ಉಪ್ಪಾರಪೇಟೆ ಪೊಲೀಸರಿಂದ ಕಾರ್ಯಾಚರಣೆ
ಚಿತ್ರದುರ್ಗದಿಂದ ಹಣವನ್ನು ತಂದಿದ್ದ ಅಡಿಕೆ ವ್ಯಾಪಾರಿ
ಲಕ್ಷ ಲಕ್ಷ ಹಣ, 2 ಐಫೋನ್, ಚಿನ್ನಾಭರಣ ವಶಕ್ಕೆ
ಬೆಂಗಳೂರು: ಅಡಿಕೆ ವ್ಯಾಪಾರಿಯ ಒಂದು ಕೋಟಿ ಹಣ ಕಳವು ಪ್ರಕರಣವನ್ನು ಉಪ್ಪಾರಪೇಟೆ ಪೊಲೀಸರು ಭೇದಿಸಿದ್ದಾರೆ. ಸಂತೋಷ್ ಎಂಬ ವ್ಯಕ್ತಿ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ..?
ಹೆಚ್.ಎಸ್.ಉಮೇಶ್ ಅನ್ನೋರು ಅಡಿಕೆ ವ್ಯಾಪಾರಿ. ಚಿತ್ರದುರ್ಗ ಸೇರಿ ವಿವಿಧ ಜಿಲ್ಲೆಗಳಲ್ಲಿ ಅಡಿಕೆ ಖರೀದಿ ಮಾಡುತ್ತಿದ್ದರು. ಅದರಂತೆ ಅಕ್ಟೋಬರ್ 7 ರಂದು ಚಿತ್ರದುರ್ಗದಿಂದ ಅಡಿಕೆ ವ್ಯಾಪಾರ ಮಾಡುವ ಸಲುವಾಗಿ ಹಣವನ್ನು ತಂದಿದ್ದರು. ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನ ಗಾಂಧಿನಗರಕ್ಕೆ ಬಂದಿದ್ದ ವೇಳೆ ಕೃತ್ಯ ನಡೆದಿತ್ತು.
ಬ್ಯಾಗಿನಲ್ಲಿ ಬರೋಬ್ಬರಿ 1 ಕೋಟಿ ಹಣವನ್ನು ತಂದಿದ್ದರು. ಈ ಹಣವನ್ನು ಕಾರಿನ ಡಿಕ್ಕಿಯಲ್ಲಿಟ್ಟು ಊಟಕ್ಕೆಂದು ಗಾಂಧಿನಗರದ ಹೋಟೆಲ್ ಮುಂಭಾಗ ನಿಲ್ಲಿಸಿದ್ದರು. ಬಳಿಕ ಚಂದ್ರಾಲೇಔಟ್ನ ದಾಬಸ್ ಪೇಟೆ ಬಳಿ ಕಾರು ನಿಲ್ಲಿಸಿದ್ದರು. ಸಂಜೆ 7:45 ರ ವೇಳೆಗೆ ಚಿತ್ರದುರ್ಗದ ಭೀಮಸಮುದ್ರದ ಅಂಗಡಿಗೆ ತೆರಳಿ ಕಾರಿನ ಡಿಕ್ಕಿ ಪರಿಶೀಲಿಸಿದ್ದರು. ಈ ವೇಳೆ ಹಣ ಕಳವಾಗಿರೋದು ಬೆಳಕಿಗೆ ಬಂದಿತ್ತು.
ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸರಿಗೆ ಅಡಿಕೆ ವ್ಯಾಪಾರಿ ದೂರು ನೀಡಿದ್ದರು. ಅಡಿಕೆ ವ್ಯಾಪಾರಿ ಉಮೇಶ್ ದೂರಿನ ಹಿನ್ನಲೆ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ನಾಲ್ಕು ಆರೋಪಿಗಳನ್ನು ಉಪ್ಪರಪೇಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 90 ಲಕ್ಷ ಹಣ ಹಾಗೂ ಕದ್ದ ಹಣದಲ್ಲಿ ಖರೀದಿ ಮಾಡಿದ್ದ ಎರಡು ಐಫೋನ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ