newsfirstkannada.com

3 ತಿಂಗಳ ಹಿಂದೆ ಪ್ರಧಾನಿ ಮೋದಿ ಉದ್ಘಾಟಿಸಿದ್ದ ಟರ್ಮಿನಲ್ ಕುಸಿತ; ಓರ್ವ ಸಾವು, ಹಲವರ ಸ್ಥಿತಿ ಗಂಭೀರ

Share :

Published June 28, 2024 at 9:31am

  ಮೇಲ್ಛಾವಣಿ ಕಂಬಗಳ ಅವಶೇಷಗಳಡಿ ಸಿಲುಕಿದ ನಾಲ್ಕು ಮಂದಿ

  ಕ್ರೇನ್, ಅಗ್ನಿ ಶಾಮಕ ದಳದ ವಾಹನಗಳಿಂದ ಭರದ ರಕ್ಷಣಾ ಕಾರ್ಯ

  ಮೂರು ತಿಂಗಳ ಹಿಂದಷ್ಟೇ ಪ್ರಧಾನಿ ಮೋದಿ ಉದ್ಘಾಟಿಸಿದ್ದ ಟರ್ಮಿನಲ್

ದೆಹಲಿ ಏರ್‌ಪೋರ್ಟ್‌ನ‌ ಟರ್ಮಿನಲ್ ಒಂದರಲ್ಲಿ ಮೇಲ್ಛಾವಣಿ, ಕಂಬಗಳು ಕುಸಿದು ಬಿದ್ದಿದ್ದು, ಭಾರೀ ಅನಾಹುತ ಸಂಭವಿಸಿದೆ. ಈ ದುರಂತದಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಮೇಲ್ಛಾವಣಿ ಕಂಬಗಳ ಅವಶೇಷಗಳಡಿ ಸಿಲುಕಿದ ನಾಲ್ಕೈದು ಮಂದಿಗೆ ಗಂಭೀರ ಗಾಯಗಳಾಗಿದೆ.

ಟರ್ಮಿನಲ್ ಒಂದರ ನಿರ್ಗಮನ ದ್ವಾರದ ಬಳಿಯ ಮೇಲ್ಚಾವಣಿ, ಕಂಬಗಳು ಕುಸಿದಿವೆ. ಕಾರುಗಳ ಮೇಲೆ ಮೇಲ್ಛಾವಣಿ ಬಿದ್ದಿದಿದ್ದರಿಂದ ಏರ್‌ಪೋರ್ಟ್‌ನಲ್ಲಿದ್ದ ಅನೇಕ ಕಾರುಗಳು ಸಂಪೂರ್ಣ ಜಖಂ ಆಗಿವೆ. ಸ್ಥಳಕ್ಕೆ ಬಂದ ಕ್ರೇನ್, ಅಗ್ನಿ ಶಾಮಕ ದಳದ ವಾಹನಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.

28 ವಿಮಾನಗಳ ಸಂಚಾರ ದಿಢೀರ್ ರದ್ದು!
ಮೇಲ್ಛಾವಣಿ ಕುಸಿದ ಹಿನ್ನೆಲೆಯಲ್ಲಿ ದೆಹಲಿ ಏರ್‌ಪೋರ್ಟ್ ಟರ್ಮಿನಲ್ ಒಂದರ ವಿಮಾನ ಸಂಚಾರ ರದ್ದು ಮಾಡಲಾಗಿದೆ. ದೆಹಲಿ ವಿಮಾನ ನಿಲ್ದಾಣಕ್ಕೆ ಬರುವ 12, ಹೊರಡುವ 16 ವಿಮಾನಗಳ ಸಂಚಾರ ಕ್ಯಾನ್ಸಲ್‌ ಮಾಡಲಾಗಿದೆ. ಟರ್ಮಿನಲ್ 2, 3ರಲ್ಲಿ ಎಂದಿನಂತೆ ವಿಮಾನಗಳ ಸಂಚಾರ ಮುಂದುವರಿದಿದೆ.

ಇದನ್ನೂ ಓದಿ: BREAKING: ದೆಹಲಿ ಏರ್‌ಪೋರ್ಟ್‌ ಟರ್ಮಿನಲ್ 1ನಲ್ಲಿ ಭಾರೀ ಅನಾಹುತ; 6 ಮಂದಿ ಸ್ಥಿತಿ ಗಂಭೀರ 

ಮೋದಿ ಉದ್ಘಾಟಿಸಿದ್ದ ಟರ್ಮಿನಲ್!
ಇತ್ತೀಚೆಗಷ್ಟೇ ದೆಹಲಿ ಏರ್‌ಪೋರ್ಟ್‌ನ ಟರ್ಮಿನಲ್ 1 ಅನ್ನು ನವೀಕರಣ ಮಾಡಲಾಗಿತ್ತು. ಕಳೆದ ಮಾರ್ಚ್‌ನಲ್ಲಿ ಏರ್‌ಪೋರ್ಟ್ ಟರ್ಮಿನಲ್ 1 ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಮೂರೇ ತಿಂಗಳಿಗೆ ಮೇಲ್ಛಾವಣಿ ಕುಸಿದು ಬಿದ್ದಿದೆ.

ಮುಂಗಾರಿನ ಮೊದಲ ಮಳೆ
ಕಳೆದ 2 ದಿನದ ಹಿಂದಷ್ಟೇ ಉತ್ತರ ಭಾರತಕ್ಕೆ ಮುಂಗಾರು ಮಳೆ ಎಂಟ್ರಿ ಕೊಟ್ಟಿದೆ. ಮೊದಲ ಮಳೆಗೆ ಉತ್ತರ ಭಾರತದಲ್ಲಿ ಏರ್‌ಪೋರ್ಟ್ ಮೇಲ್ಛಾವಣಿಗಳು ಕುಸಿದಿದೆ. ಮಧ್ಯಪ್ರದೇಶದ ಜಬಲಪುರ ಏರ್‌ಪೋರ್ಟ್‌ನ ಮೇಲ್ಛಾವಣಿ ಕುಸಿದಿತ್ತು. ಇದೀಗ ದೆಹಲಿಯ ಟರ್ಮಿನಲ್ 1ರ ಮೇಲ್ಚಾವಣಿ ಕುಸಿದು ಬಿದ್ದಿದೆ. ಮುಂದಿನ 7 ದಿನಗಳ ದೆಹಲಿಯಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ತಿಂಗಳ ಹಿಂದೆ ಪ್ರಧಾನಿ ಮೋದಿ ಉದ್ಘಾಟಿಸಿದ್ದ ಟರ್ಮಿನಲ್ ಕುಸಿತ; ಓರ್ವ ಸಾವು, ಹಲವರ ಸ್ಥಿತಿ ಗಂಭೀರ

https://newsfirstlive.com/wp-content/uploads/2024/06/Delhi-Airport-1.jpg

Load More