newsfirstkannada.com

ಯುವತಿ ಮೇಲೆ ಮೋಹ; ಸಹಕರಿಸಲಿಲ್ಲ ಎಂದು ಕೊಂದೇ ಬಿಟ್ಟ; ಈ ಹಂತಕ ಸಿಕ್ಕಿಬಿದ್ದಿದ್ದು ರೋಚಕ!

Share :

13-08-2023

    ಆಕೆಗೆ ಕೇವಲ 21 ವರ್ಷ, ಪೆಟ್ರೋಲ್​ ಬಂಕ್​​ ಉದ್ಯೋಗಿ!

    ಬರೋ ಸಂಬಳದಲೇ ಖುಷಿಯಾಗಿ ಜೀವನ ಮಾಡುತ್ತಿದ್ದಳು

    ಅಡುಗೆಗೆ ಇಟ್ಟು ಮನೆಯಿಂದ ಹೊರಗೆ ಬಂದಿದ್ದೇ ತಪ್ಪಾಯ್ತು!

ಬೆಂಗಳೂರು: ಆಕೆ ಹೆಸರು ಮಹಾನಂದ, 21 ವರ್ಷ ವಯಸ್ಸು. ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುತ್ತಾ ಖುಷಿಯಿಂದಲೇ ಜೀವನ ಸಾಗಿಸುತ್ತಿದ್ದಳು. 10ನೇ ತಾರೀಖು ರಾತ್ರಿ ಸುಮಾರು 8 ಗಂಟೆಗೆ ಮಿಸ್ ಆಗುತ್ತಾಳೆ. ಆಕೆಯ ಪೋಷಕರು ಮಿಸ್ಸಿಂಗ್ ಕಂಪ್ಲೇಂಟ್​ ಕೂಡ ಕೊಡುತ್ತಾರೆ. ಆದ್ರೆ, ಮಿಸ್ ಆಗಿದ್ದವಳು ಮಾರನೇ ದಿನ ಪತ್ತೆಯಾಗುತ್ತಾಳೆ. ಜೀವಂತವಾಗಿ ಅಲ್ಲ, ಶವವಾಗಿ!

ಕಳೆದ ಗುರುವಾರ ರಾತ್ರಿ ಮನೆಯಲ್ಲಿ ಅಡುಗೆ ಮಾಡೋಕೆ ಸ್ಟವ್​ ಮೇಲೆ ಅನ್ನದ ಪಾತ್ರೆ ಕೂಡ ಇಟ್ಟಿದ್ದಳು. ಆದ್ರೆ, ಮನೆಯವರು ಮನೆಗೆ ಬಂದು ನೋಡೋ ಅಷ್ಟ್ರಲ್ಲಿ ಆಕೆ ನಾಪತ್ತೆಯಾಗಿದ್ದಳು. ಒಲೆ ಮೇಲೆ ಇಟ್ಟಿದ್ದ ಅಕ್ಕಿ ಬೇಯುತ್ತಿತ್ತು. ಆದ್ರೆ, ಆಕೆ ಮಾತ್ರ ಎಲ್ಲೂ ಕಾಣಿಸಲಿಲ್ಲ. ಪೋಷಕರು ಕೊಟ್ಟ ಮಿಸ್ಸಿಂಗ್ ಕಂಪ್ಲೇಂಟ್ ಆಧಾರದ ಮೇಲೆ ಮಹದೇವಪುರ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆಕೆಯ ಶವ ಆಕೆಯ ಮನೆ ಮುಂದೆ ಬಿದ್ದಿರುತ್ತೆ.

ಇನ್ನು, ಈ ಕೇಸ್ ಬೆನ್ನು ಬಿದ್ದ ಪೊಲೀಸರಿಗೆ ಒಂದು ಮೇಜರ್ ಕ್ಲೂ ಸಿಗುತ್ತೆ. ಆದೇ ಆಕೆಯ ಪಾದ. ಆಕೆಯ ಪಾದ ತುಂಬಾನೇ ಕ್ಲೀನಾಗಿರುತ್ತೆ. ಅಂದ್ರೆ, ಪೊಲೀಸರ ಪ್ರಕಾರ ಹಂತಕ ಸುತ್ತಾ ಮುತ್ತಾ ಇದ್ದಾನೆ ಅನ್ನೋದು ಕನ್ಫರ್ಮ್​. ವಿಚಾರಣೆ ನಡೆಸಿದಾಗ ಪೊಲೀಸರಿಗೆ ಕಾಣಿಸಿದ್ದು, ಅದೊಂದು ಮನೆ. ಮನೆ ಹತ್ತಿರ ಕೊಲೆ ನಡೆದಿದ್ರೂ, ಆ ಮನೆಯವರು ಮಾತ್ರ ಬಾಗಿಲು ಓಪನ್ ಮಾಡಿರ್ಲಿಲ್ಲ.

ಯೆಸ್​​, ಪೊಲೀಸರಿಗೆ ಡೌಟ್ ಬಂದು ಆ ಮನೆ ಬಾಗಿಲು ಓಪನ್ ಮಾಡ್ತಾರೆ. ಆಗ ಸಿಕ್ಕವನೇ ಈ ಕೃಷ್ಣಾ ಚಂದ ಸೇಟಿ. ಇವನ ಚಲನವಲನದ ಮೇಲೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಗೊತ್ತಾಗಿದ್ದು ಈತ ಮಾಡಿದ ಘನ ಘೋರ ಕೃತ್ಯ.

ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಮಹಾನಂದ ಆಚೆ ಬಂದಿದ್ದಳು. ಇನ್ನು, ಆಕೆಯನ್ನ ನೋಡುತ್ತಿದ್ದ ಕೃಷ್ಣಾ ಬಲವಂತವಾಗಿ ತನ್ನ ಮನೆಗೆ ಎಳೆದುಕೊಂಡು ಹೋಗಿದ್ದಾನೆ. ಬಲತ್ಕಾರ ಮಾಡೋಕೆ ಟ್ರೈ ಮಾಡಿದ್ದಾನೆ. ಆದ್ರೆ, ಹಿಂಸೆ ತಾಳಲಾರದೆ ಕಿರುಚುತ್ತಿದ್ದ ಮಹಾನಂದಾಳನ್ನ ಕತ್ತು ಹಿಸುಕಿ ಕೊಲೆ ಮಾಡ್ಬಿಟ್ಟಿದ್ದಾನೆ ಈ ಪಾಪಿ. ಬಳಿಕ ಅಲ್ಲೆ ಇದ್ದ ಡ್ರಮ್​ನಲ್ಲಿ ಶವವನ್ನ ಬಚ್ಚಿಟ್ಟಿದ್ದಾನೆ.

ಕೊಲೆ ಮಾಡಿ ಹೆಂಡತಿ ಮುಂದೆ ಬಾಯಿಬಿಟ್ಟ

ಇನ್ನು, ಕೆಲಸ ಮುಗಿಸಿ ಮನೆಗೆ ಬಂದ ಹೆಂಡತಿಗೆ ಕೊಲೆ ಮಾಡಿರುವ ಸತ್ಯ ಬಾಯ್ಬಿಟ್ಟಿದ್ದಾನೆ. ಜೊತೆಗೆ ಸುಳ್ಳು ಪುರಾಣ ಹೇಳಿದ್ದಾನೆ. ಅವಳು ನನಗೆ ಐ ಲವ ಯೂ ಅಂದಳು. ಕಿಸ್ ಮಾಡೋದಕ್ಕೆ ಬಂದಳು. ಅದಕ್ಕೆ ಕೊಲೆ ಮಾಡಿದೆ ಎಂದಿದ್ದಾನೆ. ಬಳಿಕ ಯಾರೂ ಇಲ್ಲದ ಸಮಯ ನೋಡಿ ನಸುಕಿನ ಜಾವ 5 ಗಂಟೆಗೆ ಆಕೆ ಮನೆ ಮುಂದೆ ಬಿಸಾಕಿ ಮನೆಯೊಳಗೆ ಸೇರ್ಕೊಂಡಿದ್ದಾನೆ.

ಒಟ್ಟಾರೆ, ಕೊಲೆ ಮಾಡಿದ ಆರೋಪಿ ಲಾಕ್ ಆಗಿದ್ದಾನೆ. ತಪ್ಪು ಮಾಡಿದ್ದಕ್ಕೆ ಶಿಕ್ಷೆ ಸಿಕ್ಕೇ ಸಿಗುತ್ತೆ. ಆದ್ರೆ, ಏನೂ ತಪ್ಪು ಮಾಡದ ಆ ಹೆಣ್ಣು ಬಲಿಯಾಗಿದ್ದು ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವತಿ ಮೇಲೆ ಮೋಹ; ಸಹಕರಿಸಲಿಲ್ಲ ಎಂದು ಕೊಂದೇ ಬಿಟ್ಟ; ಈ ಹಂತಕ ಸಿಕ್ಕಿಬಿದ್ದಿದ್ದು ರೋಚಕ!

https://newsfirstlive.com/wp-content/uploads/2023/08/Crime_098.jpg

Load More