newsfirstkannada.com

ಹೈವೇನಲ್ಲಿ ಎಣ್ಣೆ ಹೊಡೆದು ಯುವಕನ ಹುಚ್ಚಾಟ; ಭೀಕರ ಕಾರ್​ ಅಪಘಾತ​​; ಸ್ಥಳದಲ್ಲೇ ಸಾವು..!

Share :

27-10-2023

  ಯುವಕನ ಹುಚ್ಚಾಟ.. ಪ್ರಾಣಕ್ಕೆ ತಂತು ಸಂಕಟ

  ಯುವಕನ ಹುಚ್ಚಾಟ.. ಪ್ರಾಣಕ್ಕೆ ತಂತು ಸಂಕಟ

  ನಡು ರಸ್ತೆಯಲ್ಲಿ ನಿಂತು ಕೈ ಬೀಸ್ತಾ ಹುಚ್ಚಾಟ..!

ಡೆಹ್ರಾಡೂನ್: ಮದ್ಯದ ಅಮಲೋ ಏನೋ ಪತಂಗದಂತೆ ರೋಡ್​ ಮಧ್ಯೆ ಹಾರಾಡ್ತಿದ್ದಾನೆ ಈ ಯುವಕ. ಸದ್ಯ ಇದೇ ಹುಚ್ಚಾಟ ಅಪಘಾತಕ್ಕೆ ದಾರಿಮಾಡಿಕೊಟ್ಟಿದೆ. ನಡು ರಸ್ತೆಯಲ್ಲಿ ಮಂಗನಾಟ ಮಾಡಿದವನಿಗೆ ಯಮ ಕಾರಿನ ರೂಪದಲ್ಲಿ ದರ್ಶನ ಕೊಟ್ಟಿದ್ದಾನೆ.

ಯುವಕನೋರ್ವ ಡೆಹ್ರಾಡೂನ್-ಋಷಿಕೇಶ್ ಹೆದ್ದಾರಿಯಲ್ಲಿ ಮೋಜು ಮಾಡಿಕೊಂಡು ಹೋಗ್ತಿದ್ದ. ರಸ್ತೆ ಮಧ್ಯೆ ನಿಂತು ಕೈ ಬೀಸ್ತಾ ಹುಚ್ಚಾಟ ಪ್ರದರ್ಶಿಸ್ತಿದ್ದ. ಈ ವೇಳೆ ಹೆದ್ದಾರಿಯಲ್ಲಿ ವೇಗವಾಗಿ ಬಂದ ಹುಂಡೈ ಐ-10 ಕಾರು ರಸ್ತೆ ಮಧ್ಯೆ ನಿಂತಿದ್ದ ಯುವಕನಿಗೆ ಡಿಕ್ಕಿ ಹೊಡೆದಿದೆ.

ಇದರ ಪರಿಣಾಮ ಯುವಕ ಗಾಳಿಯಲ್ಲಿ ಹಾರಿ ಬಿದ್ದಿದ್ದಾನೆ. ಹಾಗಾಗಿ ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ, ಮೃತ ಯುವಕನನ್ನ ಶಿವಂ ಎಂದು ಗುರುತಿಸಿಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು, ಡಿಕ್ಕಿ ಹೊಡೆದ ಕಾರಿಗಾಗಿ ಶೋಧ ನಡೆಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೈವೇನಲ್ಲಿ ಎಣ್ಣೆ ಹೊಡೆದು ಯುವಕನ ಹುಚ್ಚಾಟ; ಭೀಕರ ಕಾರ್​ ಅಪಘಾತ​​; ಸ್ಥಳದಲ್ಲೇ ಸಾವು..!

https://newsfirstlive.com/wp-content/uploads/2023/10/Death-case.jpg

Load More