ಹಳೇ ಸೇಡಿಗೆ ಬೆಂಗಳೂರು ನಗರದಲ್ಲಿ ಬಿತ್ತು ಹೆಣ
ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಘಟನೆ
ಹೆಬ್ಬಗೋಡಿಯ ನಿವಾಸಿ ರಮೇಶ್ ಕೊಲೆಯಾದ ವ್ಯಕ್ತಿ
ಬೆಂಗಳೂರು: ಬೇಗ ಕಂಬಿ ಕಟ್ಟಿ.. ನಾಳೆ ಬೆಳಗ್ಗೆ ಮೇಸ್ತ್ರಿ ಬರ್ತಾರೆ.. ಅವರು ಬರೋದ್ರೊಳಗೆ ಎಲ್ಲಾ ರೆಡಿ ಇರಬೇಕು ಎಂದು ಮನೆ ಕಟ್ಟಿಸುತ್ತಿರೋ ಮಾಲೀಕ ಹೇಳ್ತಿದ್ದ. ಅದಕ್ಕೆ ತಕ್ಕಂತೆ ಕೂಲಿಗಳು ತರಾತುರಿಯಲ್ಲಿ ಕೆಲಸ ಮಾಡ್ತಿದ್ರು. ಆಗ ಪಕ್ಕದ ರೂಮ್ನಲ್ಲೇ ಅಡಗಿ ಕೂತಿದ್ದ ಆ ಮೂವರು ಏಕಾಏಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಿದ್ರು.
ಹೌದು, ಹೀಗೆ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆಗೈದ ಭಯಾನಕ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ. ಹಳೇ ವೈಷಮ್ಯದ ಸೇಡಿಗೆ ಈ ಕೊಲೆ ಮಾಡಲಾಗಿದೆ.
ಹೆಬ್ಬಗೋಡಿ ನಿವಾಸಿ ರಮೇಶ್ ಎಂಬ ವ್ಯಕ್ತಿಯನ್ನ, ಕೃಷ್ಣಪ್ಪ ಅಲಿಯಾಸ್ ಜೋಸೆಫ್, ಮೋಸಿಸ್ ಹಾಗೂ ಜಗದೀಶ್ ಎಂಬುವವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಕೊಲೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ