newsfirstkannada.com

ಆರ್ಡರ್ ಮಾಡಿ 6 ವರ್ಷದ ಬಳಿಕ ಡೆಲಿವರಿ; ಪಾರ್ಸಲ್ ನೋಡಿ ಗ್ರಾಹಕ ಕಂಗಾಲು; ಫ್ಲಿಪ್‌ಕಾರ್ಟ್ ಹೇಳಿದ್ದೇನು?

Share :

Published June 28, 2024 at 6:10am

Update June 28, 2024 at 6:12am

    ಹಳೆಯ ಆರ್ಡರ್ ಒತ್ತಿದ್ದ ಕೆಲವೇ ಕ್ಷಣಗಳಲ್ಲಿ ಬಂತು ಕ್ಲಿಪ್‌ಕಾರ್ಟ್‌ನಿಂದ ಕರೆ

    ಮೇ 2018ರಲ್ಲಿ ಆರ್ಡರ್ ಮಾಡಿದ್ದ ಅಹ್ಮಾನ್ ಖರ್ಬಾಯಿ ಎಂಬಾತನಿಗೆ ಶಾಕ್​

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಯ್ತು ಈ ಟ್ವೀಟ್ ಏನದು?

ಈಗಂತೂ ಜನ ಕುಳಿತುಕೊಂಡರು, ನಿಂತುಕೊಂಡರು ಬರೀ ಫೋನ್​ನಲ್ಲೇ ಇರುತ್ತಾರೆ. ಆದರೆ ಅದರಲ್ಲಿ ಅರ್ಧಕ್ಕಿಂತ ಜನರು ಆನ್​​ಲೈನ್​ನಲ್ಲಿ ಶಾಪಿಂಗ್​​ ಮಾಡುವುದರಲ್ಲೇ ಕಾಲ ಕಳೆಯುತ್ತಾರೆ. ಅದರಲ್ಲೂ ಬಹುತೇಕರು ತಮಗೆ ಬೇಕಾದ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಮನೆಬಾಗಿಲಿಗೆ ತರಿಸಿಕೊಂಡಿರುವುದನ್ನು ನೋಡಿರುತ್ತೇವೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್‌ಗೆ ₹40 ಲಕ್ಷ ಕೊಟ್ಟ ರಹಸ್ಯ.. ಪೊಲೀಸರಿಗೆ ಮಹತ್ವದ ಸುಳಿವು; ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್!

ಆದರೆ ಹೀಗೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್​ನಲ್ಲಿ ವ್ಯಕ್ತಿಯೊಬ್ಬ ಆರ್ಡರ್ ಮಾಡಿದ್ದು ಸುಮಾರು ಆರು ವರ್ಷಗಳ ನಂತರ ಬಂದು ತಲುಪಿದೆ. ಹೌದು, ಇದು ಅಚ್ಚರಿ ಎನಿಸಬಹುದು. ಆದರೆ ಇದು ನಡೆದ ನಿಜ ಘಟನೆಯಾಗಿದೆ. ಮುಂಬೈನ ಅಹ್ಮಾನ್ ಖರ್ಬಾಯಿ ಎಂಬುವವರು ಪ್ಲಿಪ್‌ಕಾರ್ಟ್​ನಲ್ಲಿ ಮೇ 2018ರಲ್ಲಿ ಸ್ಪಾರ್ಕ್ಸ್ ಚಪ್ಪಲಿಗಳನ್ನು ಆರ್ಡರ್ ಮಾಡಿದ್ದರು. ಆದರೆ ಆ ಚಪ್ಪಲಿ ಬರೋಬ್ಬರಿ ಆರು ವರ್ಷ ಕಳೆದರೂ ಇನ್ನೂ ಬಂದಿರಲಿಲ್ಲ. ಹೀಗೆ ಅಹ್ಮಾನ್ ಖರ್ಬಾಯಿ ಅವರು ತಾವು 2018ರಲ್ಲಿ ಆರ್ಡರ್ ಮಾಡಿದ್ದನ್ನು ಕ್ಲಿಕ್ ಮಾಡಿದ್ದಾರೆ.

ಆಗ ಕೆಲವೇ ಕ್ಷಣಗಳಲ್ಲಿ ಕ್ಲಿಪ್‌ಕಾರ್ಟ್‌ನಿಂದ ಕರೆ ಬಂದಿದೆ. ಬಳಿಕ ನೀವು ಯಾವ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂದು ಕೇಳಿದ್ದಾರಂತೆ. ಈ ಬಗ್ಗೆ ಖುದ್ದು ಅಹ್ಮಾನ್ ಖರ್ಬಾಯಿ ಅವರೇ ಟ್ವೀಟ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಜೊತೆಗೆ ಈ ಹಿಂದೆ ಆರ್ಡರ್ ಮಾಡಿದ್ದ ಹಿಸ್ಟ್ರಿಯ ಸ್ಟೀನ್‌ಶಾಟ್ ಹಾಕಿದ್ದು, ಇದು ಎಲ್ಲೆಡೆ ವೈರಲ್‌ ಆಗಿದೆ. ಇನ್ನು ಇದೇ ಪೋಸ್ಟ್​ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್ಡರ್ ಮಾಡಿ 6 ವರ್ಷದ ಬಳಿಕ ಡೆಲಿವರಿ; ಪಾರ್ಸಲ್ ನೋಡಿ ಗ್ರಾಹಕ ಕಂಗಾಲು; ಫ್ಲಿಪ್‌ಕಾರ್ಟ್ ಹೇಳಿದ್ದೇನು?

https://newsfirstlive.com/wp-content/uploads/2024/06/flipkart.jpg

Load More