newsfirstkannada.com

ಪಟಾಕಿ ಸಿಡಿದು ಓರ್ವ ಸಾವು; ಮೂವರು ಮಕ್ಕಳು ಸೇರಿ ಮತ್ತೋರ್ವ ಗಂಭೀರ

Share :

15-11-2023

  ಕಲ್ಲು ಆಟಂಬಾಂಬ್ ಪಟಾಕಿ ಸಿಡಿದು ದುರ್ಘಟನೆ

  ಚೇರ್ ಕೆಳಗೆ ಪಟಾಕಿಯನ್ನ ಇಟ್ಟುಕೊಂಡು ಕೂತಿದ್ದ ಯುವಕ

  ಪಟಾಕಿ ಸಿಡಿದ ರಭಸಕ್ಕೆ ನೆಲದಿಂದ 5 ಅಡಿ ಹಾರಿ ಬಿದ್ದು ಸಾವು

ಚಿಕ್ಕಮಗಳೂರು: ಪಟಾಕಿ ಸಿಡಿದು ಓರ್ವ ಯುವಕ ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರಿನ ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರದೀಪ್ (30) ಸಾವನ್ನಪ್ಪಿರುವ ದುರ್ದೈವಿ.

ಪ್ರದೀಪ್ ಚೇರ್ ಕೆಳಗೆ ಕಲ್ಲು ಆಟಂಬಾಂಬ್ ಪಟಾಕಿಯನ್ನ ಇಟ್ಟುಕೊಂಡು ಕೂತಿದ್ದ ಯುವಕ ಪಟಾಕಿ ಸಿಡಿದ ರಭಸಕ್ಕೆ ನೆಲದಿಂದ 5 ಅಡಿ ಹಾರಿ ಬಿದ್ದು ಸಾವನ್ನಪ್ಪಿದ್ದಾನೆ. ದೇಹದ ಸೂಕ್ಷ್ಮ ಜಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಕಾರಣ ಪ್ರದೀಪ್ ಸಾವನ್ನಪ್ಪಿದ್ದಾನೆ.

ಇನ್ನು ಪ್ರದೀಪ್​ ಜೊತೆಗಿದ್ದ ಮತ್ತೋರ್ವ ಯುವಕ ಹಾಗೂ ಮೂವರು ಮಕ್ಕಳಿಗೆ ಗಂಭೀರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಟಾಕಿ ಸಿಡಿದು ಓರ್ವ ಸಾವು; ಮೂವರು ಮಕ್ಕಳು ಸೇರಿ ಮತ್ತೋರ್ವ ಗಂಭೀರ

https://newsfirstlive.com/wp-content/uploads/2023/11/Chikamagaluru.jpg

Load More