newsfirstkannada.com

ಒಂದೇ ಒಂದು ಚಿಪ್ಸ್‌ ತಿಂದ 14 ವರ್ಷದ ಬಾಲಕ ಸಾವು; ಏನಿದು ಒನ್ ಚಿಪ್ ಚಾಲೆಂಜ್?

Share :

Published September 13, 2023 at 9:18pm

Update September 13, 2023 at 9:20pm

    ಆತಂಕ ಸೃಷ್ಟಿಸಿದ ಒನ್‌ ಚಿಪ್ ಚಾಲೆಂಜ್ ಅನ್ನೋ ಈ ಹುಡುಗಾಟ

    ಖಾರವಾದ ಮೆಣಸಿನಿಂದ ತಯಾರಿಸೋ ಈ ಚಿಪ್ಸ್‌ ಎಷ್ಟು ಡೇಂಜರ್‌

    ಒನ್‌ ಚಿಪ್‌ ಚಾಲೆಂಜ್‌ ಪ್ರಯತ್ನಿಸಿರೋ ವಿಡಿಯೋಗಳು ವೈರಲ್

ಒನ್‌ ಚಿಪ್ ಚಾಲೆಂಜ್ ಅನ್ನೋ ಭಯಾನಕ ಆಟ ಅಮೆರಿಕಾದಲ್ಲಿ ಆತಂಕ ಸೃಷ್ಟಿಸಿದೆ. ಖಾರವಾದ ಮೆಣಸಿನಿಂದ ತಯಾರಿಸೋ ಈ ಚಿಪ್ಸ್‌ ಎಷ್ಟು ಡೇಂಜರ್‌ ಅಂದ್ರೆ ಇತ್ತೀಚೆಗೆ 14 ವರ್ಷದ ಹ್ಯಾರಿಸ್ ವೊಲೊಬಾ ಸಾವನ್ನಪ್ಪಿದ್ದಾನೆ. ಈ ಬಾಲಕ ಸಾವನ್ನಪ್ಪಿದ ಬಳಿಕ ಒನ್‌ ಚಿಪ್ ಚಾಲೆಂಜ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಒನ್‌ ಚಿಪ್‌ ಚಾಲೆಂಜ್‌ ಅನ್ನು ಪ್ರಯತ್ನಿಸಿರೋ ವಿಡಿಯೋಗಳು ವೈರಲ್ ಆಗಿದೆ.

ಪಾಕಿ ಅನ್ನೋ ಹೆಸರಿನ ಈ ಪ್ಯಾಕೆಟ್‌ನಲ್ಲಿರೋದು ಒಂದೇ ಒಂದು ಚಿಪ್ಸ್‌. ಈ ಚಿಪ್ಸ್‌ ಅನ್ನು ತಿನ್ನುವಾಗ ಬೇರೆ ಯಾವುದೇ ಆಹಾರ ಪದಾರ್ಥವನ್ನು ಸೇವಿಸುವಂತಿಲ್ಲ. ಹೀಗೆ ಬಹಳಷ್ಟು ಮಂದಿ ಈ ಚಿಪ್ಸ್ ತಿಂದು ಬಚಾವ್ ಆಗಿದ್ದಾರೆ. ಆದರೆ ಒನ್ ಚಿಪ್‌ ಚಾಲೆಂಜ್‌ನಲ್ಲಿ ಚಿಪ್ಸ್‌ ತಿಂದ ಬಾಲಕನಿಗೆ ಶಾಲೆಯಲ್ಲಿ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ಕೂಡಲೇ ಮನೆಗೆ ವಾಪಸ್ ಕಳುಹಿಸಿದ್ದು, ಬಾಲಕ ಮನೆಯಲ್ಲೇ ಸಾವನ್ನಪ್ಪಿದ್ದಾನೆ. ಇತ್ತೀಚೆಗೆ ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ನೋಡುವ ಮಕ್ಕಳು ಈ ರೀತಿಯ ಚಾಲೆಂಜ್‌ಗಳಿಗೆ ಪ್ರಭಾವಿತರಾಗುತ್ತಾರೆ. ಹೀಗಾಗಿ ಆರೋಗ್ಯವಾಗಿದ್ದ ಬಾಲಕ ಚಿಪ್ಸ್ ತಿಂದ ಬಳಿಕ ಪ್ರಾಣ ಬಿಟ್ಟಿದ್ದು, ಈ ದುರಂತಕ್ಕೆ ಒನ್ ಚಿಪ್ ಚಾಲೆಂಜ್ ಕಾರಣ ಎನ್ನಲಾಗಿದೆ.

ಪಾಕಿ ಅನ್ನೋ ಹೆಸರಿನ ಈ ಪ್ಯಾಕೆಟ್‌ ಮೇಲೆ ಕೆಂಪು ಬಣ್ಣದ ದೊಡ್ಡ ತಲೆಬುರುಡೆಯನ್ನು ವಿಷಕಾರಿ ಹಾವು ಸುತ್ತುವರಿದಿದೆ. ಇದರಲ್ಲಿರೋದು ಒಂದೇ ಒಂದು ಚಿಪ್ಸ್‌. ಇದನ್ನ ವಿಶ್ವದ ಅತ್ಯಂತ ಖಾರವಾದ ಮೆಣಸಿನಿಂದ ತಯಾರಿಸಲಾಗಿರುತ್ತೆ. ಕ್ಯಾರೊಲಿನಾ ರೀಪರ್ ಪೆಪ್ಪರ್ ಮತ್ತು ನಾಗಾ ವೈಪರ್‌ನಿಂದ ಈ ಚಿಪ್ಸ್‌ ಅನ್ನು ತಯಾರಿಸಲಾಗುತ್ತೆ. ಇವು ಜಗತ್ತಿನ ಖಾರವಾದ ಮಸಾಲೆಯುಕ್ತ ಮೆಣಸುಗಳು.

ಇದನ್ನೂ ಓದಿ: Tallest dog: ಜಗತ್ತಿನ ಅತಿ ಎತ್ತರದ ಡಾಗ್ ಜೀಯಸ್ ಇನ್ನಿಲ್ಲ.. ಗಿನ್ನೆಸ್ ದಾಖಲೆ ಬರೆದಿದ್ದ ಶ್ವಾನಕ್ಕೆ ಏನಾಯ್ತು?

ಮೆಣಸಿನ ಆಹಾರ ಸೇವಿಸಿದ್ರೆ ಹೃದಯಾಘಾತ

ಮೆಣಸಿನ ಆಹಾರಗಳು ಸಾಮಾನ್ಯವಾಗಿ ಮಾರಣಾಂತಿಕ ಅಪಾಯವನ್ನು ಉಂಟು ಮಾಡುವುದಿಲ್ಲ. ಆದರೆ ಅತಿಯಾದ ಮಸಾಲೆಯುಕ್ತ ಆಹಾರಗಳು ಜೀರ್ಣಕಾರಿ ಸಮಸ್ಯೆಗಳು ಮತ್ತು ಅಲರ್ಜಿಯ ಪ್ರತಿಕ್ರಿಯೆಗಳನ್ನು ಒಳಗೊಂಡಿವೆ. ಇದು ತೀವ್ರ ಅಸ್ವಸ್ಥತೆಯನ್ನು ಉಂಟುಮಾಡಬಹುದು. ಇದು ತಕ್ಷಣದ ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಹೃದಯ ಅಥವಾ ಮೆದುಳಿನಲ್ಲಿ ಪ್ರಭಾವ ಬೀರುವ ಅಪಾಯವಿದ್ದು ಹೃದಯಾಘಾತಕ್ಕೂ ಕಾರಣವಾಗಬಹುದು ಎನ್ನಲಾಗಿದೆ.

ಇಷ್ಟೆಲ್ಲಾ ಅಪಾಯದ ಬಳಿಕ ಪಾಕಿ ಅನ್ನೋ ಹೆಸರಿನ ಈ ಪ್ಯಾಕೆಟ್‌ ಮಾರಾಟಕ್ಕೆ ನಿರ್ಬಂಧ ಹಾಕಲಾಗುತ್ತಿದೆ. ಅಮೆರಿಕಾದ ಚಿಲ್ಲರೆ ಅಂಗಡಿಗಳು, ಅಮೆಜಾನ್, ಇ-ಬೇ ನಂತರ ಆನ್‌ಲೈನ್‌ನಲ್ಲೂ ಈ ಚಿಪ್ಸ್ ಮಾರಾಟವನ್ನು ನಿಷೇಧಿಸಲಾಗುತ್ತಿದೆ. ಒನ್ ಚಿಪ್ ಚಾಲೆಂಜ್‌ ಅನ್ನೋ ಅಪಾಯಕಾರಿ ಆಟ ಅಮೆರಿಕಾದಲ್ಲಿ ನಡೆದಿರೋದು ಇದೇ ಮೊದಲಲ್ಲ. 2016ರಲ್ಲಿ ಶುರುವಾದ ಈ ದುಸ್ಸಾಹಸ ಇದೀಗ ಮರುಕಳಿಸಿದೆ ಅಷ್ಟೇ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಒಂದೇ ಒಂದು ಚಿಪ್ಸ್‌ ತಿಂದ 14 ವರ್ಷದ ಬಾಲಕ ಸಾವು; ಏನಿದು ಒನ್ ಚಿಪ್ ಚಾಲೆಂಜ್?

https://newsfirstlive.com/wp-content/uploads/2023/09/One-Chip-Challenge.jpg

Load More