ಮಾತನಾಡಿಸಿದ ವಿಡಿಯೋವನ್ನು ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿದ ವ್ಯಕ್ತಿ ಈ ಹಿಂದೆ ನಾನು ಅತ್ಯಂತ ಪ್ರತಿಷ್ಠಿತ ಕಂಪನಿಯಾಗಿದ್ದ ಫ್ರ್ಯಾಂಕ್​ಫರ್ಟ್​ನಲ್ಲಿ ಕೆಲಸ ಮಾಡುತ್ತಿರುವುದಾಗಿ ಬದುಕ ಆಡಿದ ಆಟದಿಂದಾಗಿ ನಾನು ಹೀಗೆ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ.


ಇದನ್ನೂ ಓದಿ:ಹೇ.. ಬಾಯ್ಬಿಟ್ರೆ ಹುಷಾರ್‌; ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿ ತಗ್ಲಾಕೊಂಡ ದರ್ಶನ್ ಬಾಡಿಗಾರ್ಡ್‌!

Advertisment

ಎಂಎನ್​ಸಿ ಕಂಪನಿಯಲ್ಲಿ ದುಡಿಯುತ್ತಿದ್ದ ಈ ವ್ಯಕ್ತಿ ತನ್ನ ತಂದೆ ತಾಯಿಯನ್ನು ಕಳೆದುಕೊಂಡ ಮೇಲೆ ಮದ್ಯಪಾನ ವ್ಯಸನಕ್ಕೆ ಸಿಲುಕಿದ್ದಾನೆ. ವಿಪರೀತ ಕುಡಿತ ಆ ವ್ಯಕ್ತಿಯನ್ನು ಹಾದಿ ತಪ್ಪಿಸಿದೆ. ಬರಬೇಕಾದ ಆದಾಯ ಬರದಂತೆ ಆಗಿದೆ. ಮನೆಯಿಲ್ಲದೇ, ಊಟಕ್ಕೆ ಹಣವಿಲ್ಲದೇ ಬದುಕು ಸಾಗಿಸಲು ನಾನೀಗ ಭಿಕ್ಷೆ ಬೇಡುತ್ತಿದ್ದೇನೆ ಎಂದು ಆ ಯುವಕ ವಿಡಿಯೋದಲ್ಲಿ ಹೇಳಿದ್ದಾನೆ. ಶರತ್ ಯುವರಾಜ್ ಎಂಬುವವರು ವಿಡಿಯೋದಲ್ಲಿ ಅವರ ವಿದ್ಯಾಭ್ಯಾಸದ ಬಗ್ಗೆ ಕೇಳಿದಾಗ ನಾನು ಇಂಜನಿಯರಿಂಗ್ ಮುಗಿಸಿದ್ದೇನೆ. ಮೈಂಡ್ ಟ್ರೀ ಇನ್ ಗ್ಲೋಬಲ್ ವಿಲೇಜ್ ಎಂಬಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ತಂದೆ ತಾಯಿಗಳನ್ನು ಕಳೆದುಕೊಂಡ ಮೇಲೆ ನಾನು ಕುಡಿತಕ್ಕೆ ಬಿದ್ದೆ ಎಂದು ಹೇಳಿದ್ದಾನೆ.

ಇದನ್ನೂ ಓದಿ:ಅಲೆಲೆಲೇ ಮೌನಿಕ.. ಹಳೇ ಲವ್ವರ್‌ ಮತ್ತೆ ಮೀಟ್ ಆಗೋಣ ಅಂದ್ರೆ ಹುಷಾರ್! ನಂಬಿ ಹೋದವನ ಕಥೆ ಏನಾಯ್ತು ಗೊತ್ತಾ?

Advertisment

ಈ ವಿಚಾರವಾಗಿ ಶರತ್ ಯುವರಾಜ್ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಒಟ್ಟು ಮೂರು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಜಯನಗರದ ಜೆಎಸ್​ಎಸ್​ ರೋಡ್ 8ನೇ ಕ್ರಾಸ್ ಬಳಿ ಈ ಯುವಕನನ್ನು ಕಂಡಿರುವ ಶರತ್ ತಮ್ಮ ಆಫೀಸ್​ನಲ್ಲಿ ಅಸಿಸ್ಟಂಟ್ ಆಗುವಂತೆ ಸೂಚಿಸಿದ್ದಾರೆ. ಆದ್ರೆ ಅವರ ಸಹಾಯವನ್ನು ಯುವಕ ನಿರಾಕರಿಸಿದ್ದಾನೆ. ಈ ನರಕ ಕೂಪದಿಂದ ಕಾಪಾಡಲು ಶರತ್ ಹಲವು ಎನ್​ಜಿಒಗಳ ಮೊರೆ ಹೋಗಿದ್ದಾರೆ. ವಿಡಿಯೋದಲ್ಲಿ ಮಾತನಾಡಿಸಿದ್ದ ಯುವಕನ್ನು ಹುಡುಕಲು ಶುರು ಮಾಡಿದ್ದಾರೆ ಆದ್ರೆ ಆ ವ್ಯಕ್ತಿಯ ಜಯನಗರದಲ್ಲಿ ಎಲ್ಲಿಯೂ ಕೂಡ ಕಂಡಿಲ್ಲ. ಕೊನೆಗೆ ಪೊಲೀಸರ ಮೊರೆಯೂ ಹೋಗಿರುವ ಶರತ್ ವ್ಯಕ್ತಿಯನ್ನು ಹುಡುಕಿಕೊಡುವಂತೆ ಕೋರಿದ್ದಾರೆ. ಪೊಲೀಸರು ಕೂಡ ಶರತ್ ಮನವಿಗೆ ಧನಾತ್ಮಕವಾಗಿ ಸ್ಪಂದಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment