newsfirstkannada.com

ಮೌನಂ ಶರಣಂ ಗಚ್ಚಾಮಿ; ಮುರುಘಾಮಠದಲ್ಲಿ ಬಸವಪ್ರಭು ಸ್ವಾಮೀಜಿಯವರಿಂದ ಒಂದು ದಿನದ ಮೌನವ್ರತ

Share :

25-06-2023

    ಶ್ರೀ ಬಸವಪ್ರಭು ಸ್ವಾಮೀಜಿ ಒಂದು ದಿನದ ಮೌನವ್ರತ ಆಚರಣೆ

    ಇಂದು ಮುಂಜಾನೆ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿದ ಬಳಿಕ ಧ್ಯಾನ

    ಬಂದ ಭಕ್ತರಿಗೆ ಶಾಂತವಾಗಿ ಎಲ್ಲರಿಗೂ ಹಸನ್ಮುಖದಿಂದ ಆಶೀರ್ವಾದ

ಚಿತ್ರದುರ್ಗ: ಮುರುಘಾಮಠದಲ್ಲಿ ಇಂದು ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಒಂದು ದಿನದ ಮೌನವ್ರತ ಆಚರಣೆ ಮಾಡಿದ್ದಾರೆ. ಎಂದಿನಂತೆ ಮುಂಜಾನೆ ಶ್ರೀಮಠದಲ್ಲಿ ಕರ್ತೃ ಗದ್ದುಗೆಗೆ ಪೂಜೆಯನ್ನು ಸಲ್ಲಿಸಿ, ಅಲ್ಲಿಯೇ ಸ್ವಲ್ಪ ಸಮಯದವರೆಗೆ ಧ್ಯಾನವನ್ನು ಮಾಡಿ ನಂತರ ಮೌನವಾಗಿದ್ದು ಗ್ರಂಥಗಳ ಅಧ್ಯಯನ ಮಾಡಿದರು.

ಮೌನವ್ರತ ಆಚರಿಸಿದ ಶ್ರೀ ಬಸವಪ್ರಭು ಸ್ವಾಮೀಜಿ ಯಾರಾದರೂ ಭಕ್ತರು ದರ್ಶನಕ್ಕಾಗಿ ಬಂದರೆ ಅವರಿಗೆ ಮೌನವಾಗಿಯೇ ಆಶೀರ್ವಾದ ನೀಡಿದರು. ಇವತ್ತು ಒಂದು ದಿನ ಪೂರ್ತಿಯಾಗಿ ಮೌನವಾಗಿರುವ ಬಗ್ಗೆ ಸ್ವಾಮೀಜಿ ಅವರು ನಿನ್ನೆ ದಿನ ತಮ್ಮ ವಾಟ್ಸಾಪ್ ಮತ್ತು ಫೇಸ್‌ಬುಕ್‌ನಲ್ಲಿ ಮೌನಂ ಶರಣಂ ಗಚ್ಚಾಮಿ ಎಂಬ ಸಂದೇಶವನ್ನು ಬರೆದಿದ್ದರು.

ಇವತ್ತು ದರ್ಶನಕ್ಕಾಗಿ ಸ್ಥಳೀಯ ಶಾಸಕರಾದ ಕೆ.ಸಿ ವೀರೇಂದ್ರ ಪಪ್ಪಿಯವರು ಮತ್ತು ನೂರಾರು ಭಕ್ತರು ಸೇರಿ ಯಾರೇ ದರ್ಶನಕ್ಕೆ ಬಂದರೂ ಕೂಡ ತಮ್ಮ ಮೌನವ್ರತವನ್ನು ಸ್ವಾಮೀಜಿ ಬಿಡಲಿಲ್ಲ. ಸ್ವಾಮೀಜಿ ತುಂಬಾ ಶಾಂತವಾಗಿ ಎಲ್ಲರಿಗೂ ಹಸನ್ಮುಖದಿಂದ ಶುಭ ಹಾರೈಸಿದರು. ಸ್ವಾಮೀಜಿ ಆಸೀನರಾದ ಜಾಗದಲ್ಲಿ ಇವತ್ತು ನಾನು ಮೌನವಾಗಿದ್ದೇನೆ ಎಂಬ ಸಂದೇಶವಿದ್ದುದ್ದರಿಂದ ಭಕ್ತರು ಆ ಸಂದೇಶವನ್ನು ನೋಡಿ, ಅವರು ಮೌನವಾಗಿ ಸ್ವಾಮೀಜಿಯವರಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮೌನಂ ಶರಣಂ ಗಚ್ಚಾಮಿ; ಮುರುಘಾಮಠದಲ್ಲಿ ಬಸವಪ್ರಭು ಸ್ವಾಮೀಜಿಯವರಿಂದ ಒಂದು ದಿನದ ಮೌನವ್ರತ

https://newsfirstlive.com/wp-content/uploads/2023/06/Chitradurga-Murugha-Mutta.jpg

Load More