newsfirstkannada.com

Virat Kohli: ಇಂದು ಬ್ಯಾಟ್​ ಹಿಡಿಯೋ ಕೊಹ್ಲಿ ಕೈಯಲ್ಲಿ ಅಂದಿತ್ತು ಹೊಲಿಗೆ ಯಂತ್ರ! ವಿರಾಟ್​​ಗೆ ಈ ಡ್ರೆಸ್​​ ಫೇವರಿಟ್​ ಅಂತೆ

Share :

07-09-2023

  ಇದು 76 ಶತಕದ ಒಡೆಯನ ಅನ್​​ಟೋಲ್ಡ್​​ ಸ್ಟೋರಿ..!

  2 ದಶಕದ ಹಿಂದೆ ಕಿಂಗ್​​ ಕೊಹ್ಲಿ ಲೈಫ್​​ಸ್ಟೈಲ್ ಹೇಗಿತ್ತು..?

  ಸೆಂಚುರಿ ಸಾಮ್ರಾಟನ ಫೇವರಿಟ್​ ಡ್ರೆಸ್​ ಯಾವುದು ಗೊತ್ತಾ?

ಲೆಜೆಂಡ್​​ ಕೊಹ್ಲಿಯ ಕ್ರಿಕೆಟ್​ ಯಶೋಗಾಥೆ ಎಂತವರಿಗೂ ಸ್ಫೂರ್ತಿ. ಈ ಮಾಡ್ರನ್​ ಕ್ರಿಕೆಟ್ ದೊರೆಯ ಸಾಧನೆಗಳ ಬಗ್ಗೆಯಂತೂ ಹೇಳೋದೆ ಬೇಡ. ಇಂತಹ ಮಹಾನ್ ಸಾಧಕನ ಬಗ್ಗೆ ಬಹುತೇಕರಿಗೆ ಗೊತ್ತಿರದ ಕೆಲ ಇಂಟ್ರೆಸ್ಟಿಂಗ್ ಸಂಗತಿಗಳಿವೆ. ಆ ಇನ್​ಸೈಡ್ ಸ್ಟೋರಿಯನ್ನ ಇಲ್ಲಿವೆ ಕೇಳಿ.

ಇದು ನೀವು ನೋಡಿರದ ‘ವಿರಾಟ ದರ್ಶನ’

ವಿರಾಟ್ ಕೊಹ್ಲಿ..! ಜಂಟಲ್​ಮನ್​​ ಗೇಮ್​​ನ ಚಕ್ರವರ್ತಿ..! ಈ ಚಕ್ರವರ್ತಿಯ ಮೋಡಿಗೆ ಇಡೀ ವಿಶ್ವವೇ ಮನ ಸೋತಿದೆ. ಯಾರನ್ನೇ ಕೇಳಿ ? ಎಲ್ಲಿ ಹೋಗಿ ಕೊಹ್ಲಿ ಅನ್ನೋ ಎರಡು ಅಕ್ಷರದ ಪದ ಗೊತ್ತಿಲ್ಲರೋದು ಇಲ್ಲ. ಆ ಮಟ್ಟಿಗೆ ಸೆಂಚುರಿ ಸಾಮ್ರಾಟ ತನ್ನ ಕ್ಲಾಸ್​​ & ಮಾಸ್​​ ಆಟದಿಂದ ಕ್ರಿಕೆಟ್ ದುನಿಯಾವನ್ನ ಸಂಪೂರ್ಣ ಕಬ್ಜ ಮಾಡಿದ್ದಾರೆ.

2008 ರಲ್ಲಿ ಕಿಂಗ್​​ ಕೊಹ್ಲಿಯ ಕ್ರಿಕೆಟ್​ ಜರ್ನಿ ಶೂನ್ಯದಿಂದ ಶುರುವಾಯ್ತು. 15 ವರ್ಷಗಳಲ್ಲಿ ವಿರಾಟ್ ಎಲ್ಲವನ್ನ ಸಾಧಿಸಿದ್ದಾರೆ. ಅವರ ಯಶೋಗಾಥೆ ತೆರೆದ ಪುಸ್ತವಿದ್ದಂತೆ. ಸ್ಟಾರ್​ಗಿರಿ ಪಟ್ಟದ ಜೊತೆ ಕೋಟಿ ಕುಬೇರ ಕೂಡ. ಭಾರತದ ಪಾಪ್ಯುಲರ್​ ಸೆಲಬ್ರಿಟಿಗಳಲ್ಲಿ ಕೊಹ್ಲಿ ಕೂಡ ಒಬ್ರು. ಅವರ ಲೈಫ್​ ಸ್ಟೈಲ್​​​ ಎಂತವರಿಗೂ ಕಣ್ಣು ಕುಕ್ಕುತ್ತೆ. ಆದರೆ ಇದೇ ಕೊಹ್ಲಿಯ ದಶಕದ ಹಿಂದಿನ ಲೈಫ್​ ಸ್ಟೈಲ್​ ಅದೆಷ್ಟು ಜನರಿಗೆ ಗೊತ್ತಿದೆ ಹೇಳಿ. ವಿರಾಟ್ ಈಗ ಏನಾಗಿದ್ದಾರೆ ಅನ್ನೋದು ಗೊತ್ತು. ಆದರೆ ಆರಂಭದಲ್ಲಿ ಅವರೇಗಿದ್ರು ಅನ್ನೋದು ಬಹುತೇಕರಿಗೆ ತಿಳಿದಿಲ್ಲ.

ಇಂದು ಬ್ಯಾಟ್​ ಹಿಡಿದಿರೋ ಕೈಯಲ್ಲಿ ಅಂದಿತ್ತು ಹೊಲಿಗೆ ಯಂತ್ರ

ಇದು ನಿಮಗೆ ಕೇಳೋಕೆ ಅಚ್ಚರಿ ಅನ್ನಿಸಿದ್ರೂ ಸತ್ಯ. ಇಂದು ಎಲ್ಲವನ್ನ ಸಾಧಿಸಿ, ಐಷಾರಾಮಿ ಬದುಕು ಸಾಗ್ತಿಸಿರೋ ಕೊಹ್ಲಿಯ ಆರಂಭಿಕ ದಿನಗಳಲ್ಲಿ ಬಟ್ಟೆ ಹೊಲಿತ್ತಿದ್ದರಂತೆ. ಆ ಫ್ಲ್ಯಾಶ್​​ಬ್ಯಾಕ್​​ ಕಥೆಯನ್ನ ಕಿಂಗ್ ಕೊಹ್ಲಿ ಬಾಯಲ್ಲಿ ನೀವೊಮ್ಮೆ ಕೇಳ್ಬಿಡಿ.

ನಾನು ಹೊಲಿಗೆ ಯಂತ್ರ ಬಳಸುತ್ತಿದ್ದೆ. ಹೊಲಿಗೆ ಕೂಡ ಹಾಕಿದ್ದೇನೆ. ಅದು ತುಂಬಾ ಕಷ್ಟದ ಕೆಲಸ. ಯಾಕಂದ್ರೆ ಹೊಲಿಗೆಯ ಚಕ್ರವನ್ನ ತಿರುಗಿಸುವುದು ತುಂಬಾ ಅಪಾಯಕಾರಿ. ಎಷ್ಟೋ ಬಾರಿ ಇನ್ನೇನು ಬೆರಳನ್ನ ಚುಚ್ಚುಬೇಕು ಆ ಸಮಯದಲ್ಲಿ ನಾನು ಕೈಯನ್ನ ಹಿಂದಕ್ಕೆ ತೆಗೆದುಕೊಂಡಿದ್ದೇನೆ.

ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ಕ್ರಿಕೆಟಿಗ

ಹೀಗಿತ್ತು ವಿರಾಟ್ ಕೊಹ್ಲಿಯ ಡ್ರೆಸ್ಸಿಂಗ್​ ಫ್ಯಾಶನ್.!

ಇನ್ನು ಹದಿಹರೆಯದ ವಯಸ್ಸಿನಲ್ಲಿ ಎಲ್ಲರಿಗೂ ಡಿಫರೆಂಟ್​​ ಡಿಫರೆಂಟ್​​ ಬಟ್ಟೆ ಧರಿಸೋ ಫ್ಯಾಶನ್​ ಇದ್ದೇ ಇರುತ್ತೆ.. ಕಿಂಗ್ ಕೊಹ್ಲಿ ಕೂಡ ಆ ಫ್ಯಾಶನ್​​​ನಿಂದ ಹೊರತಾಗಿಲ್ಲ. ಅವರ ಫ್ಯಾಶನ್​ ಬಗ್ಗೆ ಕೇಳಿದ್ರೆ ನೀವು ಗಾಬರಿಯಾಗೋದು ಗ್ಯಾರಂಟಿ.!

ನಾನು ಕೋರ್​ಡ್ರಾಯ್​​​ ಪ್ಯಾಂಟ್​​ ಹಾಕುತ್ತಿದ್ದೆ. ಹೀಲ್ ಲೆದರ್​ ಬೂಟುಗಳು ತುಂಬಾ ದೊಡ್ಡದಾಗಿ ಇರುತ್ತಿದ್ದವು. ಅದರ ಜೊತೆ ಪ್ರಿಂಟೆಡ್ ಶರ್ಟ್​. ಸೂಟ್​ ಧರಿಸೋದು ಬೇಡವಾಗಿತ್ತು. ನೋಡಲು ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು. ಈಗ ಆ ಚಿತ್ರಗಳನ್ನ ನೋಡಿದಾಗ ತುಂಬಾ ಮುಜುಗುರ ಅನ್ನಿಸುತ್ತೆ.

ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ಕ್ರಿಕೆಟಿಗ

ಸೆಂಚುರಿ ಸಾಮ್ರಾಟನ ಫೇವರಿಟ್​ ಡ್ರೆಸ್​ ಯಾವುದು ?

ಇನ್ನು ಕೊಹ್ಲಿಯ ಫೇವರಿಟ್​ ಫುಡ್​​ ಯಾವುದು ? ಅವರ ಫೇವರಿಟ್​ ಶಾಟ್​ ಯಾವುದು ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ 2000 ನೇ ಇಸವಿ ಸಮಯದಲ್ಲಿ ಅವರು ಯಾವ ಬಗೆಯ ಡ್ರೆಸ್​ ಅನ್ನ ಇಷ್ಟಪಡ್ತಿದ್ರು ಅನ್ನೋದನ್ನ ಕೊಹ್ಲಿನೇ ಹೇಳಿಕೊಂಡಿದ್ದಾರೆ ಕೇಳಿ.

ಎಲ್ಲರೂ ಪ್ರಿಂಟೆಡ್​​ ಶರ್ಟ್​ಗಳ ಬಗ್ಗೆ ಮಾತನಾಡುತ್ತಾರೆ. ಎಲ್ಲರೂ ಪ್ರಿಂಟೆಡ್​ ಶರ್ಟ್​ ಧರಿಸುತ್ತಿದ್ದರು. ನಾನು ಆಗ ನ್ಯೂಟ್ರಲ್ ಕಲರ್​​ ಶರ್ಟ್​ ಗಳನ್ನ ನೋಡಿರಲಿಲ್ಲ. ನನಗಿಷ್ಟವಾದ ಪ್ರಿಂಟೆಡ್​ ಶರ್ಟ್​ ಧರಿಸಲು ಶುರುಮಾಡಿದೆ. ಆ ಸಮಯದಲ್ಲಿ ಅದು ದೊಡ್ಡದು ಅನ್ನಿಸುತ್ತಿತ್ತು. ಆದರೆ ಯಾರನ್ನೂ ಮೆಚ್ಚಿಸಲು ನಾನು ಹಾಕುತ್ತಿರಲಿಲ್ಲ. ಇಷ್ಟವಾದ ಕಾರಣ ಧರಿಸುತ್ತಿದ್ದೆ. ಆಗ ಅದರ ಬಗ್ಗೆ ಸಾಕಷ್ಟು ಉತ್ಸುಕನಾಗಿದ್ದೆ.

ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ಕ್ರಿಕೆಟಿಗ

ಎರಡು ದಶಕದ ಹಿಂದೆ ಪ್ರಿಂಟೆಡ್​​ ಡ್ರೆಸ್​​ಗಳನ್ನ ಧರಿಸಿ ಮಿಂಚಿದ್ದ ಕೊಹ್ಲಿ, ಈಗ ಸ್ಟೈಲ್​ ಐಕಾನ್. ಕೊಹ್ಲಿಯನ್ನ ಕ್ರಿಕೆಟ್​​, ಫಿಟ್​ನೆಸ್​ ಹೊರತಾಗಿ ಪ್ಯಾಷನ್​ನ​ ಕಾರಣಕ್ಕೂ ಫಾಲೋ ಮಾಡೋ ಹಲವರು ನಮ್ಮ ನಡುವೆ ಇದ್ದಾರೆ. ವಿಶ್ವ ಕ್ರಿಕೆಟ್​​ ಲೋಕದ ಸಾಮ್ರಾಟನಾಗಿ ಇಡೀ ವಿಶ್ವವನ್ನೇ ಮೋಡಿ ಮಾಡಿರುವ ಪರಿಗೆ ನಿಜಕ್ಕೂ ಅಚ್ಚರಿಯ ಸಂಗತಿಯೇ.!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Virat Kohli: ಇಂದು ಬ್ಯಾಟ್​ ಹಿಡಿಯೋ ಕೊಹ್ಲಿ ಕೈಯಲ್ಲಿ ಅಂದಿತ್ತು ಹೊಲಿಗೆ ಯಂತ್ರ! ವಿರಾಟ್​​ಗೆ ಈ ಡ್ರೆಸ್​​ ಫೇವರಿಟ್​ ಅಂತೆ

https://newsfirstlive.com/wp-content/uploads/2023/09/Kohli-1-1.jpg

Load More